Home Breaking Entertainment News Kannada Actor Chetan : ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ವಿಚಾರಕ್ಕೆ ನಟ ಚೇತನ್‌ ಅರೆಸ್ಟ್‌!

Actor Chetan : ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ವಿಚಾರಕ್ಕೆ ನಟ ಚೇತನ್‌ ಅರೆಸ್ಟ್‌!

Actor Chetan

Hindu neighbor gifts plot of land

Hindu neighbour gifts land to Muslim journalist

Actor Chetan :ಬೆಂಗಳೂರು: ನಟ  ಚೇತನ್‌ ಕುಮಾರ್‌ ಹೊಸ ವಿವಾದ ಸೃಷ್ಟಿಸಿದ್ದು, ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ಮಾಡಿದ ವಿಚಾರವಾಗಿ ಬಂಧನ ಮಾಡಲಾಗಿದೆ.

ನಟ ಚೇತನ್‌ ( Actor Chetan) ಅವರು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಸಾವರ್ಕರ್‌ ಹೇಳಿಕೆ : ರಾಮನು ರಾವಣನನು ಸೋಲಿಸಿ ಅಯೋದ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಇದು ಒಂದು ಸುಳ್ಳು 1992ರಲ್ಲಿ ಬಾಬರಿ ಮಸೀದಿ ರಾಮನ ಜನ್ಮ ಭುಮಿ ಇದು ಒಂದು ಸುಳ್ಳು. ಈಗ 2023ರಲ್ಲಿ ಉರಿಗೌಡ ಮತ್ತು ನಂಜೇ ಗೌಡರು ಟಿಪ್ಪುವನ್ನು ಕೊಂದರು ಇದು ಕೂಡ ಒಂದು ಸುಳ್ಳು ಹಿಂದುತ್ವವನ್ನು ಸತ್ಯದೊಂದ ಸೋಲಿಸಬಹುದು ಸತ್ಯವೇ ಸಮಾನತೆ ಎಂದು ವಿವಾದಾತ್ಮಕ ಪೋಸ್ಟ್‌ ನನ್ನು ಹಂಚಿಕೊಂಡಿದ್ದಾರೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ ಅಷ್ಟೇ ಅಲ್ಲದೇ
ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ನಟ ಚೇತನ್‌ ನನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧನ ಮಾಡಲಾಗಿದೆ.

ಇದೀಗ  ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನನ್ನು ಕೋರ್ಟ್‌ ಗೆ ಪೊಲೀಸರು ಹಾಜರುಪಡಿಸಲಿದ್ದಾರೆ.  ನಟ ಚೇತನ್‌ ವಿರುದ್ಧ ಹಿಂದೂಪರ ಸಂಘಟನೆ ದೂರು ನೀಡಿತ್ತು.  ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಾಗಿತ್ತು. ಐಪಿಸಿ ಸೆಕ್ಷನ್‌ 295A ಹಾಗೂ  505 Bರಡಿಯಲ್ಲಿ ಪ್ರಕರಣ ದಾಖಲಾಗಿದೆ.