Home International ಒಂದು ಮುತ್ತಿನ ಕಥೆ | ಪ್ರೇಯಸಿಯ ಒಂದೇ ಒಂದು ಮುತ್ತಿಗೆ ಸಾವು ಕಂಡ ಪ್ರಿಯಕರ!!!

ಒಂದು ಮುತ್ತಿನ ಕಥೆ | ಪ್ರೇಯಸಿಯ ಒಂದೇ ಒಂದು ಮುತ್ತಿಗೆ ಸಾವು ಕಂಡ ಪ್ರಿಯಕರ!!!

Hindu neighbor gifts plot of land

Hindu neighbour gifts land to Muslim journalist

ಕೆಲವೊಮ್ಮೆ ನಾವು ಊಹಿಸಲು ಅಸಾಧ್ಯವಾದಂತಹ ಘಟನೆಗಳು ನಡೆಯುತ್ತದೆ. ನಂತರ ಜನರು ಇದು ಹೇಗೆ ಸಾಧ್ಯವಾಯಿತು ಎಂದು ಯೋಚನೆಗೆ ಬೀಳುತ್ತಾರೆ. ಆದರೆ ಇವುಗಳ ಹಿಂದಿನ ಕಾರಣ ಗೊತ್ತಾದಾಗ ಮಾತ್ರ ನಿಜಕ್ಕೂ ಆಶ್ಚರ್ಯಗೊಳ್ಳುತ್ತಾರೆ. ಇದೊಂದು ಪ್ರೇಮಿಗಳ ವಿಷಯ. ಪ್ರಿಯಕರನ ಮೇಲೆ ಅತೀವ ಪ್ರೀತಿ ತೋರಿಸಲು ಹೋದ ಮಹಿಳೆ ಜೈಲು ಪಾಲಾದ ಪ್ರಕರಣ ನಡೆದಿದೆ. ಇದು ಹೇಗೆ ಸಾಧ್ಯ ಅಂತೀರಾ? ಬನ್ನಿ ಹೇಳ್ತೀವಿ.

ಹೌದು ಅಮೆರಿಕದ ಟೆನ್ನೆಸ್ಸಿಯಲ್ಲಿ ಬೆಳಕಿಗೆ ಬಂದಿರುವ ಪ್ರಕರಣವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಜೈಲಿನಲ್ಲಿ ಪ್ರಿಯಕರನನ್ನು ಭೇಟಿಯಾಗಲು ಹೋದ ಗೆಳತಿ ಮುತ್ತು ಕೊಟ್ಟ ತಕ್ಷಣ ಪ್ರಿಯಕರ ಸಾವನ್ನಪ್ಪಿದ್ದಾನೆ. ಪ್ರೇಯಸಿ ನೀಡಿದ ಮುತ್ತು ಪ್ರೇಮಿಗೆ ಹೆಚ್ಚು ದುಬಾರಿಯಾಗಿದೆ. ಆತ ಅಲ್ಲೇ ಕೂಡಲೇ ಸಾವನ್ನಪ್ಪಿದ್ದಾನೆ. ಘಟನೆಯ ನಂತರ ಜೈಲಿನಲ್ಲಿ ನಿಜಕ್ಕೂ ಅಲ್ಲೋಲಕಲ್ಲೋಲವಾಗಿತ್ತು. ಪ್ರಿಯಕರನಿಗಾಗಿ ಗೆಳತಿ ಬಾಯಲ್ಲಿ ಡ್ರಗ್ಸ್ ಸೇವಿಸಿದ್ದಳು. ಅವಳು ಅದನ್ನು ಚುಂಬನದ ನೆಪದಲ್ಲಿ ಅವನಿಗೆ ನೀಡಲು ಬಯಸಿದ್ದಳು, ಆದರೆ ಪ್ರೇಮಿ ಎಲ್ಲಾ ಔಷಧಿಗಳನ್ನು ಒಂದೇ ಬಾರಿಗೆ ನುಂಗಿದ ಕಾರಣ ಸಾವನ್ನಪ್ಪಿದ್ದಾನೆ.

