Home Interesting ‘ ಗಂಡ ಸ್ಮಾರ್ಟ್‌ ಇದ್ದಾನೆ, 2 ವರ್ಷಕ್ಕೆ ಇಬ್ಬರು ಮಕ್ಕಳ ಮಾಡಿದ್ದಾನೆ, ಈಗ ಮಾರುತ್ತಾ ಇದ್ದೇನೆ...

‘ ಗಂಡ ಸ್ಮಾರ್ಟ್‌ ಇದ್ದಾನೆ, 2 ವರ್ಷಕ್ಕೆ ಇಬ್ಬರು ಮಕ್ಕಳ ಮಾಡಿದ್ದಾನೆ, ಈಗ ಮಾರುತ್ತಾ ಇದ್ದೇನೆ ‘ ಎಂದು ಪತಿಯನ್ನು ಹರಾಜಿಗಿಟ್ಟ ಪತ್ನಿ | ಒಮ್ಮೆ ಕೊಂಡ ಮೇಲೆ ವಾಪಸ್ ಇಲ್ಲ, ನೋ ಎಕ್ಸ್ಚೇಂಜ್ !!

Hindu neighbor gifts plot of land

Hindu neighbour gifts land to Muslim journalist

ಅಲ್ಲೊಬ್ಬ ಹೆಂಡತಿ ತನ್ನ ಗಂಡನನ್ನು ಮಾರಲು ಇಟ್ಟಿದ್ದಾಳೆ.
“ನನ್ನ ಗಂಡ ನೋಡಲು ಸ್ಮಾರ್ಟ್‌ ಇದ್ದಾನೆ. ಉದ್ದ ಆರು ಅಡಿಯಿದ್ದು, ಆಕರ್ಷಕವಾಗಿದ್ದಾನೆ. ನಮಗೆ ಎರಡು ಮಕ್ಕಳು ಕೂಡ ಆಗಿವೆ. ತುಂಬಾ ಒಳ್ಳೆಯ ಮೀನುಗಾರ, ಬೇಟೆಗಾರ ಕೂಡಾ. ಯಾರಿಗಾದರೂ ಈತನನ್ನು ಖರೀದಿಸುವ ಆಸಕ್ತಿಯಿದ್ದರೆ ಸಂಪರ್ಕಿಸಿ ” ಎಂದು ಬರೆದು ಜಾಹೀರಾತು ನೀಡಿದ್ದಾಳೆ ಪತ್ನಿ. 

ನ್ಯೂಜಿಲೆಂಡ್‌ನ ಲಿಂಡಿಯಾ ಮೆಕ್‌ ಆಲಿಸ್ಟಾರ್​ ಎನ್ನುವ ಮಹಿಳೆ ತನ್ನ ಪತಿ ಜಾನ್​ರನ್ನು ಹರಾಜಿಗಿಟ್ಟಿದ್ದು, ಇದೀಗ ಭಾರಿ ವೈರಲ್‌ ಆಗಿದೆ. ಆಕೆ ಅಲ್ಲಿನ ಇಬೇ ಸ್ಟೈಲ್​ ಸೈಟ್​, ಟ್ರೇಡ್​ ಮೀ ಎನ್ನುವ ಸೈಟ್​ಗಳಲ್ಲಿ ಗಂಡನ ಫೋಟೋ ಮತ್ತು ಆತನ ವಿವರಗಳ ಸಹಿತ ಜಾಹೀರಾತು ನೀಡಿ ಹರಾಜಿಗಿಟ್ಟಿದ್ದಾಳೆ.

ಪತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಆಕೆ, ತನ್ನ ಗಂಡ ಜಾನ್​ ಆರು ಅಡಿ ಒಂದು ಇಂಚು ಎತ್ತರವಿದ್ದಾನೆ. 37 ವರ್ಷ ವಯಸ್ಸಾಗಿದೆ. ಮೀನುಗಾರಿಕೆ ಮತ್ತು ಬೇಟೆಯಲ್ಲಿ ಪರಿಣಿತಿಯನ್ನು ಹೊಂದಿದ್ದು, ಆತನಿಗೆ ಕೇವಲ ಆಹಾರ ಮತ್ತು ನೀರನ್ನು ನೀಡಿದರೆ ಸಾಕು. ಬೇರೆ ಯಾವುದೇ ತೊಂದರೆ ಆತ ಕೊಡುವುದಿಲ್ಲ. ಆದರೆ ಒಮ್ಮೆ ಹರಾಜಿನಲ್ಲಿ ಮಾರಾಟವಾದರೆ, ಆ ನಂತರ ಬದಲಾವಣೆ ಅಥವಾ ವಾಪಸ್​ ಪಡೆಯುವ ಪ್ರಮೇಯವೇ ಇಲ್ಲ. ಎಕ್ಸ್ಚೇಂಜ್ ಗೆ ಕೂಡಾ ಅವಕಾಶ ಇಲ್ಲ. ಎಂದು ಅದರಲ್ಲಿ ಬರೆದಿದ್ದಾಳೆ.
ಪತಿಯು ಮಾಂಸದ ಬೆಳೆ ಬೆಲೆಯುತ್ತಾನೆ. ಆದರೆ ಆತನಿಗೆ ಮನೆಯ ಕೆಲಸಗಳನ್ನೂ ಕಲಿಸುವ ಅಗತ್ಯವಿದೆ. ಅದನ್ನು ಆತನಿಗೆ ಕಲಿಸುವಷ್ಟು ಸಮಯವಾಗಲೀ ತಾಳ್ಮೆಯಾಗಲಿ ನನಗೆ ಇಲ್ಲ. ಆದ್ದರಿಂದ ಹರಾಜಿಗಿಟ್ಟಿದ್ದೇನೆ ಎಂದು ಆಕೆ ಉಲ್ಲೇಖಿಸಿದ್ದಾಳೆ.
ಅಷ್ಟೇ ಅಲ್ಲ, ಇದು ‘ ಇದು ಸಿಂಗಲ್ ಓನರ್’ ಅಲ್ಲ. ಹಿಂದೆ ಹಲವು ಓನರ್ ಗಳ ಕೈಲಿ ಇದು ( ಗಂಡ) ಇತ್ತು. ಎಂದು ಬರೆದಿದ್ದಾಳೆ ಆತನ 2 ಮಕ್ಕಳ ತಾಯಿ. ಅಂದ್ರೆ ಹಿಂದೆ ಆತನಿಗೆ ಬೇರೆ ಮದ್ವೆ ಆಗಿತ್ತಾ, ಆತ ಸೆಕೆಂಡ್ ಹ್ಯಾಂಡ್, ಥರ್ಡ್ ಹ್ಯಾಂಡ್ ಮಾಡೆಲ್ಲಾ ?! ಸ್ಪಷ್ಟವಿಲ್ಲ.

