Home latest Gold Suresh: ಗೋಲ್ಡ್‌ ಸುರೇಶ್‌ ವಿರುದ್ಧ ಲಕ್ಷ ಲಕ್ಷ ವಂಚನೆ ಆರೋಪ

Gold Suresh: ಗೋಲ್ಡ್‌ ಸುರೇಶ್‌ ವಿರುದ್ಧ ಲಕ್ಷ ಲಕ್ಷ ವಂಚನೆ ಆರೋಪ

Hindu neighbor gifts plot of land

Hindu neighbour gifts land to Muslim journalist

Gold Suresh: ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮೈನುದ್ದಿನ್‌ ಎಂಬುವವರು ಬಿಗ್‌ಬಾಸ್‌ ಗೋಲ್ಡ್‌ ಸುರೇಶ್‌ ವಿರುದ್ಧ ಗಂಭೀರ ಆರೋಪ ಮಾಡಿರುವ ಕುರಿತು ವರದಿಯಾಗಿದೆ. ಸುರೇಶ್‌ ಅವರು ಕೇಬಲ್‌ ಚಾನೆಲ್‌ನ ಸೆಟಪ್‌ ಮಾಡುವುದಾಗಿ 14 ಲಕ್ಷಕ್ಕೆ ಒಪ್ಪಂದ ಮಾಡಿದ್ದು, ನಾಲ್ಕು ಲಕ್ಷ ಮುಂಗಡ ಪಡೆದಿದ್ದರು.

ನಂತರ ಹಂತ ಹಂತವಾಗಿ ಏಳು ಲಕ್ಷ ರೂಪಾಯಿ ಸುರೇಶ್‌ಗೆ ಮೈನುದ್ದೀನ್‌ ನೀಡಿದ್ದರು ಎನ್ನಲಾಗಿದೆ. 2017 ರಲ್ಲಿ ಇವರಿಬ್ಬರ ಮಧ್ಯೆ ಒಪ್ಪಂದ ನಡೆದಿತ್ತು. ನಂತರ ಸುರೇಶ್‌ ಕೆಲಸವನ್ನು ಅರ್ಧಂಬರ್ಧ ಮಾಡಿ ಕೈ ಬಿಟ್ಟಿದ್ದರು. ಈ ಅವರು ನೀಡಿದ ಹಣವನ್ನು ಮರಳಿ ಕೊಡುತ್ತಿಲ್ಲ ಎಂದು ಮೈನುದ್ದೀನ್‌ ಹೇಳಿರುವ ಕುರಿತು ಟಿವಿ9 ವರದಿ ಮಾಡಿದೆ.