Home Interesting Pension Payment Order: ‘PPO’ ಸಂಖ್ಯೆ ಎಂದರೇನು? ಪರಿಶೀಲಿಸುವುದು ಹೇಗೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

Pension Payment Order: ‘PPO’ ಸಂಖ್ಯೆ ಎಂದರೇನು? ಪರಿಶೀಲಿಸುವುದು ಹೇಗೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

Pension Payment Order
Image source: Fullfom

Hindu neighbor gifts plot of land

Hindu neighbour gifts land to Muslim journalist

Pension Payment Order: PPO ಎಂದರೆ ಪಿಂಚಣಿ ಪಾವತಿ ಆದೇಶ. ಪೆನ್ಷನ್ ಪೇಮೆಂಟ್ ಆರ್ಡರ್ (Pension Payment Order) ಎಂಬುದು 12 ಅಂಕಿಗಳ ಒಂದು ಸಂಖ್ಯೆಯಾಗಿದ್ದು, ನಿವೃತ್ತಿ ವೇತನ ಪಡೆಯಲು ಸಹಾಯ ಮಾಡುತ್ತದೆ. ಉದ್ಯೋಗಿಯೊಬ್ಬನು ನಿವೃತ್ತನಾದ ನಂತರ ಈ ನಂಬರ್ ನೀಡಲಾಗುತ್ತದೆ.

ಇದು ಪಿಂಚಣಿದಾರರಿಗೆ ಪಿಂಚಣಿ ಪಾವತಿಗೆ ಅಧಿಕಾರ ನೀಡುವ ದಾಖಲೆಯಾಗಿದ್ದು, ಪಿಂಚಣಿದಾರರ ಹೆಸರು, ಹುಟ್ಟಿದ ದಿನಾಂಕ ಸೇರಿದಂತೆ‌ ಹಲವು ಮಾಹಿತಿಯನ್ನು ದಾಖಲೆಯು ಒಳಗೊಂಡಿರುತ್ತದೆ. ವ್ಯಕ್ತಿಯೊಬ್ಬ ಪೆನ್ಷನ್ (Pension) ಪಡೆಯಬೇಕಾದರೆ ಪಿಪಿಓ ನಂಬರ್ ಅಗತ್ಯವಾಗಿಬೇಕು. ಈ ಪಿಪಿಒ ಸಂಖ್ಯೆಯು ಪಿಂಚಣಿದಾರರಿಗೆ ತಮ್ಮ ಪಿಂಚಣಿ ಪಾವತಿಗಳನ್ನು ಟ್ರ್ಯಾಕ್ ಮಾಡಲು ಮತ್ತು ಸರಿಯಾದ ವ್ಯಕ್ತಿಗೆ ಪಾವತಿಯನ್ನು ಮಾಡಲಾಗಿದೆಯೆ? ಎಂಬುದನ್ನು ಚೆಕ್ ಮಾಡಲು ಸಹಕಾರಿಯಾಗಿದೆ.

ಪಿಂಚಣಿ ಪಾವತಿಯು ನಿಮಗೆ ಸಿಗಬೇಕು ಎಂದಾದರೆ, PPO ಸಂಖ್ಯೆಗೆ ಲಿಂಕ್ ಮಾಡಿರುವ ಬ್ಯಾಂಕ್ ಖಾತೆ ಇರಬೇಕು. ಬ್ಯಾಂಕ್ ಖಾತೆಯ (bank account) ವಿವರಗಳು ಅಪ್ಡೇಟ್ ಆಗಿಲ್ಲದಿದ್ದರೆ, ಪಿಂಚಣಿ ಪಾವತಿ ನಿಮಗೆ ಸಿಗುವುದಿಲ್ಲ. ಪಿಪಿಓ ನಂಬರ್ (PPO number) ಬಳಸಿ ನಿವೃತ್ತ ಉದ್ಯೋಗಿಯು ತನ್ನ ಪಿಂಚಣಿ ಖಾತೆಯನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸಬಹುದು. ಪಿಂಚಣಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ಪಿಪಿಓ ನಂಬರ್ ನಮೂದಿಸಿ ದೂರು ದಾಖಲಿಸಬಹುದು.

PPO ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?

ಕೇಂದ್ರ ಪಿಂಚಣಿ ಲೆಕ್ಕಪತ್ರ ಕಚೇರಿ (CPAO) ನ ಅಧಿಕೃತ
ವೆಬ್‌ಸೈಟ್ https://cpan.nic.in/ ಗೆ ಭೇಟಿ ನೀಡಿ. ಪಿಂಚಣಿದಾರರ ಮಾಹಿತಿ’ ಟ್ಯಾಬ್ ಮೇಲೆ, ಕ್ಲಿಕ್ ಮಾಡಿ. ಡ್ರಾಪ್-ಡೌನ್ ಮೆನುವಿನಿಂದ ‘ನಿಮ್ಮ PPO ಸಂಖ್ಯೆಯನ್ನು
ತಿಳಿಯಿರಿ’ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಹೆಸರನ್ನ ನಮೂದಿಸಿ, ‘Search’ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ PPO ಸಂಖ್ಯೆಯನ್ನು ವೀಕ್ಷಿಸಬಹುದು.

 

ಇದನ್ನು ಓದಿ: Spoiled milk: ಹಾಲು ಹಾಳಾಯ್ತು ಅಂತ ಚೆಲ್ಲಬೇಡಿ, ಇದರಿಂದ ಇಷ್ಟೆಲ್ಲಾ ತಿಂಡಿಗಳನ್ನು ತಯಾರಿಸ್ಬೋದು ನೋಡಿ!