Home International ಹೊಟ್ಟೆ ನೋವೆಂದು ಶೌಚಾಲಯಕ್ಕೆ ತೆರಳಿದ ವಿದ್ಯಾರ್ಥಿನಿಗೆ ಕಾದಿತ್ತು ಬಿಗ್ ಶಾಕ್ !!

ಹೊಟ್ಟೆ ನೋವೆಂದು ಶೌಚಾಲಯಕ್ಕೆ ತೆರಳಿದ ವಿದ್ಯಾರ್ಥಿನಿಗೆ ಕಾದಿತ್ತು ಬಿಗ್ ಶಾಕ್ !!

Hindu neighbor gifts plot of land

Hindu neighbour gifts land to Muslim journalist

ಹೊಟ್ಟೆ ನೋವು ಎಂದು ಲಂಡನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಶೌಚಾಲಯಕ್ಕೆ ತೆರಳಿದಾಗ ಮಗುವಿಗೆ ಜನ್ಮ ನೀಡಿ ಶಾಕ್ ಆಗಿದ್ದಾಳೆ‌ !!

ಮಗುವಿಗೆ ಜನ್ಮ ನೀಡಿದ ಯುವತಿ ಜೆಸ್ ಡೇವಿಸ್(20). ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರು ಸಾಮಾನ್ಯವಾಗಿ ಹೊಂದಿರಬೇಕಾದ ಯಾವುದೇ ಲಕ್ಷಣಗಳನ್ನು ಯುವತಿ ಹೊಂದಿರಲಿಲ್ಲ. ಮುಟ್ಟಿನ ಕಾರಣದಿಂದ ತನಗೆ ಹೊಟ್ಟೆ ನೋವು ಬಂದಿರಬಹುದು ಅಂದುಕೊಂಡಿದ್ದಳು. ಅಲ್ಲದೇ ಯುವತಿಗೆ ಬೇಬಿ ಬಂಪ್ ಕೂಡ ಇರಲಿಲ್ಲ. ಆದರೆ ಸೌತಾಂಪ್ಟನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಶೌಚಾಲಯದಲ್ಲಿ ಕುಳಿತಿರುವಾಗ ಗಂಡು ಮಗುವಿಗೆ ಜನ್ಮ ನೀಡಿ ದಿಗ್ಭ್ರಮೆಗೊಂಡಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಸ್ ಡೇವಿಸ್, ನಾನು ಸರಿಯಾದ ಸಮಯಕ್ಕೆ ಮುಟ್ಟು ಆಗುತ್ತಿರಲಿಲ್ಲ. ಆದ್ದರಿಂದ ನಾನು ಈ ಬಗ್ಗೆ ಹೆಚ್ಚು ಗಮನಹರಿಸಿರಲಿಲ್ಲ. ಕೆಲವೊಮ್ಮ ನನಗೆ ವಾಕರಿಕೆಯ ಅನುಭವವಾಗುತ್ತಿತ್ತು. ಇದಕ್ಕಾಗಿ ಮೆಡಿಸಿನ್ ತೆಗೆದುಕೊಳ್ಳಲು ಪ್ರಾರಂಭಿಸಿದ್ದೆ. ಆದರೆ ಈಗ ಮಗು ಜನಿಸಿರುವುದನ್ನು ನೋಡಿ ನನಗೆ ದೊಡ್ಡ ಶಾಕ್ ಆಗಿದೆ. ಮೊದಲಿಗೆ ಮಗು ಜನಿಸಿದಾಗ ಇದು ಒಂದು ರೀತಿ ಕನಸು ಎಂದು ಅನಿಸಿತು. ಈ ಶಾಕ್‍ನಿಂದ ಹೊರಬರಲು ಮತ್ತು ಮಗುವಿನೊಂದಿಗೆ ಹೊಂದಿಕೊಳ್ಳಲು ನನಗೆ ಕೊಂಚ ಸಮಯಬೇಕಾಯಿತು. ಆದರೀಗ ನಾನು ಚಂದ್ರ ಲೋಕದಲ್ಲಿ, ಕೂಲ್ ಆಗಿರುವ ಮಗುವಿನೊಂದಿಗೆ ಶಾಂತವಾಗಿದ್ದೇನೆ ಎಂದು ಅನಿಸುತ್ತಿದೆ ಎಂದು ಹೇಳಿದ್ದಾಳೆ.

ಇದೊಂದು ಬಹಳ ಅಚ್ಚರಿಯ ಪ್ರಕರಣವಾಗಿದೆ. ಅದಲ್ಲದೆ ಆ ಮಗುವಿನ ತಂದೆ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲವಂತೆ !