Home International US: ಪಾಲಕ್ ಪನೀರ್ ವಿವಾದ- ಅಮೇರಿಕಾ ವಿವಿ ಎದುರು ಹೋರಾಡಿ ₹1.8 ಕೋಟಿ ಪರಿಹಾರ ಪಡೆದ...

US: ಪಾಲಕ್ ಪನೀರ್ ವಿವಾದ- ಅಮೇರಿಕಾ ವಿವಿ ಎದುರು ಹೋರಾಡಿ ₹1.8 ಕೋಟಿ ಪರಿಹಾರ ಪಡೆದ ಭಾರತದ ವಿದ್ಯಾರ್ಥಿಗಳು !!

Hindu neighbor gifts plot of land

Hindu neighbour gifts land to Muslim journalist

US: ಅಮೆರಿಕದ ಕೊಲೆರಾಡೋ ಬೋಲ್ಡರ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಆಹಾರದ ವಾಸನೆಯ ಬಗ್ಗೆ ವಿವಾದ ಸೃಷ್ಟಿಯಾಗಿ ಜನಾಂಗೀಯ ತಾರತಮ್ಯದ ರೂಪ ಪಡೆದ ಹಿನ್ನೆಲೆ ಭಾರತದ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳಿಗೆ ವಿವಿಯು ಸುಮಾರು ₹1.8 ಕೋಟಿ ಪರಿಹಾರ ನೀಡಿದೆ.

ಹೌದು, ಅಮೆರಿಕದ ಪ್ರತಿಷ್ಠಿತ ಕೊಲೆರಾಡೋ ಬೋಲ್ಡರ್ ವಿಶ್ವವಿದ್ಯಾಲಯದಲ್ಲಿ ಮಧ್ಯಾಹ್ನದ ಊಟಕ್ಕೆಂದು ಕೇವಲ ‘ಪಾಲಕ್ ಪನೀರ್’ ಬಿಸಿ ಮಾಡಿದ ಘಟನೆ, ಇಬ್ಬರು ಭಾರತೀಯ ಸಂಶೋಧನಾ ವಿದ್ಯಾರ್ಥಿಗಳ ಬದುಕನ್ನೇ ಬದಲಿಸಿದೆ. ಜನಾಂಗೀಯ ತಾರತಮ್ಯದ ವಿವಾದವಾಗಿ ರೂಪಾಂತರಗೊಂಡ ಈ ಘಟನೆಯು ಅಂತಿಮವಾಗಿ ವಿದ್ಯಾರ್ಥಿಗಳಿಗೆ ಸುಮಾರು 1.80 ಕೋಟಿ ರೂಪಾಯಿ (2 ಲಕ್ಷ ಡಾಲರ್) ಪರಿಹಾರ ನೀಡುವಲ್ಲಿ ಅಂತ್ಯಗೊಂಡಿದೆ.

ಏನಿದು ಘಟನೆ?

ಈ ಘಟನೆ 2023 ಸೆಪ್ಟೆಂಬರ್ 5ರಂದು ನಡೆದಿದೆ. ಮಾನವಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಆದಿತ್ಯ ಪ್ರಕಾಶ್ ತಮ್ಮ ಮಧ್ಯಾಹ್ನದ ‘ಪಾಲಕ್ ಪನೀರ್’ ಊಟವನ್ನು ಸಾಮಾನ್ಯ ಮೈಕ್ರೋವೇವ್‌ನಲ್ಲಿ ಬಿಸಿ ಮಾಡುತ್ತಿದ್ದಾಗ, ವಿದೇಶಿ ಸಿಬ್ಬಂದಿಯೊಬ್ಬರು ತಮಗೆ ಆಹಾರವು “ತುಂಬಾ ವಾಸನೆ ಬರುತ್ತಿದೆ” ಎಂದು ಕಿಂಡಲ್ ಮಾಡಿದ್ದಾರೆ.

ಆದಿತ್ಯ ಪ್ರಕಾಶ್ ಇದನ್ನು ಭಾರತದ ಆಹಾರ ಪದ್ಧತಿ ಹಾಗೂ ಹೊಸದಾಗಿ ತಯಾರಾಗಿದೆ ಎಂದು ವಿವರಿಸಿದರೂ, ಸಿಬ್ಬಂದಿ ಈ ಆಹಾರವನ್ನು ವಿರೋಧಿಸಿ ಆಡಳಿತ ಮಂಡಳಿಗೆ ದೂರು ನೀಡಿದ್ದರು. ನಂತರ, ವಿಶ್ವವಿದ್ಯಾಲಯಕ್ಕೆ “ಹೋದೇಶ ಅಥವಾ ಭಾರತೀಯ ಆಹಾರ ತರಬೇಡ ಇಲ್ಲ” ಎಂದು ಸೂಚನೆ ಹೊರಡಿಸಲಾಯಿತು. ಆದಿತ್ಯ ಪ್ರಕಾಶ್ ಅವರು ಭಾರತ ಮೂಲದ ಮತ್ತೊಬ್ಬ ವಿದ್ಯಾರ್ಥಿ ಉರ್ಮಿ ಭಟ್ಟಾಚಾರ್ಯ ಅವರೊಂದಿಗೆ ಸೇರಿ ಅಮೆರಿಕದ ಫೆಡರಲ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಸಲ್ಲಿಸಿದ್ದರು.

ಸುಮಾರು ಎರಡು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಸೆಪ್ಟೆಂಬರ್ 2025 ರಲ್ಲಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳೊಂದಿಗೆ ರಾಜಿ ಮಾಡಿಕೊಂಡಿತು. ಒಪ್ಪಂದದ ಪ್ರಕಾರ ವಿಶ್ವವಿದ್ಯಾಲಯವು ಈ ಜೋಡಿಗೆ 2 ಲಕ್ಷ ಡಾಲರ್ (ಅಂದಾಜು 1.80 ಕೋಟಿ ರೂ.) ಪರಿಹಾರ ಧನ ನೀಡಿದೆ. ಅಲ್ಲದೆ ಅವರಿಗೆ ಸ್ನಾತಕೋತ್ತರ (Master’s) ಪದವಿಗಳನ್ನು ನೀಡಿ ಗೌರವಿಸಿದೆ. ಆದರೆ ಮುಂದಿನ ದಿನಗಳಲ್ಲಿ ಅವರು ಈ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಅಥವಾ ಶಿಕ್ಷಣ ಪಡೆಯುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.