Home Interesting ಮನೆಯ ಹೊರಗೆ ಕುಳಿತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲ ಬುಡದಲ್ಲಿಯೇ ಹೋದ ಉರಗ!

ಮನೆಯ ಹೊರಗೆ ಕುಳಿತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲ ಬುಡದಲ್ಲಿಯೇ ಹೋದ ಉರಗ!

Hindu neighbor gifts plot of land

Hindu neighbour gifts land to Muslim journalist

ಜನವಸತಿ ಪ್ರದೇಶಗಳಲ್ಲಿ ಹಾವುಗಳು ಇರುವುದು ಸಾಮಾನ್ಯ. ಹಳ್ಳಿಗಳಲ್ಲಿ ಇದು ಸಾಮಾನ್ಯ ಸಂಗತಿ. ಹಾವುಗಳನ್ನು ಒಮ್ಮೆಲೇ ಕಂಡಾಗ ಭಯವಾಗುವುದು ಖಂಡಿತ. ಈ ವೀಡಿಯೋ ಕೂಡ ಅಂಥದ್ದೇ ಭಯ ಹುಟ್ಟಿಸುತ್ತೆ.

ಆಸ್ಟ್ರೇಲಿಯಾದ ಗಿಪ್ಸ್ ಲ್ಯಾಂಡ್ ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ಇದು. ರೆಡ್ಡಿಟ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ಮನೆಯ ಹೊರಗೆ ಕುಳಿತು ಇವರು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ತನ್ನ ಕೆಲಸದಲ್ಲಿ ಈ ವ್ಯಕ್ತಿ ತಲ್ಲೀನರಾಗಿದ್ದಾಗ ಇವರು ಬೆಚ್ಚಿಬೀಳುತ್ತಾರೆ. ಜೊತೆಗೆ, ಹಾವು ಎತ್ತ ಸಾಗುತ್ತಿದೆ ಎಂಬುದನ್ನು ಈ ವ್ಯಕ್ತಿ ಸೂಕ್ಷ್ಮವಾಗಿ ನೋಡುತ್ತಿರುವುದನ್ನೂ ಈ ಕ್ಲಿಪ್ ಗಮನಿಸಬಹುದಾಗಿದೆ. ಹಾವು ಬರುವ ಈ ದೃಶ್ಯವನ್ನು ನೋಡಿದಾಗಲೇ ಭಯವಾಗುತ್ತದೆ.