Home Entertainment ಕೊನೆಗೂ ಸಿಹಿ ಸುದ್ದಿ ನೀಡಿದ ಚಂದನವನದ ಬ್ಯೂಟಿ ಕ್ವೀನ್ ನಟಿ ರಮ್ಯಾ

ಕೊನೆಗೂ ಸಿಹಿ ಸುದ್ದಿ ನೀಡಿದ ಚಂದನವನದ ಬ್ಯೂಟಿ ಕ್ವೀನ್ ನಟಿ ರಮ್ಯಾ

Hindu neighbor gifts plot of land

Hindu neighbour gifts land to Muslim journalist

ಕೊನೆಗೂ ಗಣೇಶನ ಹಬ್ಬಕ್ಕೆ ಮೋಹಕತಾರೆ ರಮ್ಯಾ ಗುಡ್ ನ್ಯೂಸ್ ನೀಡೇ ಬಿಟ್ಟರು. ಅಭಿಮಾನಿಗಳ ಕುತೂಹಲ ಒಮ್ಮೆ ತಣಿಸಿ, ಮತ್ತಷ್ಟು ಹೆಚ್ಚಿಸಿದ್ದಾರೆ. ರಮ್ಯಾ ನೀಡುವ ಸಿಹಿ ಸುದ್ದಿ ಏನಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ, ಕೊನೆಗೂ ನಟಿ ರಮ್ಯಾ ಗುಡ್ ನ್ಯೂಸ್ ಏನು ಎನ್ನುವುದು ಬಹಿರಂಗಗೊಳಿಸಿದ್ದಾರೆ.

‘ನಾಳೆ ಬೆಳಗ್ಗೆ 11.15ಕ್ಕೆ ಸುದ್ದಿ ಬರುತ್ತೆ. ಅದು ಅಫೀಶಿಯಲ್ ವಿಚಾರ’ ಎಂದಿದ್ದರು ರಮ್ಯಾ, ಮತ್ತೆ ಸಿನಿಮಾ ಮಾಡ್ತಾರೆ ಎಂಬ ಸಣ್ಣ ಸುಳಿವು ಅಭಿಮಾನಿಗಳಿಗೆ ಮೊದಲೇ ಇತ್ತು. ಆದರೀಗ ನಿರ್ಮಾಪಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಹೌದು ರಮ್ಯಾ ನಿರ್ಮಾಪಕಿಯಾಗಿ ಸಿನಿಮಾ ರಂಗಕ್ಕೆ ಮತ್ತೆ ವಾಪಾಸ್ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆ ಮೂಲಕ ಇನ್ಮುಂದೆ ಸಿನಿಮಾ ಮತ್ತು ವೆಬ್ ಸೀರಿಸ್ ನಿರ್ಮಾಣ ಮಾಡುವುದಾಗಿ ರಮ್ಯಾ ಬಹಿರಂಗ ಪಡಿಸಿದ್ದಾರೆ.

‘ಪುಟ್ಟ ಮರದ ಪೆಟ್ಟಿಗೆ. ನನ್ನ ಚಿತ್ರರಂಗದ ಪಯಣದುದ್ದಕ್ಕೂ ನಿರಂತರವಾಗಿ ಆಪಲ್ ಬಾಕ್ಸ್ ಜೊತೆಗಿದ್ದೆ. ಸೆಟ್ನಲ್ಲಿ ಕೂರಲು ಕುರ್ಚಿಗಳಲ್ಲದೇ ಇದ್ದಾಗ ಅಥವಾ ಕ್ಯಾಮರಾ, ಇಲ್ಲವೇ ನಟರ ಎತ್ತರ ಹೆಚ್ಚಿಸಬೇಕಾದಾದ ಈ ಆಪಲ್ ಬಾಕ್ಸ್ ನೆರವಿಗೆ ಒಂದಿದೆ. ಈ ಪೆಟ್ಟಿಗೆಯ ಸರಳತೆ ನನಗೆ ಸದಾ ಸ್ಫೂರ್ತಿಯಾಗಿ ನನ್ನನ್ನು ಪ್ರೇರೇಪಿಸಿದೆ’ ಎಂದು ರಮ್ಯಾ ತನ್ನ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿ ಬರೆದಿದ್ದಾರೆ.

ಹೋಂ ಬ್ಯಾನರ್ ನಲ್ಲಿ ಈಗಾಗಲೇ ಎರಡು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗಳನ್ನು ಈ ಸಿನಿಮಾಗಳನ್ನು ಕೆಆರ್ ಜೆ ಸಂಸ್ಥೆ ವಿತರಣೆ ಮಾಡಲಿದೆ ಎಂದು ಬಹಿರಂಗ ಪಡಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ಸಿನಿಮಾ ಜೊತೆಗೆ ವೆಬ್ ಸೀರಿಸ್ ಕೂಡಾ ಮಾಡುವುದಾಗಿಯೂ ಹೇಳಿದ್ದಾರೆ. ಈ ಮೂಲಕ ಒಟಿಟಿಗೂ ಎಂಟ್ರಿ ಕೊಡುವುದಾಗಿ ಬಹಿರಂಗ ಪಡಿಸಿದ್ದಾರೆ.

ಇದರ ಜೊತೆಗೆ ತನಗೆ ಈ ಕೆಲಸದಲ್ಲಿ ಯಾರೆಲ್ಲಾ ಸಹಾಯ ಮಾಡಿದ್ದಾರೆ ಅವರೆಲ್ಲರಿಗೂ ರಮ್ಯಾ ಧನ್ಯವಾದ ತಿಳಿಸಿದ್ದಾರೆ. ಕುಟುಂಬಕ್ಕೆ, ಸ್ನೇಹಿತರಿಗೆ, ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಅದರಲ್ಲೂ ಹಾಗೂ ವಿಶೇಷವಾಗಿ ನಿರ್ಮಾಪಕರಾದ ವಿಜಯ್ ಕಿರಗಂದೂರು, ಯೋಗಿ ಜಿ ರಾಜ್, ಜಯಣ್ಣ, ಕಾರ್ತಿಕ್ ಗೌಡಗೆ ಮೋಹಕತಾರೆ ಧನ್ಯವಾದ ತಿಳಿಸಿದ್ದಾರೆ.

ಏನೇ ಆಗಲಿ, ಮೋಹಕ ತಾರೆ ಕೊನೆಗೂ ಸಿನಿಮಾರಂಗದಲ್ಲಿ ಸಕ್ರಿಯವಾಗಿರುವುದನ್ನು ನೋಡಲು ಅಭಿಮಾನಿಗಳು ನಿಜಕ್ಕೂ ಕಾತುರದಿಂದ ಕಾಯುತ್ತಿದ್ದ ಕಾಲ ಹತ್ತಿರ ಬಂತು ಎಂದೇ ಹೇಳಬಹುದು.