Home latest ಮನೆಗೆ ಬರುವಾಗ ಆಲ್ಕೋಹಾಲ್ ತರಲಿಲ್ಲವೆಂದು ತಾಯಿ ಮೇಲೆ ಹಲ್ಲೆಗೈದ ಮಗ | ಮಗ ಹೊಡೆದನೆಂಬ ಸಿಟ್ಟಿನಿಂದ...

ಮನೆಗೆ ಬರುವಾಗ ಆಲ್ಕೋಹಾಲ್ ತರಲಿಲ್ಲವೆಂದು ತಾಯಿ ಮೇಲೆ ಹಲ್ಲೆಗೈದ ಮಗ | ಮಗ ಹೊಡೆದನೆಂಬ ಸಿಟ್ಟಿನಿಂದ ಮಗನನ್ನೇ ಕೊಂದ ತಾಯಿ

Hindu neighbor gifts plot of land

Hindu neighbour gifts land to Muslim journalist

ಮುಂಬೈ: ಮನೆಗೆ ಬರುವಾಗ ತನ್ನ ತಾಯಿ ಆಲ್ಕೋಹಾಲ್ ತರಲಿಲ್ಲ ಎಂಬ ಕಾರಣಕ್ಕೆ ಹೊಡೆದಿದ್ದಕ್ಕೆ ರೊಚ್ಚಿಗೆದ್ದ ತಾಯಿ ತನ್ನ ಮಗನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಮುಂಬೈನ ಚೆಂಬೂರ್ ಪ್ರದೇಶದಲ್ಲಿ 52 ವರ್ಷದ ಮಹಿಳೆಯೇ ತನ್ನ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದ್ದು,ತನಗೆ ದೊಣ್ಣೆಯಿಂದ ಹೊಡೆದಿದ್ದಕ್ಕೆ ಕೋಪಗೊಂಡ ತಾಯಿ ಮಗನನ್ನು ಕೊಂದ ಆರೋಪದ ಮೇಲೆ ನಿನ್ನೆ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಪ್ರವೀಣ್ ತನ್ನ ತಾಯಿ ಲೂರ್ತ್‌ಮೇರಿ ಮುರ್ಗೆಶನ್ ಆಲ್ಕೋಹಾಲ್
ಬಾಟಲ್ ತರಲಿಲ್ಲ ಎಂದು ಆಕೆಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಆಕೆ ಸುತ್ತಿಗೆಯಿಂದ ಮಗನ ತಲೆಯನ್ನು ಒಡೆದಿದ್ದಾಳೆ. ನಂತರ ಅವಳು ಫ್ಲಾಟ್‌ಗೆ ಬೀಗ ಹಾಕಿ ತನ್ನ ಸ್ನೇಹಿತನಿಗೆ ಫೋನ್ ಮಾಡಿದ್ದಾಳೆ. ಫೋನ್‌ನಲ್ಲಿ ತನ್ನ ಮಗ ಕಾಣೆಯಾಗಿದ್ದಾನೆ, ನಾಳೆ ಆತನನ್ನು ಹುಡುಕಬೇಕು ಎಂದು ಹೇಳಿದ್ದಾಳೆ. ನಂತರ ತನ್ನ ಗಂಡನಿಗೂ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಆಕೆ ಹೇಳಿದಳು. ಆದರೆ, ಆತ ತನ್ನ ಹೆಂಡತಿಯ ಮಾತನ್ನು ನಂಬಲಿಲ್ಲ.

ಸೋಮವಾರ ಮಧ್ಯಾಹ್ನ ಆ ದಂಪತಿಗಳು ತಮ್ಮ ಫ್ಲಾಟ್‌ಗೆ ಬಂದಾಗ ಅವರ ಮಗ ಪ್ರವೀಣನ ದೇಹವು ರಕ್ತದ ಮಡುವಿನಲ್ಲಿ ಬಿದ್ದಿತ್ತು. ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ವಿಚಾರಣೆ ಬಳಿಕ ಮೃತ ಯುವಕನ ತಾಯಿಯನ್ನು
ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.