Home International “ಗೂಗಲ್” ಗೆ ಬರೋಬ್ಬರಿ ರೂ.1900 ಕೋಟಿ ದಂಡ ವಿಧಿಸಿದ ಕೋರ್ಟ್ !!!!

“ಗೂಗಲ್” ಗೆ ಬರೋಬ್ಬರಿ ರೂ.1900 ಕೋಟಿ ದಂಡ ವಿಧಿಸಿದ ಕೋರ್ಟ್ !!!!

Hindu neighbor gifts plot of land

Hindu neighbour gifts land to Muslim journalist

ಗೂಗಲ್ ಸಂಸ್ಥೆಗೆ ಬರೋಬ್ಬರಿ 1900 ಕೋಟಿ ರೂ ದಂಡ ವೊಂದನ್ನು ನ್ಯಾಯಾಲಯವೊಂದು ತೀರ್ಪು ನೀಡಿದೆ.
ವಕೀಲರೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಸುಳ್ಳು ಸುದ್ದಿ ಹಬ್ಬಿಸಲು ಬ್ಲಾಗ್‌ವೊಂದಕ್ಕೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಮೆಕ್ಸಿಕೋ ನ್ಯಾಯಾಲಯ ಈ ನಿರ್ಣಯಕ್ಕೆ ಬಂದಿದೆ.

ಮೆಕ್ಸಿಕೋ ಸಿಟಿ ನಗರದ ವಕೀಲ ಉಚ್ ರಿಕ್ಟರ್ ಮೊರೇಲ್ಸ್ ಅವರೇ ಗೂಗಲ್ ವಿರುದ್ಧ ಕೇಸ್ ಗೆದ್ದವರು.
2005 ರಲ್ಲಿ ಈ ಪ್ರಕರಣ ದಾಖಲಾಗಿತ್ತು. ತನ್ನ ವಿರುದ್ಧ ಹಣದ ಅವ್ಯವಹಾರ ಇತ್ಯಾದಿ ಆರೋಪಗಳನ್ನು ಮಾಡಲು ಬ್ಲಾಗ್‌ವೊಂದಕ್ಕೆ ಗೂಗಲ್ ಅವಕಾಶ ಮಾಡಿಕೊಟ್ಟಿದ್ದು, ಇದರಿಂದ ತನಗೆ ಸಾಕಷ್ಟು ಹಾನಿಯಾಗಿದೆ ಎಂದು ಮೊರೇಲ್ಸ್.

ಅಷ್ಟು ಮಾತ್ರವಲ್ಲದೇ ಈ ಬ್ಲಾಗ್ ಅನ್ನು ಕಿತ್ತುಹಾಕಲು ಗೂಗಲ್ ಸಂಸ್ಥೆಗೆ ಮೊರೇಲ್ಸ್ ಮೊರೆ ಹೋಗಿದ್ದರೆನ್ನಲಾಗಿದೆ. ಆದರೆ, ಇವರ ಮನವಿಗೆ ಪುರಸ್ಕರಿಸದ ಕಾರಣಕ್ಕೆ ಗೂಗಲ್‌ ಮೇಲೆ ಈ ವಕೀಲರು ಪ್ರಕರಣ ದಾಖಲಿಸಿದ್ದರು.

ಇದೀಗ ಮೆಕ್ಸಿಕೋ ಸಿಟಿ ನಗರದ ನ್ಯಾಯಾಲಯವು ಗೂಗಲ್‌ನಿಂದ ಆಗಿರುವ ತಪ್ಪನ್ನು ಗುರುತಿಸಿದೆ. “ಐದು ಬಿಲಿಯನ್ ಪೆಸೋಸ್” ಹಣವನ್ನು ದಂಡವಾಗಿ ತೆರುವಂತೆ ಗೂಗಲ್‌ಗೆ ಆದೇಶ ನೀಡಿದೆ. ಐದು ಬಿಲಿಯನ್ ಪೆಸೋಸ್ ಎಂದರೆ ಸುಮಾರು 1900 ಕೋಟಿ ರೂ ಆಗುತ್ತದೆ. ಇದು ಜೂನ್ 13ರಂದು ನೀಡಿದ ತೀರ್ಪಾಗಿದೆ.

ಕೋರ್ಟ್ ಆದೇಶ ವಕೀಲ ರಿಕ್ಟರ್ ಮೊರೇಲ್ಸ್ ಅವರಿಗೆ ಖುಷಿ ನೀಡಿದೆ.

ತನಗೆ ದಂಡ ಕಟ್ಟಲು ಆದೇಶಿಸಿದ ಕೋರ್ಟ್ ತೀರ್ಪಿನ ಬಗ್ಗೆ ಗೂಗಲ್ ಅಸಂತುಷ್ಟಿ ವ್ಯಕ್ತಪಡಿಸಿದೆ. “ಕೋರ್ಟ್ ಅಭಿಪ್ರಾಯ ನಿರಾಧಾರವಾಗಿದೆ. ಅಭಿಪ್ರಾಯ ಸ್ವಾತಂತ್ರ್ಯ ಮತ್ತಿತರ ಮೂಲಭೂತ ತತ್ವಗಳಿಗೆ ಇದು ವಿರುದ್ಧವಾಗಿದೆ. ಕೊನೆಯವರೆಗೂ ಈ ತೀರ್ಪಿನ ವಿರುದ್ಧ ನಿಲ್ಲುತ್ತೇವೆ” ಎಂದು ಗೂಗಲ್ ಹೇಳಿದೆ.

ಗೂಗಲ್‌ ಸಂಸ್ಥೆ ಮೆಕ್ಸಿಕೋದ ಸುಪ್ರೀಂ ಕೋರ್ಟ್‌ನಲ್ಲಿ ಈ ತೀರ್ಪನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಗೂಗಲ್‌ ಗೆ ಇಂಥ ಪ್ರಕರಣಗಳು ಹೊಸತಲ್ಲ. ವಿಶ್ವದ ಹಲವು ಕಡೆ ಈ ರೀತಿಯ ಪ್ರಕರಣಗಳು ಗೂಗಲ್ ವಿರುದ್ಧ ದಾಖಲಾಗಿವೆ.