ರಾಚೆಲ್ ಡಾಲಾರ್ಡ್ ಟೆನ್ನೆಸ್ಸಿ ಜೈಲಿನಲ್ಲಿ ಕೈದಿಯಾಗಿದ್ದ ತನ್ನ ಗೆಳೆಯ ಜೋಶುವಾ ಬ್ರೌನ್‌ನನ್ನು ಭೇಟಿಯಾಗಲು ಬಂದಿದ್ದಳು. ಭೇಟಿಯಾಗಲು ಬಂದಾಗ, ರಾಚೆಲ್ ಬ್ರೌನ್‌ಗೆ ಕಿಸ್ ಕೊಟ್ಟಿದ್ದಾಳೆ. ಆದರೆ ಬ್ರೌನ್ ಅಷ್ಟರಲ್ಲೇ ಸಾವನ್ನಪ್ಪಿದ್ದಾನೆ. ತನಿಖೆಯಲ್ಲಿ ಹೊರಬಿದ್ದಿರುವ ಮಾಹಿತಿ ಅಚ್ಚರಿ ಮೂಡಿಸಿದೆ. ತನ್ನ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದ ರಾಚೆಲ್ ಬಾಯಲ್ಲಿ ಮೆಥಾಂಫೆಟಮೈನ್ ಎಂಬ ಮಾದಕ ವಸ್ತು ಇತ್ತು. ಪ್ರಿಯಕರನಿಗೆ ‘ಕಿಸ್’ ಮಾಡುವಾಗ ಈ ಮದ್ದು ಪ್ರೇಮಿಯ ಬಾಯಿಗೆ ವರ್ಗಾಯಿಸಲು ಮುಂದಾಗಿದ್ದಳು. ತನ್ನ ಯೋಜನೆಯಂತೆ ಆಕೆ ಇದರಲ್ಲಿ ಯಶಸ್ವಿಯಾದಳು, ಆದರೆ ಇದರ ಫಲಿತಾಂಶ ಮಾತ್ರ ಘೋರವಾಗಿತ್ತು. ಬಾಯಿಯ ಮೂಲಕ ಇಡೀ ತಿಂಗಳ ಸ್ಟಾಕ್ ಅನ್ನು ಆಕೆ ತನ್ನ ಪ್ರೇಮಿಗೆ ನೀಡಿದ್ದರಿಂದ ಆತ ಏಕಾಏಕಿ ನುಂಗಿದ ಪರಿಣಾಮ ಸಾವನ್ನಪ್ಪಿದ್ದಾನೆ.

ಪ್ರೇಮಿಯ ಬಾಯಿಗೆ ಮಹಿಳೆ ವರ್ಗಾಯಿಸಿದ ಔಷಧದ ತೂಕವು ಸುಮಾರು 14 ಗ್ರಾಂಗಳಷ್ಟಿತ್ತು, ಅದು ಬಹಳ ಹೆಚ್ಚಾಗಿದೆ. ಆದರೆ ಯುವಕ ಏಕಾಏಕಿ ಡ್ರಗ್ಸ್‌ನ್ನು ಒಂದೇ ಬಾರಿಗೆ ಎಲ್ಲ ನುಂಗಿದ್ದಾನೆ. ಅದು ಅವನ ಸಾವಿಗೆ ಕಾರಣವಾಗಿದೆ.

ಕೈದಿಯ ಸಾವಿನ ನಂತರ, ಇದೀಗ ಮಹಿಳೆಯನ್ನು ಕೊಲೆ ಆರೋಪದಡಿ ಬಂಧಿಸಲಾಗಿದೆ. ಜೋಶುವಾ ಬ್ರೌನ್ ಮಾದಕವಸ್ತು ಪ್ರಕರಣದಲ್ಲಿ 11 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದ. ಆತನ ಮರಣ ನಂತರ ಈಗ ರಾಚೆಲ್ ಡಾಲಾರ್ಡ್ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಮತ್ತು ಆಕೆ ವಿರುದ್ಧ ಮಾದಕವಸ್ತು ಕಳ್ಳಸಾಗಣೆ ಮತ್ತು ಕೊಲೆ ಆರೋಪ ದಾಖಲಿಸಿದ್ದಾರೆ.