Home Interesting ಹೆಂಡ್ತಿಗೆ ಗೊತ್ತಿಲ್ಲದೇ ಕದ್ದುಮುಚ್ಚಿ ವೀರ್ಯದಾನ ಮಾಡಿದ ಗಂಡ| ಹೆಂಡ್ತಿಗೆ ಗೊತ್ತಾದಾಗ ನಡೆಯಿತು ರಣರಂಪ !

ಹೆಂಡ್ತಿಗೆ ಗೊತ್ತಿಲ್ಲದೇ ಕದ್ದುಮುಚ್ಚಿ ವೀರ್ಯದಾನ ಮಾಡಿದ ಗಂಡ| ಹೆಂಡ್ತಿಗೆ ಗೊತ್ತಾದಾಗ ನಡೆಯಿತು ರಣರಂಪ !

Hindu neighbor gifts plot of land

Hindu neighbour gifts land to Muslim journalist

ಹೆಂಡ್ತಿಯ ಜೊತೆ ಯಾವುದಾದರೂ ವಿಷಯ ಮುಚ್ಚಿಟ್ಟರೆ ಆಮೇಲೆ ಅದು ಬೇರೆಯವರಿಂದ ಗೊತ್ತಾದರೆ ಅದರಿಂದ ಆಗುವ ಪರಿಣಾಮಗಳನ್ನು ಹಲವಾರು ಗಂಡಂದಿರು ಅನುಭವಸಿರುತ್ತಾರೆ. ಆದರೆ ಇಲ್ಲೊಬ್ಬ ಗಂಡ ಸ್ನೇಹಿತರ ಎದುರಲ್ಲಿ ಹೆಂಡ್ತಿ ಜೊತೆ ಒಂದು ವಿಷಯವನ್ನು ಹೇಳಿ ಸಿಕ್ಕಾಕೊಂಡಿದ್ದಾನೆ. ಹಾಗಾದರೆ ಈ ಪತಿಮಹಾಶಯ ಮಾಡಿದ ಘನಕಾರ್ಯವಾದರೂ ಏನು? ಇದಕ್ಕೆ ಉತ್ತರವಾಗಿ ಹೆಂಡ್ತಿ ಮಾಡಿದ್ದಾದರೂ ಏನು ? ಇಲ್ಲಿದೆ ಅದಕ್ಕೆ ಉತ್ತರ.

2012ರಲ್ಲಿ ಬಿಡುಗಡೆಗೊಂಡ ಬಾಲಿವುಡ್ ಚಿತ್ರ ವಿಕ್ಕಿ ಡೋನರ್, ಈ ಸಿನಿಮಾ ನಿಮಗೆಲ್ಲಾ ಗೊತ್ತೇ ಇರಬಹುದು. ಈ ಸಿನಿಮಾದಲ್ಲಿ ನಟ ಆಯುಷ್ಮಾನ್ ಖುರಾನಾ ವೀರ್ಯ ದಾನಿಯ ಪಾತ್ರದಲ್ಲಿ ನಟಿಸಿದ್ದರು. ಆದರೆ ಅದು ರೀಲ್ ಸ್ಟೋರಿ. ಆದರೆ ರಿಯಲ್ ಲೈಫ್‌ನಲ್ಲೂ ಇಲ್ಲೊಬ್ಬ ಪತಿ ಹಾಗೆ ಮಾಡಿದ್ದಾನೆ ನೋಡಿ.
ಅದು ಕೂಡಾ ಪತ್ನಿಗೂ ಗೊತ್ತಾಗದಂತೆ ವೀರ್ಯವನ್ನು ಮಾರಾಟ ಮಾಡ್ತಿದ್ದನಂತೆ. ಹಾಗಂತ ಹೆಂಡ್ತಿ ಕೈಯಲ್ಲಿ ವಿಷ್ಯಾನ ಎಷ್ಟೂಂತ ಮುಚ್ಚಿಡೋಕೆ ಆಗುತ್ತೆ. ಸರಿಯಾಗೇ ಸಿಕ್ಕಾಕೊಂಡಿದ್ದಾನೆ. ವೀರ್ಯ ಮಾರುತ್ತಿದ್ದುದ್ದನ್ನು ತಿಳಿದು ಪತ್ನಿ ಹೇಗೆ ಪ್ರತಿಕ್ರಿಯಿಸಿದಳು ಎಂಬುದನ್ನು ಪತಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾನೆ.

