Home International UK: ಹಾರಾಟ ಮಾಡುವಾಗಲೇ ಸೇನಾ ವಿಮಾನದಲ್ಲಿ ಸೆಕ್ಸ್ ಮಾಡುತ್ತಾ ಸಿಕ್ಕಿಬಿದ್ದ ಸೈನಿಕರು !!

UK: ಹಾರಾಟ ಮಾಡುವಾಗಲೇ ಸೇನಾ ವಿಮಾನದಲ್ಲಿ ಸೆಕ್ಸ್ ಮಾಡುತ್ತಾ ಸಿಕ್ಕಿಬಿದ್ದ ಸೈನಿಕರು !!

Hindu neighbor gifts plot of land

Hindu neighbour gifts land to Muslim journalist

UK: ಅದು 75 ಕೋಟಿ ಸೇನಾ ವಿಮಾನ. ಆಕಾಶದಲ್ಲಿ ಹಾರಾಟ ನಡೆಸುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಅದು ವಿಚಿತ್ರವಾಗಿ ಹಾರಲು ಶುರು ಮಾಡಿತು. ಅನುಮಾನ ಬಂದು ಪರಿಶೀಲಿಸಿದಾಗ ಸಿಬ್ಬಂದಿಗೆ ದೊಡ್ಡ ಅಘಾತವೇ ಕಾದಿತ್ತು. ಅದೇನಂದರೆ ಇಬ್ಬರು ಯೋಧರು ಮದ್ಯ ಸೇವಿಸಿ ಸೆಕ್ಸ್ ನಲ್ಲಿ ತಲ್ಲೀನರಾಗಿರುವ ದೃಶ್ಯ ಕಂಡುಬದಿದೆ.

ಹೌದು, ಮಿಲಿಟರಿ ತರಬೇತಿ (Military Training) ವೇಳೆ ಸೆಕ್ಸ್‌ ಮಾಡುತ್ತಿದ್ದಾಗಲೇ ಸೈನಿಕರಿಬ್ಬರು ಸಿಕ್ಕಿಬಿದ್ದಿರುವ ಘಟನೆ ಬ್ರಿಟನ್‌ನಲ್ಲಿ (UK Soldier) ನಡೆದಿದೆ. ಅಂದಹಾಗೆ ಈ ಸೇನಾಪಡೆಯ ಅತ್ಯಾಧುನಿಕ ಹೆಲಿಕಾಫ್ಟರ್ ಆಗಿರುವ ಅಪಾಚಿ 8.5 ದಶಲಕ್ಷ ಡಾಲರ್ (75 ಕೋಟಿ ರೂ.) ಮೌಲ್ಯದ್ದು ಎಂದು ತಿಳಿದುಬಂದಿದೆ.

30 ಎಂಎಂ ಫಿರಂಗಿ ಮತ್ತು ಹೆಲ್ಫೈರ್ ಕ್ಷಿಪಣಿಗಳನ್ನು ಹೊಂದಿದ ಶಸ್ತ್ರಸಜ್ಜಿತ ಅಪಾಚೆ ಚಾಪರ್‌ ತರಬೇತಿ ಪೂರ್ಣಗೊಳಿಸಿತ್ತು. ಇದಾದ ಬಳಿಕವೂ ರೋಟರ್‌ಗಳು ಮೇಲಕ್ಕೆ ಮತ್ತು ಕೆಳಕ್ಕೆ ತೂಗಾಡುವುದು ಕಂಡುಬಂದಿತ್ತು. ಹೆಲಿಕಾಪ್ಟರ್‌ನಿಂದ ವಿಚಿತ್ರ ಶಬ್ಧಗಳು ಕೇಳಿಬರುತ್ತಿರು ಪರಿಶೀಲನೆಗೆ ಮುಂದಾದಾಗ ಸೈನಿಕರಿಬ್ಬರು ಅರೆಬೆತ್ತಲಾಗಿ ಚಾಪರ್‌ ಹಿಂಬದಿಯ ಕಾಕ್‌ಪಿಟ್‌ನಲ್ಲಿ ಸೆಕ್ಸ್‌ ಮಾಡುತ್ತಿರುವುದು ಕಂಡುಬಂದಿದೆ. ಪುರುಷ ಸೈನಿಕ ಸೇನಾ ಸಮವಸ್ತ್ರದಲ್ಲಿದ್ದರೆ, ಮಹಿಳೆ ಸಾಮಾನ್ಯ ಉಡುಪಿನಲ್ಲಿದ್ದಳು ಎಂದು ವರದಿಗಳು ತಿಳಿಸಿವೆ.

ಇನ್ನು ಇಬ್ಬರಿಗೂ ಹೆಲಿಕಾಫ್ಟರ್ ನಿಂದ ಹೊರಗೆ ಬರುವಂತೆ ಸೂಚಿಸಿದ್ದೂ ಅಲ್ಲದೇ ಬಟ್ಟೆ ಸರಿಯಾಗಿ ಧರಿಸಿಕೊಳ್ಳುವಂತೆ ಹೇಳಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸುವವರೆಗೂ ಇಬ್ಬರೂ ಯೋಧರನ್ನು ವಶಕ್ಕೆ ಪಡೆಯಲಾಗಿದೆ. ಕೆಲ ಸ್ಥಳೀಯ ವರದಿಗಳ ಪ್ರಕಾರ, 2016ರಲ್ಲಿ ಈ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.