Home Interesting ಮಂಗನಿಂದ ಮಗುವಿನ ಅಪಹರಣ| ಆಟವಾಡುತ್ತಿದ್ದ ಮಗುವನ್ನು ಎಳೆದೊಯ್ದ ಕಿರಾತಕ ವಾನರ!

ಮಂಗನಿಂದ ಮಗುವಿನ ಅಪಹರಣ| ಆಟವಾಡುತ್ತಿದ್ದ ಮಗುವನ್ನು ಎಳೆದೊಯ್ದ ಕಿರಾತಕ ವಾನರ!

Hindu neighbor gifts plot of land

Hindu neighbour gifts land to Muslim journalist

ಮಕ್ಕಳನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿರೋದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಂದು ಕೋತಿ ಮನೆ ಮುಂದೆ ಆಟವಾಡ್ತಿದ್ದ ಮೂರು ವರ್ಷದ ಮಗುವನ್ನು ಕಿಡ್ನಾಪ್ ಮಾಡಲು ಪ್ರಯತ್ನ ಪಟ್ಟಿದೆ.

ಏಪ್ರಿಲ್ 19ರಂದು ನಡೆದ ಘಟನೆ ಇದು. ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯಗಳು ಎಂಥವರನ್ನೂ ಬೆಚ್ಚಿ ಬೀಳಿಸುವಂತಿವೆ.

ಮೂರು ವರ್ಷದ ಮಗುವೊಂದು ತನ್ನ ಸ್ಕೂಟರ್ ತೆಗೆದುಕೊಂಡು ರಸ್ತೆಯಲ್ಲಿ ಆಟವಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಖತರ್ನಾಕ್ ಕೋತಿಯೊಂದು ಅಲ್ಲಿ ಬಂದಿದೆ. ಮಗುವಿಗೆ ಒಂದೇಟು ಹೊಡೆದಿದೆ. ನಂತರ ಮಗುವನ್ನು ಹಿಡಿದು ಎಳೆದೊಯ್ಯಲು ಶುರು ಮಾಡಿದೆ.
ಮಂಗನ ಕೃತ್ಯದಿಂದ ಹೆದರಿದ ಮಗು ಜೋರಾಗಿ ಕಿರುಚಿಕೊಂಡು ಅಳಲಾರಂಭಿಸಿತ್ತು. ಅಳುವ ಶಬ್ದ ಕೇಳಿ ಒಬ್ಬ ವ್ಯಕ್ತಿ ಅಲ್ಲಿಗೆ ಓಡಿ ಬಂದಿದ್ದಾನೆ. ಅಷ್ಟರಲ್ಲಿ ಮಗುವನ್ನು ಮಂಗ ಎಳೆದೊಯ್ಯಲು ಶುರುಮಾಡಿದೆ. ಕೂಡಲೇ ಆತ ಮಗುವನ್ನು ರಕ್ಷಣೆ ಮಾಡಿದ್ದಾನೆ. ಈ ವೇಳೆ ಕಿಡ್ನ್ಯಾಪರ್ ಕೋತಿ ಆತನ ಮುಖಕ್ಕೂ ಪರಚಿ ಗಾಯಗೊಳಿಸಿದೆ. ಈ ಘಟನೆ ನಡೆದಿರುವುದು ಚೀನಾದ ಚೆಂಗಾಕ್ವಿನ್ ಎಂಬಲ್ಲಿ.

ಗ್ರಾಮದ ಸಮೀಪದಲ್ಲೇ ದೊಡ್ಡ ಅರಣ್ಯವಿದ್ದು ಕೋತಿಗಳ ಹಿಂಡೇ ಅಲ್ಲಿ ಬೀಡುಬಿಟ್ಟಿದೆ ಎನ್ನಲಾಗುತ್ತಿದೆ. ಮಗುವನ್ನು ಕಿಡ್ನಾಪ್ ಮಾಡಲು ಯತ್ನಿಸಿದ ಮಂಗಣ್ಣನಿಗಾಗಿ ಅರಣ್ಯ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.