Home International Donald Trump: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಜೀವ ಉಳಸಿದ ಪುರಿ ಜಗನ್ನಾಥ...

Donald Trump: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಜೀವ ಉಳಸಿದ ಪುರಿ ಜಗನ್ನಾಥ !! ಅರೆ.. ಏನಿದು ಪವಾಡ?

Hindu neighbor gifts plot of land

Hindu neighbour gifts land to Muslim journalist

Donald Trump: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಹತ್ಯೆಗೆ ಪ್ರಯತ್ನ ನಡೆದ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಈ ಸಂಬಂಧಿಸಿದಂತೆ ಹಲವಾರು ರೀತಿ ವ್ಯಾಖ್ಯಾನ ಹಾಗೂ ವಿಶ್ಲೇಷಣೆಗಳು ನಡೆಯುತ್ತಿವೆ. ಆದರೀಗ ಪುರಿ ಜಗನ್ನಾಥ(Puri Jagannath) ದೇವರ ಕೃಪೆಯಿಂದಲೇ ಟ್ರಂಪ್ ಜೀವ ಉಳಿದಿದೆ ಎಂದು ಹೇಳಲಾಗುತ್ತಿದೆ.

Anchor Aparna: ಸಾವಿರ ಕನಸು ಹೊತ್ತ ಅಪರ್ಣಾ ಬದುಕು ಯಾಕೆ ಹೀಗಾಯ್ತು?; ಬ್ರಹ್ಮಾಂಡ ಗುರೂಜಿಯಿಂದ ಶಾಕಿಂಗ್ ಹೇಳಿಕೆ

ಹೌದು, ಡೊನಾಲ್ಡ್​ ಟ್ರಂಪ್ ಪೆನ್ಸಿಲ್ವೇನಿಯಾದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು, ಟ್ರಂಪ್​ ಕಿವಿಗೆ ಗಾಯವಾಗಿ ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಇದನ್ನು ಇಸ್ಕಾನ್‌ನ ಕೋಲ್ಕತಾ ವಿಭಾಗದ ಉಪಾಧ್ಯಕ್ಷ ರಾಧಾರಮಣ ದಾಸ್(Radharamana Das) ಅವರು, ಜಗನ್ನಾಥ ದೇವರ ಕೃಪೆಯೇ ಟ್ರಂಪ್ ಜೀವ ಉಳಿಸಿದೆ ಎಂದು ಹೇಳಿ, 48 ವರ್ಷಗಳ ಹಿಂದಿನ ಘಟನೆಯನ್ನು ತಳುಕುಹಾಕಿದ್ದಾರೆ.

48 ವರ್ಷಗಳ ಹಿಂದೆ ಟ್ರಂಪ್ ಮಾಡಿದ್ದೇನು?
1976ರಲ್ಲಿ ಡೊನಾಲ್ಡ್​ ಟ್ರಂಪ್​ ಇಸ್ಕಾನ್ ಭಕ್ತರಿಗೆ ರಥಯಾತ್ರೆ ಆಯೋಜಿಸಲು ಸಹಾಯ ಮಾಡಿದ್ದರು, ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ನ್ಯೂಯಾರ್ಕ್ ನಗರದಲ್ಲಿ ಮೊದಲ ರಥಯಾತ್ರೆಯನ್ನು ಆಯೋಜಿಸಲು ಯೋಜಿಸುತ್ತಿದ್ದಾಗ ಹಲವು ಸವಾಲುಗಳು ಎದುರಾಗಿದ್ದವು, ಯಾತ್ರೆಗೆ ಅನುಮತಿಯೂ ಸಿಕ್ಕಿರಲಿಲ್ಲ, ಆಗ ಟ್ರಂಪ್ ಸಹಾಯ ಮಾಡಿದ್ದಾಗಿ ತಿಳಿಸಿದ್ದಾರೆ.

ಅಲ್ಲದೆ ಸುಮಾರು 48 ವರ್ಷಗಳ ಹಿಂದೆ ನ್ಯೂಯಾರ್ಕ್ ನಗರದಲ್ಲಿ ರಥಯಾತ್ರೆ ನಡೆಸಲು ಇಸ್ಕಾನ್ ಆಲೋಚನೆ ನಡೆಸಿತ್ತು. ಆಗ, ಫಿಫ್ತ್ ಅವೆನ್ಯೂದಲ್ಲಿ ಮೆರವಣಿಗೆಗೆ ಅವಕಾಶ ಪಡೆಯುವುದು ಎಂದರೆ ಪವಾಡಕ್ಕಿಂತ ಕಡಿಮೆಯೇನಲ್ಲ. ರಥ ನಿರ್ಮಾಣಕ್ಕಾಗಿ ಖಾಲಿ ಜಾಗವನ್ನು ಪಡೆಯುವುದು ಸಹ ದೊಡ್ಡ ಸಾಹಸದ ಕೆಲಸವಾಗಿತ್ತು. ಸಾಧ್ಯವಾದಷ್ಟೂ ಪ್ರತಿ ವ್ಯಕ್ತಿಯ ಮನೆ ಬಾಗಿಲನ್ನೂ ಇಸ್ಕಾನ್ ಸದಸ್ಯರು ತಟ್ಟಿದ್ದರು. ಆದರೆ ಅದೆಲ್ಲವೂ ವ್ಯರ್ಥವಾಗಿತ್ತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಆಗಿನ್ನೂ ಉದ್ಯಮಿಯಾಗಿ ಬೆಳೆಯುತ್ತಿದ್ದ ಡೊನಾಲ್ಡ್ ಟ್ರಂಪ್ ಅವರು ಕೃಷ್ಣನ ಭಕ್ತರಿಗೆ ಭರವಸೆಯ ರೇಖೆಯಾಗಿ ಕಾಣಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಅಂದಹಾಗೆ ನಾನು ‘ದೇವರ ದಯೆಯಿಂದ ಬದುಕಿದೆ’ ಎಂದು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕೂದಲೆಳೆಯ ಅಂತರದಿಂದ ಸಾವಿನಿಂದ ಪಾರಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ – ಆಗಸ್ಟ್ 1 ರಿಂದಲೇ 7ನೇ ವೇತನ ಆಯೋಗ ಜಾರಿಗೆ ಸರ್ಕಾರ ಆದೇಶ !!