Home Jobs ಅಗ್ನಿವೀರ್ ನೇಮಕಾತಿ : ಶೇಕಡಾ 20ರಷ್ಟು ಮಹಿಳೆಯರ ನೇಮಕಾತಿಗೆ ಮುಂದಾದ ನೌಕಾಪಡೆ

ಅಗ್ನಿವೀರ್ ನೇಮಕಾತಿ : ಶೇಕಡಾ 20ರಷ್ಟು ಮಹಿಳೆಯರ ನೇಮಕಾತಿಗೆ ಮುಂದಾದ ನೌಕಾಪಡೆ

Hindu neighbor gifts plot of land

Hindu neighbour gifts land to Muslim journalist

ನವದೆಹಲಿ : ಅಗ್ನಿಪಥ್ ನೇಮಕಾತಿ ಯೋಜನೆಗಾಗಿ ಅಗ್ನಿವೀರರ ಮೊದಲ ಬ್ಯಾಚ್ ನಲ್ಲಿ ಶೇಕಡಾ 20 ರಷ್ಟು ಮಹಿಳೆಯರು ಇರುತ್ತಾರೆ ಎಂದು ಭಾರತೀಯ ನೌಕಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ನೌಕಾಪಡೆಯು 2022ರಲ್ಲಿ 3000 ‘ಅಗ್ನಿವೀರ’ರನ್ನು ಸೇರ್ಪಡೆ ಮಾಡಿಕೊಳ್ಳಲು ಸಜ್ಜಾಗಿದೆ. ಜುಲೈ 1 ರಂದು ಮೊದಲ ಬ್ಯಾಚ್‌ಗಾಗಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು,ಸುಮಾರು 10,000 ಮಹಿಳೆಯರು ಹೆಸರು ನೋಂದಾಯಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಭಾರತೀಯ ನೌಕಾಪಡೆಯಲ್ಲಿ ಈಗಾಗ್ಲೇ 30 ಮಹಿಳಾ ಅಧಿಕಾರಿಗಳು ವಿವಿಧ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಹಾಗಾಗಿ ನೌಕಾಪಡೆಯ ವಿವಿಧ ಭಾಗಗಳಿಗೆ ಮತ್ತು ಶಾಖೆಗಳಿಗೆ ಮಹಿಳೆಯರನ್ನು ನೇಮಕ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆಯೆಂದು ತಿಳಿಸಿದ್ದಾರೆ. ಅಲ್ಲದೆ,  ಯುದ್ಧನೌಕೆಗಳಲ್ಲಿಯೂ ನಿಯೋಜಿಸಲಾಗುವುದು ಎಂದು ತ್ರಿಪಾಠಿ ಅಭಯ ಮಾಹಿತಿ ನೀಡಿದ್ದಾರೆ.

ಭಾರತೀಯ ನೌಕಾಪಡೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 15 ರಿಂದ ಆರಂಭವಾಗಿದ್ದು, ಜುಲೈ 30ರವರೆಗೂ ಕಾಲಾವಕಾಶವಿದೆ. ಅಗ್ನಿವೀರರ ನೇಮಕಾತಿಯಲ್ಲಿ ಪುರುಷರು ಮಹಿಳೆಯರೆಂಬ ಬೇಧ ಭಾವವಿರುವುದಿಲ್ಲ. ನೇಮಕಾತಿ ಲಿಂಗ ತಟಸ್ಥವಾಗಿರಲಿದೆ ಎಂದು ಈಗಾಗ್ಲೇ ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ.

ಶಿಸ್ತು ಭಾರತೀಯ ಸೇನೆಯ ಅಡಿ. ಇಲ್ಲಿ ಹಿಂಸೆ, ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯಗಳಿಗೆ ಜಾಗವಿಲ್ಲ. ಸೇನೆ ಸೇರಲು ಅರ್ಜಿ ಸಲ್ಲಿಸುವವರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂಬ ಬಗ್ಗೆ ಪ್ರಮಾಣ ಪತ್ರ ನೀಡಬೇಕು. ಪೊಲೀಸರು ಇದನ್ನು ಪರಿಶೀಲನೆ ನಡೆಸಲಿದ್ದಾರೆ. ಆಕಾಂಕ್ಷಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ ಅಂಥವರು ಸೇನೆ ಸೇರಲು ಸಾಧ್ಯವಿಲ್ಲ ಎಂದು ಅನಿಲ್‌ ಪುರಿ ಹೇಳಿದ್ದಾರೆ.