Home International ಟ್ವಿಟ್ಟರ್ ಖರೀದಿ ಬಳಿಕ ಕೋಕಾ-ಕೋಲಾದ ಮೇಲೆ ಬಿತ್ತು ವಿಶ್ವದ ನಂಬರ್ ಒನ್ ಶ್ರೀಮಂತನ ಕಣ್ಣು !!

ಟ್ವಿಟ್ಟರ್ ಖರೀದಿ ಬಳಿಕ ಕೋಕಾ-ಕೋಲಾದ ಮೇಲೆ ಬಿತ್ತು ವಿಶ್ವದ ನಂಬರ್ ಒನ್ ಶ್ರೀಮಂತನ ಕಣ್ಣು !!

Hindu neighbor gifts plot of land

Hindu neighbour gifts land to Muslim journalist

ವಿಶ್ವದ ಪ್ರಮುಖ ಸಾಮಾಜಿಕ ಮಾಧ್ಯಮ ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್ ಅನ್ನು ಖರೀದಿಸಿದ ಬಳಿಕ ವಿಶ್ವದ ನಂಬರ್ ವನ್ ಶ್ರೀಮಂತ ಎಲೋನ್ ಮಸ್ಕ್ ಕಣ್ಣು ಕೋಕಾ ಕೋಲಾ ಮೇಲೆ ಬಿದ್ದಿದೆ. ವಿಟ್ಟಲ್ ಖರೀದಿಸಿದ 48 ಗಂಟೆಗಳಲ್ಲಿ ಮತ್ತೊಂದು ವಿಚಿತ್ರ ಟ್ವೀಟ್ ನಲ್ಲಿ ಕೋಕಾ-ಕೋಲಾ ಹಾಗೂ ಮೆಕ್‌ಡೊನಾಲ್ಡ್ಸ್ ಮೇಲೆ ಒಲವು ಮೂಡಿರುವುದಾಗಿ ಹೇಳಿದ್ದಾರೆ.

ಟ್ವಿಟರ್‌ ಅನ್ನು ಈಗಾಗಲೇ ಎಲೋನ್ ಮಸ್ಕ್ ತನ್ನ ತೆಕ್ಕೆಗೆ ಪಡೆದುಕೊಂಡಿದ್ದಾರೆ. ಈ ನಡುವೆ ಮತ್ತೊಂದು ವಿಲಕ್ಷಣ ಟ್ವೀಟ್‌ನಲ್ಲಿ, ಟ್ವಿಟರ್ ಮಾಲೀಕ ಮಸ್ಕ್ ‘ಕೊಕೇನ್ ಅನ್ನು ಮರಳಿ ಹಾಕಲು’ ಕೋಕಾ-ಕೋಲಾವನ್ನು ಖರೀದಿಸಲು ಯೋಜಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ, ಮಸ್ಕ್ ಅವರು ಮೆಕ್‌ಡೊನಾಲ್ಡ್ಸ್ ಅನ್ನು ಖರೀದಿಸಲು ಮತ್ತು ಎಲ್ಲಾ ಐಸ್ ಕ್ರೀಮ್ ಯಂತ್ರಗಳನ್ನು ಸರಿಪಡಿಸಲು ಬಯಸುವುದಾಗಿ ಟ್ವೀಟ್ ಮಾಡಿದ್ದರು. ನಂತರ ಮಸ್ಕ್ ತನ್ನ ಹಿಂದಿನ ಮೆಕ್‌ಡೊನಾಲ್ಡ್ ಟ್ವೀಟ್ ಅನ್ನು ಉಲ್ಲೇಖಿಸಿ, “ಆಲಿಸಿ, ನಾನು ಪವಾಡಗಳನ್ನು ಮಾಡಲು ಸಾಧ್ಯವಿಲ್ಲ” ಎಂದು ಬರೆದಿದ್ದಾರೆ.

ಕೋಕಾ ಕೋಲಾ ಖರೀದಿಯ ಟ್ವೀಟ್ ಮೂಲಕ ಮಸ್ಕ್ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಆದರೆ, ಎಲಾನ್ ಮಸ್ಕ್ ಸುಮ್ಮನೆ ತಮಾಷೆಗೆ ಈ ಟ್ವೀಟ್ ಮಾಡಿರಬಹುದು ಎಂಬ ಮಾತು ಕೂಡ ಕೇಳಿಬರುತ್ತಿದೆ. ಟ್ವಿಟ್ಟರ್ ಖರೀದಿ ಮಾಡುತ್ತೇನೆಂದು ಅವರು ಹೇಳಿದಾಗಲೂ ಅದು ತಮಾಷೆ ಎಂದು ಹಲವರು ಭಾವಿಸಿದ್ದರು. ಆದರೆ, ನೋಡನೋಡುತ್ತಿದ್ದಂತೆಯೇ ಆಗಿದ್ದೇ ಬೇರೆ. ಹೀಗಾಗಿ, ಎಲಾನ್ ಮಸ್ಕ್ ಅವರ ಹೇಳಿಕೆಗಳು ಯಾವುದು ಗಂಭೀರ, ಯಾವುದು ತಮಾಷೆ ಎಂದು ವರ್ಗೀಕರಿಸಲು ಸಾಧ್ಯವೇ ಇಲ್ಲ.