

ಮದುವೆಯಾಗುವಾಗ ಎಲ್ಲಾ ಹೆಣ್ಮಕ್ಕಳಿಗೆ ಒಂದು ಆಸೆ ಇರುತ್ತೆ…ಅದು ಚಿನ್ನ ಒಡವೆಯ ಆಸೆ ಅಲ್ಲ. ಬದಲಾಗಿ. ಪ್ರೀತಿಯ ಆಸೆ. ನಾನು ಮದುವೆಯಾಗುವ ಗಂಡ ನನ್ನನ್ನು ತುಂಬಾ ಪ್ರೀತಿಸಬೇಕು ಹಾಗೂ ನನಗೆ ತವರು ಮನೆ ನೆನಪು ಕಾಡದಿರುವ ಹಾಗೇ ನನ್ನನ್ನು ಅಷ್ಟು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ ಖಂಡಿತವಾಗಿ ಎಲ್ಲಾ ಹೆಣ್ಮಕ್ಕಳಿಗೆ ಇದ್ದೇ ಇರುತ್ತದೆ. ಆದರೆ ಇಲ್ಲೊಬ್ಬಾಕೆ, ಗಂಡನ ಮೇಲೆ ವಿಚಿತ್ರವಾದ ವಿಷಯಕ್ಕೆ ಕೇಸ್ ಹಾಕಿದ್ದಾಳೆ. ಆಕೆಯ ಸಮಸ್ಯೆನೇ ವಿಚಿತ್ರ ಎಂದೇ ಹೇಳಬಹುದು.
ಹೌದು, “ಜಗಳವಾಡದ, ಸದಾ ಪ್ರೀತಿಸುವ ತಪ್ಪು ಮಾಡಿದರೂ ಬೈಯ್ಯದ, ಮನೆ ಕೆಲಸದಲ್ಲಿ ನೆರವಾಗುವ ‘ಪರಿಪೂರ್ಣ’ ಗಂಡನಿಂದ ‘ಬೇಸತ್ತ ಪತ್ನಿಯೊಬ್ಬಳು ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಘಟನೆಯೊಂದು ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದಿದೆ.
ಮದುವೆಯಾಗಿ ಒಂದೂವರೆ ವರ್ಷವಾದರೂ ತಿಂಗಳಾದರೂ ಗಂಡ ಒಂದು ಬಾರಿಯೂ ಜಗಳವಾಡಿಲ್ಲ, ಯಾವುದೇ ವಿಷಯಕ್ಕೂ ಕಿತ್ತಾಡಿಲ್ಲ. ಇದರಿಂದ ಕೋಪಗೊಂಡ ಪತ್ನಿ, ಶರಿಯಾ ನ್ಯಾಯಾಲಯಕ್ಕೆ ಹೋಗಿ ವಿಚ್ಛೇದನ ನೀಡಬೇಕೆಂದು ಕೇಳಿದ್ದಾಳೆ. ಆದರೆ, ಶರಿಯಾ ನ್ಯಾಯಾಲಯ ಪತ್ನಿ ಬೇಡಿಕೆ ತಳ್ಳಿ ಹಾಕಿದೆ.
ಮದುವೆಯಾಗಿ 18 ತಿಂಗಳಾದರೂ ಜಗಳವಾಗಿಲ್ಲ ಯಾವುದೇ ವಿಷಯಕ್ಕೆ ಕೋಪಗೊಂಡಿಲ್ಲ. ಮನಸಿಗೆ ನೋವಾಗುವ ಅವಕಾಶವನ್ನೇ ಕೊಟ್ಟಿಲ್ಲ, ಈ ರೀತಿಯಾದ ಪ್ರೀತಿ ಸಹಿಸಲಾಗದು ಎಂದು ಪತ್ನಿ ದೂರಿದ್ದಾಳೆ.
ನಿಜಕ್ಕೂ ಈಕೆಗೆ ಜೀವನದಲ್ಲಿ ಬೇಕಾಗಿರುವುದೇನು ಎಂದು ಮೊದಲೇ ತಿಳಿದುಕೊಂಡರೇ ಉತ್ತಮ ಎನ್ನಬಹುದು. ದೇವರು ದಿಂಡಿರು ಅಂತ ದೇವಸ್ಥಾನಗಳಿಗೆ ಅಲೆದಾಡಿದರೂ ಪ್ರೀತಿ ಮಾಡುವಂತಹ ಗಂಡ ಸಿಗಲ್ಲ. ಅಂತದರಲ್ಲಿ ಕೇರ್ ಮಾಡುವ ಗಂಡ ಸಿಕ್ಕಾಗ ಈಕೆಯ ಈ ರೀತಿಯ ಅಹವಾಲು ನಿಜಕ್ಕೂ ವಿಶೇಷ ಎಂದೇ ಹೇಳಬಹುದು.













