Home latest Amarnath Yatra: ಅಮರನಾಥ್ ಯಾತ್ರೆಗೆ ಕ್ಷಣಗಣನೆ, ಹೀಗೆ ಮಾಡಿ, ನಿಮ್ಮ ಟಿಕೆಟ್ ಆನ್ ಲೈನ್ ನಲ್ಲಿ...

Amarnath Yatra: ಅಮರನಾಥ್ ಯಾತ್ರೆಗೆ ಕ್ಷಣಗಣನೆ, ಹೀಗೆ ಮಾಡಿ, ನಿಮ್ಮ ಟಿಕೆಟ್ ಆನ್ ಲೈನ್ ನಲ್ಲಿ ಬುಕ್ ಮಾಡ್ಕೊಳ್ಳಿ

Amarnath Yatra

Hindu neighbor gifts plot of land

Hindu neighbour gifts land to Muslim journalist

Amarnath Yatra: ಅಮರನಾಥ ಯಾತ್ರೆಗೆ (Amarnath Yatra)ಹೋಗಲು ಇಚ್ಛಿಸುವ ಯಾತ್ರಾರ್ಥಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿ ವರ್ಷ 62-ದಿನಗಳ ಕಾಲ ನಡೆಯಲಿರುವ ಶ್ರೀ ಅಮರನಾಥ ಯಾತ್ರೆಯು ಜರುಗಲಿದ್ದು, ಈ ಯಾತ್ರೆಯಲ್ಲಿ ಪಾಲೊಳ್ಳಲು ಇಂದಿನಿಂದ ಆನ್‌ಲೈನ್ ನೋಂದಣಿ (Amarnath YatraRegistration2023) ಪ್ರಾರಂಭವಾಗಿದೆ.

ಪ್ರತಿ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ 62-ದಿನಗಳ ಕಾಲ ನಡೆಯಲಿರುವ ಶ್ರೀ ಅಮರನಾಥ ಯಾತ್ರೆಯು ಸದ್ಯದಲ್ಲೇ ನಡೆಯಲಿದೆ. 3,880 ಮೀಟರ್ ಎತ್ತರದಲ್ಲಿರುವ ದಕ್ಷಿಣ ಕಾಶ್ಮೀರ ಅಮರನಾಥ ದೇವಾಲಯದಲ್ಲಿ ಪ್ರತಿ ವರ್ಷ ಅದ್ದೂರಿ ಪೂಜೆ ಜರುಗುತ್ತದೆ. ಶ್ರೀ ಅಮರನಾಥಜಿ ಶ್ರೈನ್ ಬೋರ್ಡ್ (SASB) ಪೂಜೆ ಹಾಗೂ ಯಾತ್ರೆಯ ಕುರಿತಂತೆ ಭಕ್ತರಿಗೆ ಬೆಳಿಗ್ಗೆ ಮತ್ತು ಸಂಜೆ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಯಾತ್ರೆಯು ಜುಲೈ 1ರಿಂದ ಆಗಸ್ಟ್ 31 ರವರೆಗೆ ನಡೆಯಲಿದೆ ಎಂದು ಕೇಂದ್ರಾಡಳಿತ ಪ್ರದೇಶದ ಸರ್ಕಾರ ಮಾಹಿತಿ ನೀಡಿದೆ. ಇದಕ್ಕಾಗಿ ಆನ್‌ಲೈನ್ ನೋಂದಣಿ ಪ್ರಾರಂಭವಾಗಿದ್ದು, ಈ ಬಾರಿ ಶ್ರೀ ಅಮರನಾಥಜಿ ಯಾತ್ರೆ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್ ಎರಡೂ ಮಾರ್ಗಗಳಿಂದ ಪ್ರಾರಂಭವಾಗಲಿದೆ.

ಅಮರನಾಥ ಯಾತ್ರೆ 2023 ನೋಂದಣಿ ಮಾಡುವುದು ಹೇಗೆ ಎಂದು ನೀವು ಚಿಂತಿಸುತ್ತಿದ್ದೀರಾ? ಹಾಗಿದ್ರೆ, ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಯಾತ್ರಿಕರು ತಮ್ಮ ಆಧಾರ್ ಕಾರ್ಡ್ ನಲ್ಲಿ ಸರಿಯಾದ ವಿವರಗಳನ್ನು ಹೊಂದಿರಬೇಕಾಗಿದ್ದು, ಪ್ರತಿ ವ್ಯಕ್ತಿಗೆ 120 ರೂ ನೋಂದಣಿಗೆ ಆಗಿದ್ದು, 13-70 ವರ್ಷ ವಯಸ್ಸಿನ ವ್ಯಕ್ತಿಗಳು ತೀರ್ಥಯಾತ್ರೆಗೆ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಆನ್‌ಲೈನ್ ಮೂಲಕ ನೋಂದಣಿ ಮಾಡಲು https://jksasb.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಆನ್‌ಲೈನ್ ಮೂಲಕ ನೋಂದಣಿ ಮಾಡಲು ಪ್ರತಿ ವ್ಯಕ್ತಿಗೆ 220 ರೂ ತಗುಲುತ್ತದೆ. ಗುಂಪು ನೋಂದಣಿಗೆ ಪ್ರತಿ ವ್ಯಕ್ತಿಗೆ 220 ರೂ ಆಗಲಿದ್ದು, NRI ಯಾತ್ರಿಕರು PNB ಮೂಲಕ ಪ್ರತಿ ವ್ಯಕ್ತಿಗೆ 1,520 ರೂ.ಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಗರ್ಭಿಣಿ ಮಹಿಳೆಗೆ ಅಮರನಾಥ ಯಾತ್ರೆ ಕೈಗೊಳ್ಳಲು ಅವಕಾಶವಿಲ್ಲ ಎಂಬುದನ್ನು ಗಮನಿಸಬೇಕು. ತೀರ್ಥಯಾತ್ರೆ ಹಾಗೂ ಮಾರ್ಗದಲ್ಲಿನ ಹವಾಮಾನ ಮತ್ತು ಆನ್‌ಲೈನ್ ಸೇವೆಗಳನ್ನು ಪಡೆಯುವ ಮಾಹಿತಿಯನ್ನು ಪಡೆಯಲು ನೋಂದಣಿ ಅಪ್ಲಿಕೇಶನ್ ನಲ್ಲೇ ಮಾಹಿತಿ ಒದಗಿಸಲಾಗಿದೆ.ಯಾತ್ರೆಗೆ ತೆರಳುವ ಭಕ್ತರಿಗೆ, ಆಫ್‌ಲೈನ್(Offline) ಮತ್ತು ಆನ್‌ಲೈನ್ ಮೋಡ್‌ಗಳ(Online Mode) ಮೂಲಕ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ : ವಿಚಿತ್ರ ಆಚರಣೆಗಳು, ವಿಭಿನ್ನ ಪೂಜೆಗಳು! ಇವು ಈ ನಿಗೂಢ ದೇವಾಲಯಗಳ ವಿಶೇಷತೆಗಳು