Home Interesting 7th Pay Commission : ಮೋದಿ ಸಂಪುಟದಿಂದ ಕೇಂದ್ರ ನೌಕರರಿಗೆ ಇಂದು ಬಿಗ್ ಗುಡ್‌ ನ್ಯೂಸ್!

7th Pay Commission : ಮೋದಿ ಸಂಪುಟದಿಂದ ಕೇಂದ್ರ ನೌಕರರಿಗೆ ಇಂದು ಬಿಗ್ ಗುಡ್‌ ನ್ಯೂಸ್!

Hindu neighbor gifts plot of land

Hindu neighbour gifts land to Muslim journalist

ಇಂದು ನಡೆಯಲಿರುವ ಮೋದಿ ಸಂಪುಟ ಸಭೆಯಲ್ಲಿ 65 ಲಕ್ಷ ನೌಕರರು ಮತ್ತು 50 ಲಕ್ಷ ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಕುರಿತು ಸರ್ಕಾರದಿಂದ ಮಹತ್ವದ ಮಾಹಿತಿ ನೀಡಲಿದೆ.

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ದೀಪಾವಳಿಗೆ ಮುಂಚಿತವಾಗಿ, ಕೇಂದ್ರವು ಕೇಂದ್ರ ಸರಕಾರಿ ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ಹೀಗಾಗಿ ಸರಕಾರಿ ನೌಕರರ ಡಿಎಯನ್ನು ಶೇಕಡಾ 34 ರಿಂದ 38 ಕ್ಕೆ ಹೆಚ್ಚಿಸಿದೆ. ಇದಕ್ಕೂ ಮೊದಲು ಮಾರ್ಚ್ 2022 ರಲ್ಲಿ ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಾಗಿತ್ತು.

ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು, ಕಾರ್ಮಿಕ ಸಚಿವಾಲಯವು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ. ಈ ಸೂಚ್ಯಂಕವನ್ನು 88 ಕೇಂದ್ರಗಳಿಗೆ ಮತ್ತು ಇಡೀ ದೇಶಕ್ಕೆ ತಯಾರಿಸಲಾಗಿದೆ.
ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಮೋದಿ ಸಂಪುಟದಿಂದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಸರ್ಕಾರದಿಂದ ಈ ಘೋಷಣೆ ಹೊರಬಿದ್ದರೆ ನೌಕರರಿಗೆ ಹೊಸ ವರ್ಷದ ಉಡುಗೊರೆಯಂತೆ ಸಿಹಿ ಸುದ್ದಿ ಲಭಿಸಲಿದೆ. ಅಕ್ಟೋಬರ್‌ವರೆಗಿನ ಎಐಸಿಪಿಐ ಸೂಚ್ಯಂಕದ ಅಂಕಿಅಂಶಗಳನ್ನು ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್‌ಗೆ ಹೋಲಿಸಿದರೆ ಅಕ್ಟೋಬರ್‌ನ ಎಐಸಿಪಿಐ ಸೂಚ್ಯಂಕವು 1.2 ಪಾಯಿಂಟ್‌ಗಳಷ್ಟು ಏರಿಕೆ ಕಂಡಿದ್ದು, ಸೆಪ್ಟೆಂಬರ್‌ನಲ್ಲಿ ಇದು ಶೇ 131.3ರಷ್ಟಿತ್ತು ಇದೀಗ 132.5 ಮಟ್ಟವನ್ನು ತಲುಪಿದೆ.

ಡಿಎ ಶೇ.4ರಷ್ಟು ಹೆಚ್ಚಾದರೆ ಅದು ಶೇ.42ಕ್ಕೆ ಏರಿಕೆಯಾಗಲಿದೆ. ಸೆಪ್ಟೆಂಬರ್‌ನಲ್ಲಿ ಡಿಎ ಹೆಚ್ಚಳದ ಆಧಾರದ ಅನುಸಾರ , ಇದು ಪ್ರಸ್ತುತ ಶೇಕಡಾ 38 ರಷ್ಟಿದೆ. ಈ ಹೆಚ್ಚಳದ ನಂತರ ಉದ್ಯೋಗಿಗಳ ವೇತನದಲ್ಲಿ ಉತ್ತಮ ಏರಿಕೆಯಾಗಲಿದೆ.

ಏಳನೇ ವೇತನ ಆಯೋಗದ ಅಡಿಯಲ್ಲಿ (7ನೇ ವೇತನ ಆಯೋಗ), ಸರ್ಕಾರವು ಪ್ರತಿ ವರ್ಷ ಎರಡು ಬಾರಿ ಡಿಎ ಹೆಚ್ಚಳವನ್ನು ಮಾಡುತ್ತದೆ. ಜನವರಿ 2022 ಮತ್ತು ಜುಲೈ 2022 ರಲ್ಲಿ, ಒಟ್ಟು 7 ಶೇಕಡಾ DA ಹೆಚ್ಚಳವನ್ನು ಘೋಷಿಸಲಾಗಿದೆ.