Home International ಇಂದು ಬೆಳ್ಳಂಬೆಳಗ್ಗೆ 5.2 ತೀವ್ರತೆಯ ಭೂಕಂಪನ !!!

ಇಂದು ಬೆಳ್ಳಂಬೆಳಗ್ಗೆ 5.2 ತೀವ್ರತೆಯ ಭೂಕಂಪನ !!!

Hindu neighbor gifts plot of land

Hindu neighbour gifts land to Muslim journalist

ದೇಶದ ಹಲವು ಕಡೆ ಭೂಕಂಪನ ಉಂಟಾಗುತ್ತಿದೆ‌. ಹವಾಮಾನ ವೈಪರೀತ್ಯದಿಂದಾಗಿ ಈ ಘಟನೆಗಳು ಹೆಚ್ಚಾಗಿ ಸಂಭವಿಸುತ್ತದೆ. ಇಂದು ಮಂಜಾನೆ ಲಕ್ನೋದ ಉತ್ತರ-ಈಶಾನ್ಯ ಭಾಗದಲ್ಲಿ 5.2ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಮಾಹಿತಿ ನೀಡಿದೆ.

ಶನಿವಾರ(ಇಂದು) 1.12ರ ನಸುಕಿನ ವೇಳೆ 82 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5.2ರಷ್ಟು ದಾಖಲಾಗಿದೆ ಎಂದು NCS ಟ್ವಿಟ್ ಮಾಡಿದೆ.
ಭೂಕಂಪನದಿಂದಾಗ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ.

ರಾತ್ರಿವೇಳೆ ಭೂಮಿ ಕಂಪಿಸಿದ ಅನುಭವವಾಗ್ತಿದ್ದು, ಆ ಕೂಡಲೇ ಮನೆಯಲ್ಲಿ ಮಲಗಿದ್ದವರು ಹೊರಗೆ ಓಡಿ ಬಂದಿದ್ದಾರೆ. ಗಾಬರಿಗೊಂಡ ಜನರು ಕೆಲವೆಡೆ ಮೈದಾನಗಳಲ್ಲೇ ರಾತ್ರಿಯಿಡಿ ಕಳೆದಿದ್ದಾರೆ ಎಂಬ ಮಾಹಿತಿ ಇದೆ.

ಉತ್ತರ ಪ್ರದೇಶದ ರಾಜಧಾನಿ ಲಖನೌದಿಂದ 139 ಕಿಲೋ ಮೀಟರ್ ದೂರದ ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಭೂ ಕಂಪನದ ಕೇಂದ್ರ ದಾಖಲಾಗಿದೆ. ಹೀಗೆಂದು ಭೂಕಂಪನ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ಟ್ವೀಟ್ ಮೂಲಕ ಮಾಹಿತಿ ನೀಡಿದೆ