Home latest ಬಲವಂತದ ಮತಾಂತರಕ್ಕೆ ಒಪ್ಪದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಪ್ರಕರಣ- ವಿಶ್ವ ಹಿಂದೂ ಪರಿಷತ್...

ಬಲವಂತದ ಮತಾಂತರಕ್ಕೆ ಒಪ್ಪದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಪ್ರಕರಣ- ವಿಶ್ವ ಹಿಂದೂ ಪರಿಷತ್ ಖಂಡನೆ ,ಪ್ರತಿಭಟನೆಗೆ ಕರೆ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ನಗರದ ಜೆಪ್ಪು ಮಾರ್ಕೆಟ್ ಬಳಿಯ ಭಗಿನಿ ಸಮಾಜ ಬಳಿ ವಾಸವಾಗಿದ್ದ ನಾಗೇಶ್ ಮತ್ತು ವಿಜಯಲಕ್ಷ್ಮಿ ದಂಪತಿಗಳು ಮತ್ತು ಇಬ್ಬರು ಮಕ್ಕಳೊಡನೆ ಬಲವಂತದ ಮತಾಂತರಕ್ಕೆ ಒಪ್ಪದೆ ಆತ್ಮಹತ್ಯೆ ಮಾಡಿಕೊಂಡಿದ್ದು,ನೂರ್ ಜಹಾನ್ ಎಂಬ ಮಹಿಳೆ ಬಲವಂತದ ಮತಾಂತರಕ್ಕೆ ಪ್ರಯತ್ನಿಸುತ್ತಿರುವ ಬಗ್ಗೆ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ,ಈ ವಿಚಾರವನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುವ ಮೂಲಕ ಇದರ ಹಿಂದೆ ಇರುವ ಜಾಲವನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಲು ಆಗ್ರಹಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಶೀಘ್ರವಾಗಿ ಜಾರಿಗೆ ತರಲು ಮಾನ್ಯ ಗೃಹಸಚಿವರಲ್ಲಿ ಮನವಿ ಮಾಡುತ್ತದೆ. ಬಲವಂತದ ಮತಾಂತರ ಈ ಪ್ರಕರಣವನ್ನು ವಿರೋಧಿಸಿ, ವ್ಯವಸ್ಥಿತ ಜಾಲವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗಳ್ಳಲು ಆಗ್ರಹಿಸಿ 10 ಡಿಸೆಂಬರ್ ಶುಕ್ರವಾರ ಸಂಜೆ 5 ಗಂಟೆಗೆ ಜಪ್ಪು ಗುಜ್ಜರಕೆರೆಯಲ್ಲಿ ಪ್ರತಿಭಟನೆ ನಡೆಯಲಿರುವುದು, ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರು ಮತ್ತು ಸ್ವಾಮೀಜಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸುವರು.