Home latest 7 Killed as Tree Fall : ಮಹಾಮಳೆಗೆ ದೇವಸ್ಥಾನದ ಮೇಲೆ ಮರ ಬಿದ್ದು, 7...

7 Killed as Tree Fall : ಮಹಾಮಳೆಗೆ ದೇವಸ್ಥಾನದ ಮೇಲೆ ಮರ ಬಿದ್ದು, 7 ಮಂದಿ ಸಾವು!!!

7 Killed as Tree Fall

Hindu neighbor gifts plot of land

Hindu neighbour gifts land to Muslim journalist

7 Killed as Tree Fall : ಕಳೆದ ರಾತ್ರಿ ಸುರಿದ ಭಾರೀ ಗಾಳಿ ಮತ್ತು ಮಳೆಯಿಂದಾಗಿ ದೇವಸ್ಥಾನದ ಆವರಣದಲ್ಲಿ ಜನರು ನಿಂತಿದ್ದ ಟಿನ್ ಶೆಡ್‌ನ ಮೇಲೆ ಮರವೊಂದು ಬಿದ್ದು ಏಳು ಜನರು ಮೃತಪಟ್ಟು (7 Killed as Tree Fall) 23 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.

ಭಾನುವಾರ ಸಂಜೆ 7.30ರ ಸುಮಾರಿಗೆ ಬಾಲಾಪುರ ತಾಲೂಕಿನ ಪಾರಸ್‌ ಗ್ರಾಮದ ಬಾಬುಜಿ ಮಹಾರಾಜರ ದೇವಸ್ಥಾನದಲ್ಲಿ ಮಹಾ ಆರತಿಗೆ ಜನರು ಸೇರಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಅಕೋಲಾ ಜಿಲ್ಲಾಧಿಕಾರಿ ನಿಮಾ ಅರೋರಾ ತಿಳಿಸಿದ್ದಾರೆ.

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಬಿರುಗಾಳಿ ಗಾಳಿ ಮತ್ತು ಮಳೆಯಿಂದಾಗಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈಗ ಜಿಲ್ಲೆಯ ಬಾಲಾಪುರ ತಾಲೂಕಿನ ಪರಾಸ್ ಪ್ರದೇಶದಲ್ಲಿರುವ ಬಾಬೂಜಿ ಮಹಾರಾಜ್ ದೇವಸ್ಥಾನದ ಸಂಕೀರ್ಣದಲ್ಲಿರುವ ತಗಡಿನ ಶೆಡ್ ಮೇಲೆ ಬೇವಿನ ಮರವೊಂದು ಬಿದ್ದಿದೆ. ಇದು ಶೆಡ್ ಕುಸಿತಕ್ಕೆ ಕಾರಣವಾಗಿ ಶೆಡ್ ನಲ್ಲಿದ್ದ 7 ಜನರು ಅಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ 33 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಮಳೆ ಮತ್ತು ಚಂಡಮಾರುತದ ಸಮಯದಲ್ಲಿ ಒಟ್ಟು 30 ರಿಂದ 40 ಜನರು ತಗಡಿನ ಶೆಡ್ ನಲ್ಲಿದ್ದರು.ಈ ವೇಳೆ ಮರ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಮೂರು ಸಾವುಗಳು ಆಸ್ಪತ್ರೆಯಲ್ಲಿ ಸಂಭವಿಸಿವೆ. ಗಾಯಾಳುಗಳಿಗೆ ಅಕೋಲಾ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಫಡ್ನವೀಸ್ ಅವರು ಟ್ವೀಟ್‌ನಲ್ಲಿ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರದ ಕಡೆಯಿಂದ ಹಾಗೂ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ನೀಡಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ನಿರ್ಧರಿಸಿದ್ದಾರೆ ಎಂದು ಫಡ್ನವೀಸ್ ಹೇಳಿದ್ದಾರೆ.