ಅಷ್ಟಕ್ಕೂ ಈಕೆ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಗೊತ್ತಾ ?. ಆಕೆಯ ಪತಿ ಜಾನ್ ಗೆ ಪತಿಗೆ ಕೆಲವು ಹಾಬಿ ಇದೆಯಂತೆ.  ಬೇಟೆಗಾರಿಕೆ ಮತ್ತು ಮೀನುಗಾರಿಕೆಯ ಹುಚ್ಚ ಆತ. ಅವುಗಳ ಗ್ಯಾನ ಬಂದರೆ ಆತನಿಗೆ ಮನೆ ಮರೆತುಹೋಗುತ್ತದೆ. ಮನೆಗೆ ಬರದೇ ವಾರಗಟ್ಟಲೆ ಹೊರಗೇ ಇದ್ದು, ಕಾಡುಮೇಡು ಅಲೆಯುತ್ತಾ ಮೀನು ಹಿಡಿಯುತ್ತಾ ಬೇಟೆಯಾಡುತ್ತಿರುವ ಪತಿಯಿಂದ ತನಗೆ ಯಾತನೆಯಾಗುತ್ತಿದೆ. ಗಂಡನಿಗೆ ಮನೆಯ ಕಡೆ ಜವಾಬ್ದಾರಿ ಇಲ್ಲ, ಮಕ್ಕಳನ್ನು ಗಮನಿಸುವುದಿಲ್ಲ, ಹಾಗಾಗಿ ಆತನನ್ನು ಹರಾಜಿಗೆ ಇಟ್ಟಿದ್ದೇನೆ ಎಂದು ಆಲಿಸ್ಟಾರ್ ಹೇಳಿದ್ದಾಳೆ ನಂತರ ಹೇಳಿದ್ದಾಳೆ.

ಜಾಹೀರಾತು ನೀಡಿದ ತಕ್ಷಣ ಇದು ವೆಬ್‌ಸೈಟ್ ಗಮನಕ್ಕೆ ಬಂದಿದ್ದು, ನಿಯಮ ಉಲ್ಲಂಘನೆಯಾಗಿದೆ ಎಂದು ಜಾಹೀರಾತನ್ನು ಡಿಲೀಟ್‌ ಮಾಡಲಾಗಿತ್ತು. ಆದರೆ ಅಚ್ಚರಿಯ ವಿಷಯವೆಂದರೆ, ಕ್ರೇಜಿ ಮಹಿಳೆಯೊಬ್ಬಳು 63 ಯುರೋಗಳಿಗೆ (ಅಂದರೆ ಸುಮಾರು 5,300 ರೂಪಾಯಿ) ಆತನನ್ನು ಖರೀದಿಸಲು ಮುಂದೆ ಬಂದಿದ್ದಳು. ಖರೀದಿಸಿದಳೋ, ಇಲ್ಲವೋ ಎಂಬ ವಿಷಯ ಬಹಿರಂಗಗೊಂಡಿಲ್ಲ, ಅದು ದೊಡ್ಡ ಸುದ್ದಿಯಂತೂ ಆಯಿತು. ಪತಿಗೆ ತನ್ನನ್ನು ಮಾರಾಟಕ್ಕೆ ಇಟ್ಟ ಸುದ್ದಿ ಗೆಳೆಯರ ಮುಖಾಂತರ ತಿಳೀತಂತೆ. ಕೂಡಲೇ ಮನೆಗೆ ತೆರಳಿದನೇ ಅಥವಾ ಇನ್ನೂ ಮೀನಿಗೆ ಗಾಳ ಹಾಕುತ್ತಾ ಕಾಲ ತಳ್ಳಿದನೆ ಎಂಬುದು ಸ್ಪಷ್ಟವಿಲ್ಲ. ಒಟ್ಟಿನಲ್ಲಿ ನ್ಯೂಜಿಲೆಂಡ್ ನ ಮಹಿಳೆಯರು ದೊಡ್ಡ ಗಾಳ ಹಾಕಿ ಆತನನ್ನು ಕೊಳ್ಳಲು ಮುಂದಕ್ಕೆ ಬಂದಿರುವುದು ಮಾತ್ರ ಸತ್ಯ. ಕೇವಲ 5000 ರೂಪಾಯಿಗೆ ‘ ಗಂಡ ‘ ಸಿಕ್ರೆ ಬಿಡ್ತಾರಾ ?!