Home International Sherika de Armas : ಕ್ಯಾನ್ಸರ್’ಗೆ 26ರ ಮಾಜಿ ವಿಶ್ವ ಸುಂದರಿ ಸ್ಪರ್ಧಿ ಬಲಿ –...

Sherika de Armas : ಕ್ಯಾನ್ಸರ್’ಗೆ 26ರ ಮಾಜಿ ವಿಶ್ವ ಸುಂದರಿ ಸ್ಪರ್ಧಿ ಬಲಿ – ಈ ರೋಗ ಲಕ್ಷಣಗಳಿದ್ರೆ ನಿಮಗೂ ಇರಲಿ ಎಚ್ಚರ!!

Sherika de Armas

Hindu neighbor gifts plot of land

Hindu neighbour gifts land to Muslim journalist

Sherika de Armas: ಇಂದು ಕಾಯಿಲೆ -ಕಸಾಲೆಗಳು ಯಾರನ್ನು ಕೇಳಿ ಬರುವುದಿಲ್ಲ. ಅದರಲ್ಲೂ ಹದಿಹರೆಯದ ಯುವಕ ಯುವತಿಯರಿಗಂತೂ ಇಂದು ಎಡಬಿಡದೆ ಅನೇಕ ರೋಗಗಳು ಕಾಡುತ್ತಿದ್ದು, ಕಾಡಿಸಿ, ಪೀಡಿಸಿ ಬಲಿ ಪಡೆಯುತ್ತಿವೆ. ಅದರಲ್ಲೂ ಕೂಡ ಹೃದಯ ಸಂಬಂಧಿ ಕಾಯಿಲೆಗಳು, ಹೃದಯಘಾತಗಳಂತೂ ಎಡಬಿಡದೆ ಯುವಜನತೆಯನ್ನು ಕಾಡುತ್ತಿದ್ದು, ಜನರಲ್ಲಿ ಆತಂಕ ಮನವ ಮಾಡಿದೆ.

ಅಂತೆಯೇ ಇದೀಗ ಶೆರಿಕಾ ಡಿ ಅರ್ಮಾಸ್(Sherika de Armas) ಎಂಬ 26 ವರ್ಷದ ಮಾಜಿ ವಿಶ್ವ ಸುಂದರಿ ಸ್ಪರ್ಧಿಯೊಬ್ಬಳು ಅನಾರೋಗ್ಯದಿಂದ ನಿಧನರಾಗಿದ್ದು, ಹರೆಯದ ಹುಡುಗಿಯ ಸಾವಿನ ಸುದ್ದಿ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಆದರೆ ಇನ್ನೂ ಅಚ್ಚರಿ, ಶಾಕಿಂಕ್ ವಿಚಾರ ಅಂದ್ರೆ ಈಕೆಯ ಸಾವಿಗೆ ಕಾರಣವಾಗಿದ್ದು ಕ್ಯಾನ್ಸರ್!! ಹೌದು ಈ ಪ್ರಾಯಕ್ಕೇ ಕ್ಯಾನ್ಸರ್ ಈ ವಿಶ್ವಸುಂದರಿಯನ್ನು ಬಲಿಪಡೆದುಬಿಟ್ಟಿದೆ.

ಅಂದಹಾಗೆ 2015ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಶೆರಿಕಾ ಉರುಗ್ವೆಯನ್ನು ಪ್ರತಿನಿಧಿಸಿದ್ದರು. ಆದರೀಗ ಎರಡು ವರ್ಷಗಳಿಂದ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಈಕೆ ಮತ್ತು ಕೀಮೋಥೆರಪಿ ಮತ್ತು ರೇಡಿಯೊಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗಿಲ್ಲ !! ವಿಧಿ ಕೂಡ ಬಿಡಲಿಲ್ಲ. ಇನ್ನು ಮೃತ ಶೆರಿಕಾ ಡಿ ಅರ್ಮಾಸ್ ಅವರ ಹಲವಾರು ಸ್ನೇಹಿತರು ಮತ್ತು ಕುಟುಂಬಸ್ಥರು ಅವರ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಮಾಡೆಲಿಂಗ್‌ನ ಹೊರತಾಗಿ, ಶೆರಿಕಾ ಡಿ ಅರ್ಮಾಸ್, ಶೇ ಡಿ ಅರ್ಮಾಸ್ ಬ್ಯೂಟಿ ಸ್ಟುಡಿಯೋ ಮೂಲಕ ವೈಯಕ್ತಿಕ ಆರೈಕೆ, ಮೇಕಪ್ ಮತ್ತು ಕೂದಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು. ತಮ್ಮ ಸಮಯವನ್ನು ಪೆರೆಜ್ ಸ್ಕ್ರೀಮಿನಿ ಫೌಂಡೇಶನ್‌ಗೆ ಮೀಸಲಿಟ್ಟಿದ್ದರು ಶೆರಿಕಾ. ಈ ಫೌಂಡೇಶನ್‌ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುತ್ತದೆ.

ಗರ್ಭಕಂಠದ ಕ್ಯಾನ್ಸರ್ ಎಂದರೇನು?
ಗರ್ಭಕಂಠದ ಕ್ಯಾನ್ಸರ್ ಗರ್ಭಕಂಠದಲ್ಲಿ ಜೀವಕೋಶಗಳ ಬೆಳವಣಿಗೆಯಾಗಿದೆ. ಗರ್ಭಾಶಯದ ಕೆಳಗಿನ ಭಾಗವು ಜನನಾಂಗಗಳಿಗೆ ಸಂಪರ್ಕಿಸುತ್ತದೆ. HPV ಎಂದೂ ಕರೆಯಲ್ಪಡುವ ಹ್ಯೂಮನ್ ಪ್ಯಾಪಿಲೋಮವೈರಸ್‌ನ ಹಲವಾರು ತಳಿಗಳು ಗರ್ಭಕಂಠದ ಕ್ಯಾನ್ಸರ್‌ ಉಂಟುಮಾಡುವಲ್ಲಿ ಪಾತ್ರವಹಿಸುತ್ತವೆ. ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿ 30 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. ನಿಯಮಿತ ತಪಾಸಣೆ ಮತ್ತು HPV ಲಸಿಕೆಯಿಂದ ರೋಗವನ್ನು ತಡೆಗಟ್ಟಬಹುದು.

ಇದನ್ನೂ ಓದಿ: Ration Card Holder: ರೇಷನ್ ಕಾರ್ಡ್’ದಾರರಿಗೆ ಮಹತ್ವದ ಸುದ್ದಿ- ಡಿಸೆಂಬರ್ ಒಳಗೆ ಈ ಕೆಲಸ ಮಾಡದಿದ್ರೆ ನಿಮ್ಮ ಕಾರ್ಡ್ ರದ್ದಾಗೋದು ಪಕ್ಕಾ !!