Home Interesting Vodaphone idea best offers | ಈ ಅಪ್ಲಿಕೇಶನ್ ಮೂಲಕ ರಿಚಾರ್ಜ್ ಮಾಡಿದ್ರೆ ನಿಮಗೆ ಸಿಗುತ್ತೆ...

Vodaphone idea best offers | ಈ ಅಪ್ಲಿಕೇಶನ್ ಮೂಲಕ ರಿಚಾರ್ಜ್ ಮಾಡಿದ್ರೆ ನಿಮಗೆ ಸಿಗುತ್ತೆ ಉಚಿತ 5ಜಿಬಿ ಡೇಟಾ!

Hindu neighbor gifts plot of land

Hindu neighbour gifts land to Muslim journalist

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಹೊಸ-ಹೊಸ ಆಫರ್ ಗಳನ್ನು ನೀಡುತ್ತಾ ಒಂದೊಂದು ಕಂಪನಿಗೆ ಚಾಲೆಂಜ್ ಹಾಕುತ್ತಾ ಮುನ್ನುಗ್ಗುತ್ತಲೇ ಇದೆ. ಅದರಂತೆ ಬೇರೆ ಯಾವುದೇ ಸಂಸ್ಥೆಗೂ ತಾನು ಕಮ್ಮಿ ಇಲ್ಲ ಎಂಬಂತೆ ಐಡಿಯಾ ಬೆಸ್ಟ್ ಆಫರ್ಸ್ ಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಇದೆ.

ಇತ್ತೀಚೆಗಷ್ಟೇ ವೊಡಾಫೋನ್ ಐಡಿಯಾ ಹೊಸ ಆಫರ್ ಹೊರಡಿಸಿದ್ದು, ಸಂಸ್ಥೆ ತಿಳಿಸಿರುವ ಅಪ್ಲಿಕೇಶನ್ ಮೂಲಕ ರಿಚಾರ್ಜ್ ಮಾಡುವವರಿಗೆ ಉಚಿತ 5ಜಿಬಿ ಡೇಟಾ ದೊರೆಯಲಿದೆ. ಹೌದು. ಈ ಆಫರ್ ವೊಡಾಫೋನ್ ಐಡಿಯಾ ಮೊಬೈಲ್ ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡುವವರಿಗೆ ಮಾತ್ರ ಈ ಉಚಿತ ಡೇಟಾ ಸಿಗಲಿದೆ.

ಅಂದಹಾಗೆ ಈ ಕೊಡುಗೆ ಫೆಬ್ರವರಿ 7 ರವರೆಗೆ ಮಾತ್ರ ಇರುತ್ತದೆ. ಹೀಗಾಗಿ ಆದಷ್ಟು ಬೇಗ ಆದಷ್ಟು ಬೇಗ ಈ ಆಫರ್ ನಿಮ್ಮದಾಗಿಸಿಕೊಳ್ಳೋದು ಉತ್ತಮ. ಆದ್ರೆ, ಈ ಕೊಡುಗೆಯು ಎಲ್ಲಾ ಯೋಜನೆಗಳಿಗೆ ಲಭ್ಯವಿಲ್ಲ. ಆಯ್ದ ರೀಚಾರ್ಜ್ ಯೋಜನೆಗಳಲ್ಲಿ ಮಾತ್ರ ಉಚಿತ ಹೆಚ್ಚುವರಿ ಡೇಟಾ ಪ್ರಯೋಜನಗಳು ಲಭ್ಯವಿವೆ. ಹಾಗಿದ್ರೆ ಬನ್ನಿ ಈ ಅಪ್ಲಿಕೇಶನ್ ಮೂಲಕ ರಿಚಾರ್ಜ್ ಮಾಡಿದ್ರೆ ಯಾವ ಪ್ಲಾನ್ ಗಳಿಗೆ ಆಫರ್ ಸಿಗಲಿದೆ ಎಂಬುದನ್ನು ತಿಳಿಯೋಣ.

ರಿಚಾರ್ಜ್ ಪ್ಲಾನ್ 399:
ಈ ರೀಚಾರ್ಜ್ ಮಾಡುವುದರಿಂದ ಈ ಪ್ರಯೋಜನವನ್ನು ಪಡೆಯಬಹುದು. 5 ಜಿಬಿ ಡೇಟಾ ಉಚಿತವಾಗಿ ಬರುತ್ತದೆ. ಈ ಯೋಜನೆಯ 28 ದಿನಗಳು ಮಾತ್ರ ಇರುತ್ತದೆ. ಈ ಯೋಜನೆಯಡಿಯಲ್ಲಿ ದಿನಕ್ಕೆ 2.5 GB ಡೇಟಾ ಪಡೆಯಬಹುದು. ಅಷ್ಟೇ ಅಲ್ಲದೆ, ನೀವು ಮೂರು ತಿಂಗಳ ಕಾಲ Hotstar Disney ಅನ್ನು ಉಚಿತವಾಗಿ ವೀಕ್ಷಿಸಬಹುದು. ಅನಿಯಮಿತ ಕರೆಗಳನ್ನು ಮಾಡಬಹುದು.

ರೂ. 499:
ಈ ಯೋಜನೆಯು ಕೂಡ ಹೆಚ್ಚುವರಿ 5G ಡೇಟಾ ಕೊಡುಗೆಯನ್ನು ಹೊಂದಿದೆ. ಈ ಯೋಜನೆಯ ಮಾನ್ಯತೆ 28 ದಿನಗಳು. ದಿನಕ್ಕೆ 3 ಜಿಬಿ ಡೇಟಾ, ಅನಿಯಮಿತ ಕರೆಗಳನ್ನು ಮಾಡಬಹುದು. ನೀವು ಮೂರು ತಿಂಗಳ ಕಾಲ Hotstar Disney ಅನ್ನು ಉಚಿತವಾಗಿ ವೀಕ್ಷಿಸಬಹುದು.

ರೂ. 299 :
ಈ ಯೋಜನೆಯು ಉಚಿತ ಡೇಟಾವನ್ನು ಸಹ ನೀಡುತ್ತಿದೆ. ಈ ಯೋಜನೆಯು ಹೆಚ್ಚುವರಿ 5 GB ಡೇಟಾದೊಂದಿಗೆ ಬರುತ್ತದೆ. ಇದರ ಮೂಲಕ ದಿನಕ್ಕೆ 1.5 GB ಡೇಟಾ ಹಾಗೂ ಅನಿಯಮಿತ ಕರೆಗಳನ್ನು ಮಾಡಬಹುದು.

ರೂ. 359 :
ಈ ಯೋಜನೆಯಲ್ಲಿಯೂ ಲಭ್ಯವಿದ್ದು, 5 GB ಡೇಟಾವನ್ನು ಹೆಚ್ಚುವರಿಯಾಗಿ ಪಡೆಯಬಹುದು. ದಿನಕ್ಕೆ ಮೂರು ಜಿಬಿ ಡಾಟಾ ಸಿಗುತ್ತದೆ. VI ಆ್ಯಪ್​ನ ಮೂಲಕ ನೀವು ರಿಚಾರ್ಜ್​ ಮಾಡಬಹುದು. ಹಾಗಿದ್ರೆ ಇನ್ಯಾಕೆ ತಡ ಐಡಿಯಾ ಅಪ್ಲಿಕೇಶನ್ ಮೂಲಕ ರಿಚಾರ್ಜ್ ಮಾಡಿ ಫ್ರೀ 5ಜಿಬಿ ನಿಮ್ಮದಾಗಿಸಿಕೊಳ್ಳಿ.