Home International Free Taxi Ride: ಕಂಠಪೂರ್ತಿ ಕುಡಿದು ಮನೆಗೆ ಹೋಗಲು ಆಗುತ್ತಿಲ್ಲವೇ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ಮನೆಗೆ...

Free Taxi Ride: ಕಂಠಪೂರ್ತಿ ಕುಡಿದು ಮನೆಗೆ ಹೋಗಲು ಆಗುತ್ತಿಲ್ಲವೇ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ಮನೆಗೆ ಡ್ರಾಪ್ – ಹೊಸ ಆದೇಶ ಇಂದಿನಿಂದಲೇ ಜಾರಿ !

Free Taxi Ride

Hindu neighbor gifts plot of land

Hindu neighbour gifts land to Muslim journalist

Free Taxi Ride: ಇಂದಿನ ದಿನದಲ್ಲಿ ಯುವಕರು ಫ್ರೆಂಡ್ಸ್ ಜೊತೆಗೆ ಪಾರ್ಟಿ (Party) ಮಾಡೋದು ಸಾಮಾನ್ಯ ವಿಷಯವಾಗಿದೆ. ಪಾರ್ಟಿ ಅಂದ್ರೆ ಎಣ್ಣೆ ಪಾರ್ಟಿ. ಬಹುಶಃ ಇಂದಿನ ದಿನ ಡ್ರಿಂಕ್ಸ್ (drinks) ಮಾಡದೇ ಇರುವವರು ಬೆರಳೆಣಿಕೆ ಎಷ್ಟು ಜನ ಮಾತ್ರ ಎಂದೆವಿಸುತ್ತದೆ. ಕೆಲವರಂತೂ ಕಂಠ ಪೂರ್ತಿ ಕುಡಿದು ಮನೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇರುತ್ತಾರೆ. ಇಂಥವರಿಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ (good news) ನೀಡಿದೆ.

ಹೌದು, ಕಂಠಪೂರ್ತಿ ಕುಡಿದು ಮನೆಗೆ ಹೋಗಲು ಸಾಧ್ಯವಾಗದವರಿಗೆ ಸರ್ಕಾರವೇ ಮನೆಗೆ ಡ್ರಾಪ್ (Free Taxi Ride) ಕೊಡುತ್ತೆ. ಅಷ್ಟಕ್ಕೂ ಯಾವ ಸರ್ಕಾರ ಈ ನಿಯಮ ಜಾರಿಗೆ ತಂದಿದ್ದು? ಈ ಯೋಜನೆ ಜಾರಿಗೆ ತಂದಿರುವುದು ಭಾರತ (india) ಸರ್ಕಾರವಲ್ಲ ಬದಲಾಗಿ ಇಟಲಿ (Italy) ಸರ್ಕಾರ. ವರದಿಯ ಪ್ರಕಾರ, ಇಟಲಿಯಲ್ಲಿ ಕುಡಿದು ವಾಹನ ಚಾಲನೆ ಮಾಡುವುದು ಗಂಭೀರ ಸಮಸ್ಯೆಯಾಗಿದೆ.

ಜನರು ಕಂಠಪೂರ್ತಿ ಕುಡಿದು ನಡೆಯಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾಗ ವಾಹನ ಚಲಾಯಿಸಿದರೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಜನರು ಕುಡಿದು ವಾಹನ ಚಾಲನೆ ಮಾಡಿ ಅಪಘಾತ ಸಂಭವಿಸಬಾರದು ಎನ್ನುವ ಉದ್ದೇಶದಿಂದ ಪೈಲಟ್ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ.

ಪಾರ್ಟಿಗೆ ತೆರಳಿ ವಾಪಸ್ ಮನೆಗೆ ಕಾರು (car) ಚಲಾಯಿಸಿಕೊಂಡು ಬರುವುದು ಕಷ್ಟ ಎನಿಸಿದಲ್ಲಿ ಈ ಟ್ಯಾಕ್ಸಿ (Taxi) ಸಹಾಯ ಪಡೆಯಬಹುದು. ಪಾರ್ಟಿ ಸ್ಥಳದಿಂದ ಹೊರಡುವಾಗ ಅತಿಯಾಗಿ ಕುಡಿದು ವಾಹನ ಚಲಾಯಿಸುವುದು ಗಮನಕ್ಕೆ ಬಂದಲ್ಲಿ ಅವರನ್ನು ಮದ್ಯಪಾನ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮಿತಿ ಮೀರಿ ಮದ್ಯಪಾನ ಮಾಡಿದವರಿಗೆ ಟ್ಯಾಕ್ಸಿ ವ್ಯವಸ್ಥೆ ಮಾಡಲಾಗುತ್ತದೆ. ಈ ಯೋಜನೆ ಅನುಷ್ಠಾನವಾದ ಮೊದಲ ದಿನ ರಾತ್ರಿ 21 ಮಂದಿಯನ್ನು ಟ್ಯಾಕ್ಸಿಯಲ್ಲಿ ಕರೆದೊಯ್ಯಲಾಯಿತು. ದೇಶದ 6 ನೈಟ್‌ಕ್ಲಬ್‌ಗಳಲ್ಲಿ ಸೆಪ್ಟೆಂಬರ್ ಮಧ್ಯದ ಒಳಗೆ ಪ್ರಾಯೋಗಿಕ ಯೋಜನೆ ಜಾರಿಯಾಗಲಿದೆ.

ಇದನ್ನೂ ಓದಿ: Traffic Rule: ಸರಕಾರಿ ನೌಕರರೇ ನಿಮಗಿದೋ ಶಾಕಿಂಗ್ ನ್ಯೂಸ್; ಬೈಕ್, ಕಾರು ಚಾಲನೆ ವೇಳೆ ಈ ನಿಯಮ ಕಡ್ಡಾಯ ಪಾಲನೆ!