ಕಷ್ಟದ ದಿನಗಳಲ್ಲಿ ನಾನು ವೀರ್ಯ ಮಾರಾಟ ಮಾಡಿ ನನ್ನ ಹಲವಾರು ಹಣದ ಸಮಸ್ಯೆಯನ್ನು ಹೋಗಲಾಡಿಸಿದ್ದೆ. ಇದರಿಂದ ಸಾವಿರಾರು ರೂಪಾಯಿ ಹಣವನ್ನು ಕೂಡಾ ಗಳಿಸಿದ್ದೆ. ಆದ್ರೆ ಈ ವಿಷಯವನ್ನು ಪತ್ನಿಗೆ ಹೇಳಿರಲಿಲ್ಲ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲ, ಒಮ್ಮೆ ಸ್ನೇಹಿತರ ಜೊತೆ ಮಾತನಾಡುತ್ತಾ ಕುಳಿತಾಗ, ತಾನು ವೀರ್ಯ ಮಾರಾಟ ಮಾಡಿರುವ ಸತ್ಯವನ್ನು ಬಾಯಿ ಬಿಟ್ಟಿದ್ದೆ. ಈ ವೇಳೆ ಆತನ ಪತ್ನಿಯೂ ಅಲ್ಲೇ ಇದ್ದಳು. ತನ್ನ ಪತಿ ವೀರ್ಯ ಮಾರಾಟ ಮಾಡುತ್ತಿದ್ದವ ವಿಷಯ ಕೇಳಿ ಪತ್ನಿ ಸಿಟ್ಟಿಗೆದ್ದಳು ಎಂಬುದಾಗಿ ಹೇಳಿದ್ದಾನೆ.

ವೀರ್ಯ ಮಾರಾಟ ಮಾಡುವ ಹಿಂದೆ ಬೇರೆ ಯಾವುದೇ ಉದ್ದೇಶ ನನಗೆ ಇರಲಿಲ್ಲ. ಆರ್ಥಿಕ ಸಂಕಷ್ಟದಿಂದ ಹೊರಬರಬೇಕಿತ್ತು. ಇದು ಕೇವಲ ಹಣ ಸಂಪಾದನೆಯ ಮಾರ್ಗವಾಗಿತ್ತು. ಈ ವಿಷಯವನ್ನು ಪತ್ನಿಗೆ ಹೇಳಬಾರದಿತ್ತು. ಆದ್ರೆ ಸ್ನೇಹಿತರ ಜೊತೆಗೆ ಮಾತುಕತೆ ವೇಳೆ ಈ ವಿಷಯ ಬಹಿರಂಗಪಡಿಸದಿದ್ರೆ, ಆಕೆಗೆ ವಿಷಯ ಗೊತ್ತಾಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.

ನನ್ನ ಕಾಲೇಜಿನ ಕೊನೆಯ ವರ್ಷದಲ್ಲಿ ನಾನು ನನ್ನ ಹೆಂಡ್ತಿಯನ್ನು ಭೇಟಿಯಾದಾಗ ಪ್ರೀತಿ ಮೂಡಿತು. ಆರು ವರ್ಷದ ಹಿಂದೆ ಇಬ್ಬರೂ ಮದುವೆ ಆಗಿದ್ದೇವೆ. ನಮಗೆ ಮಕ್ಕಳು ಸಹ ಇವೆ. ಆದರೆ ಒಂದು ಸಮಯದಲ್ಲಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ವೇಳೆ ನನಗೆ ಸಹಾಯ ಮಾಡಿದ್ದು ವೀರ್ಯ ಮಾರಾಟದ ಕೆಲಸ. ಇದರಿಂದ ನಾನು ಸುಮಾರು 12 ಸಾವಿರ ರೂ. ಹಣ ಸಂಪಾದಿಸಿದ್ದೆ. ಆದ್ರೆ ಈ ವಿಷಯ ಪತ್ನಿಗೆ ತಿಳಿದಾಗ ಅದು ಇಷ್ಟು ದೊಡ್ಡ ಮಟ್ಟದ ಗಲಾಟೆಗೆ ಕಾರಣ ಆಗುತ್ತೆ ಅತ ತಿಳಿದಿರಲಿಲ್ಲ ಎಂದು ಆತ ಹೇಳಿದ್ದಾನೆ.

ಪತಿ ತನಗೆ ಗೊತ್ತಾಗದ ಹಾಗೇ ಇಷ್ಟೆಲ್ಲಾ ವ್ಯವಹಾರ ಮಾಡಿದ್ದು ಹೆಂಡ್ತಿಗೆ ಸಿಟ್ಟು ಬಂದಿದೆ. ಸಹಜವಾಗಿಯೇ ವೀರ್ಯ ಮಾರಾಟದ ವಿಷಯ ತಿಳಿಯುತ್ತಲೇ ಪತಿ ನನ್ನಿಂದ ಎಲ್ಲಾ ವಿಷಯವನ್ನು ಮುಚ್ಚಿಟ್ಟು ನನಗೆ ಮೋಸ ಮಾಡಿದ್ದಾನೆ ಎಂದು ಹೇಳಿದ್ದಾಳೆ‌.

ಆದ್ರೆ ಪತಿರಾಯ ಮಾತ್ರ ನನಗೆ ಇದರಲ್ಲಿ ಪತ್ನಿಗೆ ಯಾವುದೇ ರೀತಿಯ ಮೋಸ ಮಾಡುವ ಭಾವನೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ವೀರ್ಯ ದಾನದ ಬಗ್ಗೆ ಪತಿಯ ಪೋಸ್ಟ್ ಓದಿದ ನೆಟ್ಟಿಗರು ಭಿನ್ನ-ವಿಭಿನ್ನ ರೀತಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.