Home Interesting ತನ್ನ ಕನಸಿನ ಪುಟ್ಟ ಸೂರಿಗಾಗಿ ಈ ಯುವತಿ 4 ವರ್ಷಗಳಲ್ಲಿ ಕೂಡಿಟ್ಟಳು ಬರೋಬ್ಬರಿ‌ 61 ಲಕ್ಷ!...

ತನ್ನ ಕನಸಿನ ಪುಟ್ಟ ಸೂರಿಗಾಗಿ ಈ ಯುವತಿ 4 ವರ್ಷಗಳಲ್ಲಿ ಕೂಡಿಟ್ಟಳು ಬರೋಬ್ಬರಿ‌ 61 ಲಕ್ಷ! ಇದಕ್ಕಾಗಿ ಈಕೆ ಏನೆಲ್ಲಾ ಮಾಡಿದ್ದಾಳೆ ಗೊತ್ತಾ.?

Hindu neighbor gifts plot of land

Hindu neighbour gifts land to Muslim journalist

ಈ 24 ರ ಹರೆಯದ ಯುವತಿಗೆ ಅದಮ್ಯ ಆಸೆಯೊಂದಿತ್ತು. ತನಗಾಗಿ ಒಂದು ಪುಟ್ಟ ಸೂರನ್ನು ಕಟ್ಟಿಕೊಳ್ಳೋದು. ಆದರೆ ಹಣದ ಅಡಚಣೆ. ಹಾಗಾಗಿ ಈಕೆ ಒಂದು ಪ್ಲ್ಯಾನ್ ಮಾಡುತ್ತಾಳೆ. ಇದರ ಮೂಲಕ 4 ವರ್ಷದಲ್ಲಿ ಒಂದು ಸೂರನ್ನು ತನ್ನದಾಗಿಸಿಕೊಂಡಿದ್ದಾಳೆ. ಈಕೆ ಪ್ಲ್ಯಾನ್ ಏನೆಲ್ಲಾ ಮಾಡಿದ್ದಾಳೆ ? ನೀವು ಇದನ್ನು ಓದಿದ ನಂತರ ನಿಮಗೆ ಈ ಯುವತಿಯನ್ನು ಭೇಷ್ ಎನಿಸದೇ ಇರಲು ಸಾಧ್ಯವಿಲ್ಲ.

ದ. ಕೊರಿಯಾದ ಜಿ ಹಯಾನ್ ಕ್ವಾಕ್ ಹಣ ಉಳಿತಾಯಕ್ಕೆ ಒಂದು ಉತ್ತಮ ನಿದರ್ಶನವಾಗಿದ್ದಾಳೆ.

ಈ ಯುವತಿಗೆ ಇನ್ನೂ 24ರ ಹರೆಯ. ಆದರೆ, ಮನೆ ಖರೀದಿಸುವ ಕನಸಿಗಾಗಿ ಕೇವಲ 4 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 61 ಲಕ್ಷ ರೂ. ಉಳಿತಾಯ ಮಾಡಿದ್ದಾಳೆ. ಅಲ್ಲದೆ, ತಿಂಗಳಿಗೆ 1.25 ಲಕ್ಷ ರೂ. ಗಳಿಸುತ್ತಿದ್ದಾಳೆ. ದ.ಕೊರಿಯಾದಲ್ಲಿ ಮನೆಗಳು ತುಂಬ ದುಬಾರಿ. ಹೀಗಾಗಿ, ಹೇಗಾದರೂ ಮಾಡಿ ಹಣವುಳಿಸಿ ಒಂದು ಮನೆ ಖರೀದಿಸಲು ಆಕೆ ನಿರ್ಧರಿಸಿದ್ದಳು. ತನ್ನ ವೇತನದ ಬಹುಪಾಲನ್ನು ಉಳಿತಾಯ ಮಾಡಲು ಆರಂಭಿಸಿದಳು. ಮನೆಗೆ ಠೇವಣಿಯ ಹಣವನ್ನು ಮೊದಲಿಗೇ ಕೊಟ್ಟುಬಿಟ್ಟಳು.

ಆಹಾರಕ್ಕಾಗಿ ಕೇವಲ 450 ರೂ.ಗಳನ್ನು ಮಾತ್ರ ಖರ್ಚು ಮಾಡುತ್ತಿದ್ದಳಂತೆ. ದಿನದ ಮೂರೂ ಹೊತ್ತು ನೂಡಲ್ಸ್ ತಿಂದು ಬದುಕಲು ಸಾಧ್ಯವೇ? ಊಹಿಸುವುದೂ ಕಷ್ಟ. ಆದರೆ ಆಕೆ ಆರೋಗ್ಯಕರ ಆಹಾರವನ್ನೇ ಸೇವಿಸುತ್ತಿದ್ದಳು, ಆದರೆ, ಕಡಿಮೆ ವೆಚ್ಚದಲ್ಲಿ. ಅದೇಗೆ ಗೊತ್ತೇ ? ವೆಬ್‌ಸೈಟ್‌ನಲ್ಲಿ ಬರುವ ಸ್ಪರ್ಧೆಗಳು, ಕ್ವಿಜ್‌ಗಳಲ್ಲಿ ಪಾಲ್ಗೊಂಡು ಹಲವು ಬಹುಮಾನಗಳು, ಆಫರ್‌ಗಳನ್ನು, ಡಿಸೈಂಟ್ ಹಾಗೂ ಕೂಪನ್‌ಗಳನ್ನು ಗೆದ್ದು, ಆಹಾರ ಖರೀದಿಗೆ ಅವುಗಳನ್ನೇ ಬಳಸುತ್ತಿದ್ದಳು.

ಆಹಾರ ಒಂದೋ ಉಚಿತವಾಗಿ, ಇಲ್ಲವೇ ತುಂಬ ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು. ಜಿ ಹಯಾನ್ ಕ್ವಾಕ್ ತುಂಬ ಶ್ರಮಜೀವಿ. ಕಚೇರಿಗೆ ತೆರಳಲು ನಿತ್ಯ 2 ತಾಸು ನಡೆದೇ ಹೋಗುತ್ತಿದ್ದಳು. ಪ್ರಯಾಣ ವೆಚ್ಚವಂತೂ ಉಳಿತಾಯವಾಯಿತು. ಮನೆಯಲ್ಲೇ ಮಾಡಿದ ಚಹಾ, ನಲ್ಲಿ ನೀರನ್ನೇ ಕುಡಿಯುತ್ತಿದ್ದಳು. ನೀರನ್ನು ಖರೀದಿಸುವ ಖರ್ಚು ಹೀಗೆ ಉಳಿಯಿತು.

ಈಕೆಯ ಈ ಛಲ, ಈಕೆಯನ್ನು ಆಕೆ ಗುರಿ ಮುಟ್ಟುವಲ್ಲಿ ಸಹಾಯ ಮಾಡಿದ್ದಂತೂ ಸುಳ್ಳಲ್ಲ.