Home Education KPSC : ಗ್ರೂಪ್ ಸಿ ಹುದ್ದೆ- ಮೂಲ ದಾಖಲೆ ಪರಿಶೀಲನೆ ದಿನಾಂಕ ಪ್ರಕಟ

KPSC : ಗ್ರೂಪ್ ಸಿ ಹುದ್ದೆ- ಮೂಲ ದಾಖಲೆ ಪರಿಶೀಲನೆ ದಿನಾಂಕ ಪ್ರಕಟ

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕ ಲೋಕಸೇವಾ ಆಯೋಗವು ಇತ್ತೀಚೆಗೆ ವಿವಿಧ ಇಲಾಖೆಗಳಲ್ಲಿನ ಗ್ರೂಪ್ -ಸಿ ತಾಂತ್ರಿಕೇತರ ಹುದ್ದೆಗಳಿಗೆ (ಪದವಿ ಮತ್ತು ಪದವಿ ಪೂರ್ವ)1:3 ಅನುಪಾತದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಲು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಆ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ದಿನಾಂಕ ಪ್ರಕಟ ಮಾಡಲಾಗಿದೆ.

ಸದರಿ ಹುದ್ದೆಗಳಿಗೆ ದಾಖಲೆ ಪರಿಶೀಲನೆ ಆರಂಭವಾಗುವ ದಿನಾಂಕವನ್ನು ಇದೀಗ ಕೆಪಿಎಸ್‌ಸಿ ಸೆಕ್ರೆಟರಿ ಯವರು ಪ್ರಕಟಿಸಿದ್ದಾರೆ. ಗ್ರೂಪ್‌-ಸಿ ತಾಂತ್ರಿಕೇತರ ಹುದ್ದೆಗಳಿಗೆ ಡಿಸೆಂಬರ್ 19, 2022 ರಿಂದ ಮೂಲ ದಾಖಲೆಗಳ ಪರಿಶೀಲನೆ ಕಾರ್ಯ ಆರಂಭವಾಗಲಿದೆ. ಈ ಕುರಿತು ಸಂಪೂರ್ಣ ವೇಳಾಪಟ್ಟಿಯನ್ನು ಈ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿಯವರು ಟ್ವೀಟ್ ಮಾಡಿದ್ದಾರೆ.

ಮೂಲ ದಾಖಲೆಗಳ ಪರಿಶೀಲನೆ 19-12-2022 ರಂದು ಆರಂಭವಾಗಲಿದ್ದು, ದಾಖಲೆಗಳ ಪರಿಶೀಲನೆ ವೇಳಾಪಟ್ಟಿಯಲ್ಲಿ ಪ್ರತಿ ಅಭ್ಯರ್ಥಿಗೆ ಯಾವ ದಿನಾಂಕದಂದು ಅಲ್ಲದೆ ಎಷ್ಟು ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ ಎಂಬ ಮಾಹಿತಿ ಕೆಪಿಎಸ್‌ಸಿ ನೀಡಲಿದೆ. ಈ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಯುವ ಸ್ಥಳವನ್ನು ಉದ್ಯೋಗ ಸೌಧ, ಕೆಪಿಎಸ್‌ಸಿ ಕಾರ್ಯಾಲಯ, ಬೆಂಗಳೂರು – 560001 ಎಂದು ಹೇಳಲಾಗಿದೆ.

ಕೆಪಿಎಸ್‌ಸಿ’ಯು ಇದೀಗ 1122 ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿ ಸಂಬಂಧ, Willingness ಸಲ್ಲಿಸುವ ಅವಧಿಯನ್ನು ವಿಸ್ತರಿಸಿ ಪ್ರಕಟಣೆ ಹೊರಡಿಸಿದ್ದು, ಪರಿಷ್ಕೃತ ವೇಳಾಪಟ್ಟಿ ಪ್ರಕಾರ ದಿನಾಂಕ 09-12-2022 ರವರೆಗೆ ಅಭ್ಯರ್ಥಿಗಳು Willingness ಸಲ್ಲಿಸಬಹುದಾಗಿದೆ.

ಕೆಪಿಎಸ್‌ಸಿ ನಿಗದಿ ಮಾಡಿದ ದಿನಾಂಕದಂದು ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ಹಾಗೂ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿದ ಎರಡು ಸೆಟ್‌ ಜೆರಾಕ್ಸ್‌ ಪ್ರತಿಗಳನ್ನು ಹಾಜರುಪಡಿಸಬೇಕಾಗುತ್ತದೆ. ಒಂದು ವೇಳೆ ಅಗತ್ಯ ದಾಖಲೆಯನ್ನು ಹಾಜರುಪಡಿಸದಿದ್ದಲ್ಲಿ, ಕೆಪಿಎಸ್‌ಸಿ ಆಯ್ಕೆಪಟ್ಟಿಯಿಂದ ಅಂತಹ ಅಭ್ಯರ್ಥಿಯನ್ನು ಪಟ್ಟಿಯಿಂದ ತೆಗೆದು ಹಾಕಲಿದೆ.


ಕೆಪಿಎಸ್‌ಸಿ ನಿಗದಿ ಮಾಡಿದ ದಿನಾಂಕದಂದು ಅಭ್ಯರ್ಥಿಗಳು ಸಲ್ಲಿಸಬೇಕಾದ ಮೂಲ ದಾಖಲೆಗಳು ಹೀಗಿವೆ;

ಆಧಾರ್‌ ಕಾರ್ಡ್‌,ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರ, ವಯಸ್ಸಿನ ಅರ್ಹತೆಗಾಗಿ ಪ್ರಮಾಣ ಪತ್ರ ಇದಕ್ಕಾಗಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಕೂಡ ಆಗಲಿದೆ.ಜಾತಿ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು, ಗ್ರಾಮೀಣ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು, ಅಪ್ಲಿಕೇಶನ್‌ ಪ್ರತಿ, ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇತ ಪತ್ರ, ಕನ್ನಡ ಮಾಧ್ಯಮ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು ಆಗಲಿವೆ.

ಇದರ ಜೊತೆಗೆ ಮಾಜಿ ಸೈನಿಕರ ಮೀಸಲಾತಿ ಪ್ರಮಾಣ ಪತ್ರಗಳು, ಯೋಜನೆಗಳಿಂದ ನಿರಾಶ್ರಿತ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರ, ಅಂಗವಿಕಲ ಅಭ್ಯರ್ಥಿ ಮೀಸಲಾತಿ ಪ್ರಮಾಣ ಪತ್ರ, ಸೇವಾ ನಿರತ ಅಭ್ಯರ್ಥಿಗಳ ಪ್ರಮಾಣ ಪತ್ರ ಸಲ್ಲಿಸ ಬೇಕಾಗುತ್ತದೆ.


ಸಂಬಂಧಪಟ್ಟ ತಾಲ್ಲೂಕು ತಾಹಶೀಲ್ದಾರ್ ರವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರಗಳು ಬೇಕಾಗಿದ್ದು ಇದರ ಜೊತೆಗೆ 2 ಪಾಸ್ ಪೋರ್ಟ್‌ ಅಳತೆಯ ಭಾವಚಿತ್ರ ಬೇಕಾಗುತ್ತದೆ. ಪ್ರಮಾಣ ಪತ್ರಗಳ ಪೈಕಿ ಮೀಸಲಾತಿಗೆ ಬೇಕಾದ ಎಲ್ಲ ದಾಖಲೆಗಳನ್ನು ತಪ್ಪದೇ ಹಾಜರುಪಡಿಸಬೇಕಾಗಿದೆ.