Home latest ಕೃಷಿಯನ್ನು ಯಾವತ್ತೂ ಮರೆಯಬಾರದು- ಗೀತಾ ಪ್ರಕಾಶ

ಕೃಷಿಯನ್ನು ಯಾವತ್ತೂ ಮರೆಯಬಾರದು- ಗೀತಾ ಪ್ರಕಾಶ

Hindu neighbor gifts plot of land

Hindu neighbour gifts land to Muslim journalist

ವಿಜಯನಗರ (ಹೊಸಪೇಟೆ): ಕೃಷಿ ನಮ್ಮ ಮೂಲಭೂತ ಅವಶ್ಯಕತೆಯಾಗಿದ್ದು, ಅದನ್ನು ನಾವು ಯಾವತ್ತೂ ಮರೆಯಬಾರದು ಎಂದು ವೃತ್ತಿಪರ ಗಾರ್ಡನರ್ ಗೀತಾ ಪ್ರಕಾಶ ಅಭಿಪ್ರಾಯಪಟ್ಟರು. ಅವರು ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಆನ್ಲೈನ್ ನಲ್ಲಿ ನಡೆದ ಮಹಿಳಾ ವಿಕಾಸ ಕಾರ್ಯಕ್ರಮದ ಭಾಗವಾಗಿ ಟೆರೇಸ್ ಗಾರ್ಡನಿಂಗ್ ವಿಷಯದ ಕುರಿತು ಉಪನ್ಯಾಸ ನೀಡಿದರು. ನಗರೀಕರಣದ ಕಾರಣದಿಂದಾಗಿ ಮನೆ ಕಟ್ಟಲು ಜಾಗ ಇಲ್ಲದಿರುವಾಗ ಟೆರೇಸ್ ಗರ್ಡನಿಂಗ್ ಸೂಕ್ತ ಪ್ರವೃತ್ತಿಯಾಗುತ್ತದೆ ಎಂದರು.

ದಿನಂಪ್ರತಿ ಬಳಸುವ ವಸ್ತುಗಳನ್ನೇ ಬಳಸಿಕೊಂಡು ಈ ವೃತ್ತಿಯನ್ನು ಮಾಡಬಹುದು ಹಾಗೂ ಟೆರೇಸ್ ಗರ್ಡನಿಂಗ್ ಮಾಡುವ ಮೂಲಕ ಒಳ್ಳೆಯ ವಾತಾವರಣವನ್ನು, ಬಜೆಟ್ ಸ್ನೇಹಿ ಮತ್ತು ಸತ್ವಯುಕ್ತ ಆಹಾರವನ್ನು ಪಡೆದುಕೊಳ್ಳಬಹುದೆಂದರು.

ಉಪನ್ಯಾಸಕರಾದ ವಾಣಿಶ್ರೀ ಜೋಶಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಕಾಡನ್ನು ನಾಶ ಪಡಿಸುವ ಬದಲು ಇರುವ ಜಾಗವನ್ನು ಬಳಸಿಕೊಂಡು ಪರಿಸರಸ್ನೇಹಿ ವಾತಾವರಣವನ್ನು ನಿರ್ಮಿಸಿಕೊಳ್ಳಬಹುದೆಂದರು.
ಬ್ಯಾಂಕಿನ ಅಧಿಕಾರಿಯಾದ ಭುವನೇಶ್ವರಿ.ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾವಲಂಬನೆಯ ಬದುಕನ್ನು ಹಾಗೂ ಆರೋಗ್ಯಯುತ ಕುಟುಂಬವನ್ನು ಕಟ್ಟಲು ಇರುವ ಸ್ಥಳವನ್ನು ಬಳಸಿಕೊಂಡು ಟೆರೇಸ್ ಗಾರ್ಡನಿಂಗ್ ಮಾಡಬಹುದು ಎಂದರು.

ಬ್ಯಾಂಕಿನ ಅಧಿಕಾರಿ ಅರ್ಪಿತಾ ಖೋಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಗಂಗಾವತಿ ಶಾಖೆಯ ಉಸ್ತುವಾರಿಯಲ್ಲಿ ಬ್ಯಾಂಕಿನ ಅಧಿಕಾರಿಗಳಾದ ಜಯಶ್ರೀ, ಪಲ್ಲವಿ ಹಾಗೂ ವಾರದ ಕಾವ್ಯ ನಿರ್ವಹಿಸಿದರು.