

Actress Death: ಥೈಲ್ಯಾಂಡ್‌ನ ಕೊಹ್ ಸಮುಯಿ ದ್ವೀಪದಲ್ಲಿ ದೈತ್ಯ ಅಲೆಯ ಹೊಡೆತಕ್ಕೆ ಸಿಲುಕಿದ ರಷ್ಯಾದ ನಟಿ, 24 ವರ್ಷ ವಯಸ್ಸಿನ ಕಮಿಲ್ಲಾ ಬೆಲ್ಯಾಟ್ಸ್ಕಾಯಾ ಸಾವಿಗೀಡಾಗಿದ್ದಾರೆ. ಈ ಭಯಾನಕ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾಯುವ ಮುನ್ನ ನಟಿ ಧ್ಯಾನದಲ್ಲಿ ಮುಳುಗಿದ್ದಾರೆ. ಈ ಸಂದರ್ಭದಲ್ಲಿ ಅಲೆಗಳ ಹೊಡೆತಕ್ಕೆ ನೀರಿಗೆ ಬಿದ್ದು, ಸಾವಿಗೀಡಾಗಿದ್ದಾರೆ.

ವರದಿಗಳ ಪ್ರಕಾರ, ದ್ವೀಪದಲ್ಲಿ ಪ್ರವಾಸಕ್ಕೆಂದು ಬಂದಿದ್ದ ಬೆಲ್ಯಾಟ್ಸ್ಕಯಾ ಸಮುದ್ರದ ಬಳಿಯ ಬಂಡೆಗಳ ಮೇಲೆ ತನ್ನ ಯೋಗ ಚಾಪೆಯನ್ನು ಇರಿಸಿ ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ದೈತ್ಯ ಅಲೆಯೊಂದು ನಟಿಗೆ ಹೊಡೆದಿದ್ದು, ಅಲೆಯ ಹೊಡತಕ್ಕೆ ನಿಲ್ಲಲು ಪ್ರಯತ್ನ ಪಡುತ್ತಿದ್ದಾಗ, ಇನ್ನೊಂದು ಭೀಕರ ಅಲೆ ಆಕೆಯನ್ನು ಸಮುದ್ರಕ್ಕೆ ಎಳೆಯಿತು.
ವೈರಲ್ ವೀಡಿಯೊದಲ್ಲಿ, ನಟಿ ಪ್ರವಾಹದ ವಿರುದ್ಧ ಹೋರಾಡುವುದನ್ನು ಮತ್ತು ತನ್ನ ಜೀವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವುದನ್ನು ಕಾಣಬಹುದು. ಸ್ಥಳದಲ್ಲಿದ್ದ ಮತ್ತೋರ್ವ ವ್ಯಕ್ತಿ ಆಕೆಯನ್ನು ರಕ್ಷಿಸಲು ಜಿಗಿದಿದ್ದಾನೆ, ಆದರೆ ಅವನು ಇನ್ನೂ ಪತ್ತೆಯಾಗಿಲ್ಲ. ಅವಳ ಯೋಗ ಮ್ಯಾಟ್ ಸಮುದ್ರದ ಮಧ್ಯದಲ್ಲಿ ತೇಲುತ್ತಿರುವಂತೆ ಕಂಡುಬಂದಿತು.
ಬೆಲ್ಯಾಟ್ಸ್ಕಾಯಾ ಅವರು ಧ್ಯಾನ ಮಾಡುತ್ತಿದ್ದ ಬಂಡೆಯಿಂದ 3-4 ಕಿಲೋಮೀಟರ್ ದೂರದಲ್ಲಿ ಮೃತದೇಹ ದೊರಕಿದೆ.ತನ್ನ ಗೆಳೆಯನೊಂದಿಗೆ ಥಾಯ್ಲೆಂಡ್‌ಗೆ ವಿಹಾರಕ್ಕೆ ಬಂದಿದ್ದ ನಟಿ, ಈ ಹಿಂದೆಯೂ ಅದೇ ಸ್ಥಳದಲ್ಲಿ ಧ್ಯಾನ ಮಾಡಿದ್ದಳು ಎಂದು ವರದಿಯಾಗಿದೆ.













