Home Jobs IOCL Recruitment 2022 : ಇಂಡಿಯನ್‌ ಆಯಿಲ್‌ ನಲ್ಲಿ 1760 ಅಪ್ರೆಂಟಿಸ್‌ ಹುದ್ದೆ | ಆಸಕ್ತರು...

IOCL Recruitment 2022 : ಇಂಡಿಯನ್‌ ಆಯಿಲ್‌ ನಲ್ಲಿ 1760 ಅಪ್ರೆಂಟಿಸ್‌ ಹುದ್ದೆ | ಆಸಕ್ತರು ಅರ್ಜಿ ಸಲ್ಲಿಸಿ

Hindu neighbor gifts plot of land

Hindu neighbour gifts land to Muslim journalist

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ (IOCL) ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಮೆಕ್ಯಾನಿಕಲ್, ಇಲೆಕ್ಟ್ರೀಷಿಯನ್, ಇನ್‌ಸ್ಟ್ರುಮೆಂಟೇಷನ್‌, ಸಿವಿಲ್, ಫಿಟ್ಟರ್, ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್, ಮಷಿನಿಸ್ಟ್‌, ಡಾಟಾ ಎಂಟ್ರಿ ಆಪರೇಟರ್, ಹೀಗೆ ಹಲವು ವಿಭಾಗಗಳಲ್ಲಿ ತರಬೇತಿಗೆ ಅಭ್ಯರ್ಥಿಗಳನ್ನು ನಿಯೋಜಿಸಲಾಗುತ್ತದೆ. ರಾಜ್ಯ ಹಾಗೂ ಟ್ರೇಡ್‌ / ಟೆಕ್ನೀಷಿಯನ್ / ಗ್ರಾಜುಯೇಟ್‌ವಾರು ಹುದ್ದೆಗಳ ಸಂಖ್ಯೆಗಳನ್ನು ಕೆಳಗಿನ ನೋಟಿಫಿಕೇಶನ್‌ನಲ್ಲಿ ಓದಿ ತಿಳಿಯಬಹುದು.

ಕರ್ನಾಟಕ, ಕೇರಳ, ತೆಲಂಗಾಣ, ಮಧ್ಯಪ್ರದೇಶ, ತಮಿಳುನಾಡು, ಅಸ್ಸಾಂ, ಉತ್ತರಪ್ರದೇಶ, ಬಿಹಾರ, ಸಿಕ್ಕಿಂ, ದೆಹಲಿ ಹರಿಯಾಣ ಸೇರಿದಂತೆ ದೇಶದ ಹಲವು ರಾಜ್ಯಗಳ ರಿಫೈನರೀಸ್ ಡಿವಿಷನ್ ಗಳಲ್ಲಿ ಅಗತ್ಯ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಆರಂಭಿಕ ದಿನಾಂಕ: 14-12-2022
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ: 03-01-2023
ಅಡ್ಮಿಟ್ ಕಾರ್ಡ್‌‌ ಬಿಡುಗಡೆ ಸಂಭಾವ್ಯ ದಿನಾಂಕ: ಪರೀಕ್ಷೆಗೆ ಎರಡು ವಾರ ಮುಂಚಿತವಾಗಿ ಪ್ರಕಟ ಮಾಡಲಾಗುವುದು.
ಲಿಖಿತ ಪರೀಕ್ಷೆ ಸಂಭಾವ್ಯ ದಿನಾಂಕ: ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.

ಉದ್ಯೋಗ ಸಂಸ್ಥೆ : ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌
ಹುದ್ದೆ ಹೆಸರು: ಟ್ರೇಡ್‌, ಟೆಕ್ನೀಷಿಯನ್ ಹಾಗೂ ಗ್ರಾಜುಯೇಟ್‌ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ : 1760

ವಿದ್ಯಾರ್ಹತೆ
ಟ್ರೇಡ್‌ ಅಪ್ರೆಂಟಿಸ್ : ಐಟಿಐ ಪಾಸ್ ಮಾಡಿರಬೇಕು.
ಟೆಕ್ನೀಷಿಯನ್ ಅಪ್ರೆಂಟಿಸ್ : ಡಿಪ್ಲೊಮ ಪಾಸ್‌ ಮಾಡಿರಬೇಕು.
ಗ್ರಾಜುಯೇಟ್‌ ಅಪ್ರೆಂಟಿಸ್ : ತಾಂತ್ರಿಕ ವಿಷಯಗಳಲ್ಲಿ ಪದವಿ ಪಾಸ್ ಮಾಡಿರಬೇಕು.

ವಯೋಮಿತಿ ಅರ್ಹತೆಗಳು
ಕನಿಷ್ಠ 18 ವರ್ಷ ಆಗಿರುವ, ಗರಿಷ್ಠ 24 ವರ್ಷ ವಯೋಮಿತಿ ಮೀರದ ಅಭ್ಯರ್ಥಿಗಳು ಈ ಅಪ್ರೆಂಟಿಸ್ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಜಾತಿವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯ ಆಗಲಿವೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