Home Interesting Madhya Pradesh: ಬ್ಯೂಟಿ ಪಾರ್ಲರ್’ಗೆ ಹೋಗೋದು ಬೇಡ ಎಂದ ಪತಿ, ಪತ್ನಿ ಆತ್ಮಹತ್ಯೆ!

Madhya Pradesh: ಬ್ಯೂಟಿ ಪಾರ್ಲರ್’ಗೆ ಹೋಗೋದು ಬೇಡ ಎಂದ ಪತಿ, ಪತ್ನಿ ಆತ್ಮಹತ್ಯೆ!

Beauty Parlor
Image source: The Indian express

Hindu neighbor gifts plot of land

Hindu neighbour gifts land to Muslim journalist

Beauty Parlor: ಮಹಿಳೆಯರಿಗೆ (Women) ಮೇಕಪ್ ಮೇಲೆ ಅತೀವ ಮೋಹ. ಅದೆಷ್ಟೋ ಮಹಿಳೆಯರು ಮೇಕಪ್ (makeup) ಇಲ್ಲದೆ ಹೊರಗೆ ಕಾಲಿಡೋದೇ ಇಲ್ಲ. ಆದರೆ, ಇದೀಗ ನಡೆದಿರುವ ಘಟನೆ ವಿಚಿತ್ರವಾಗಿದೆ. ಕೇವಲ ಬ್ಯೂಟಿ ಪಾರ್ಲರ್’ಗೆ (Beauty Parlor) ಹೋಗೋದು ಬೇಡ ಎಂದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ ನಡೆದಿದೆ.

ಹೌದು, ಇಂದೋರ್‌ನ ಸ್ಟೀಂ ನಂಬರ್ 51 ಪ್ರದೇಶದಲ್ಲಿ ಮೇಕಪ್ ಗಾಗಿ ಮಹಿಳೆ ನೇಣು ಬಿಗಿದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪತಿಯು “ಬ್ಯೂಟಿ ಪಾರ್ಲರ್’ಗೆ ಹೋಗೋದು ಬೇಡ ನಿಲ್ಲಿಸು” ಎಂದು ಪತ್ನಿಗೆ ಹೇಳಿದ್ದು, ಇದರಿಂದ ಮನನೊಂದ ಆಕೆ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

“ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ” ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಉಮಾಶಂಕರ್ ಯಾದವ್ ತಿಳಿಸಿದ್ದಾರೆ.

ಎಲ್ಲಾ ನಟಿಯರು, ಯುವತಿ, ಮಹಿಳೆಯರು ಮೇಕಪ್ ಬಳಸುತ್ತಾರೆ. ಆದರೆ, ಈಕೆಯ ಮೇಕಪ್ ಮೋಹಕ್ಕೆ ತನ್ನ ಜೀವವನ್ನೇ ಕಳೆದುಕೊಂಡಳು. ಮೇಕಪ್ ಜೀವನದಲ್ಧಿನ ಒಂದು ಅಂಶವೇ ಹೊರತು ಜೀವನವೇ ಮೇಕಪ್ ಅಲ್ಲ. ಬಹುಶಃ ತಾಳ್ಮೆಯಿಂದ ಯೋಚಿಸಿದ್ದರೆ, ಬೇರೆ ಪರಿಹಾರ ಇರುತ್ತಿತ್ತು.

 

ಇದನ್ನು ಓದಿ: ಬೆಳ್ತಂಗಡಿ: ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ!