Home Interesting Treasure hunt: ಅಪ್ಪ ಕೊಟ್ಟ ಮ್ಯಾಪ್‌ನಿಂದ 80 ವರ್ಷ ಹಿಂದೆ ಹೂತಿಟ್ಟ ನಿಧಿ ಶೋಧಿಸಿದ ಮಗ!...

Treasure hunt: ಅಪ್ಪ ಕೊಟ್ಟ ಮ್ಯಾಪ್‌ನಿಂದ 80 ವರ್ಷ ಹಿಂದೆ ಹೂತಿಟ್ಟ ನಿಧಿ ಶೋಧಿಸಿದ ಮಗ! ಈ ರೋಚಕ ಕಾರ್ಯಾಚರಣೆಯ ಕಥೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ!

Hindu neighbor gifts plot of land

Hindu neighbour gifts land to Muslim journalist

Treasure hunt: ನಾವು ಇಂದು ಮಾಡಿದ ಯಾವುದಾದ್ರೂ ಕೆಲಸವನ್ನು, ಒಂದು ವಾರ ಬಿಟ್ಟು ಏನು ಮಾಡಿದೆ ಎಂದು ಕೇಳಿದ್ರೆ ಹೇಳಲು ಸಾಧ್ಯವಿಲ್ಲ. ಅಥವಾ ಒಂದು ವರ್ಷಗಳ ಹಿಂದೆ ನಡೆದ ಘಟನೆಗಳನ್ನು ವಿವರಿಸಲು ನಮಗೆ ಆಗುವುದಿಲ್ಲ. ಯಾಕಂದ್ರೆ ಮರೆವಿನ ಭೂತ ನಮ್ಮನ್ನು ಬಿಡದು.ಆದರೆ ಇಲ್ಲೊಬ್ಬ ತನ್ನ ಕುಟುಂಬದವರು ಸುಮಾರು 80 ವರ್ಷಗಳ ಹಿಂದೆ ಹೂತಿಟ್ಟಿದ್ದಂತಹ ನಿಧಿಯನ್ನು ನೆನಪಿಟ್ಟುಕೊಂಡು, ಸದ್ಯ ಅದನ್ನು ಪತ್ತೆ ಹಚ್ಚಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾನೆ. ಅಲ್ಲದೆ ಇದನ್ನು ಓದಿದ ಬಳಿಕ ನಿಮಗೆ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ(Poornachndra Tejaswi) ‘ಪ್ಯಾಪಿಲಾನ್'(Pyapilan) ಪುಸ್ತಕ ನೆನಪಿಗೆ ಬರದಿರಲಾರದು.

ಹೌದು, ಪೋಲ್ಯಾಂಡಿನ(Poland)ಜೇನ್ ಗ್ಲೇಜೇವಸ್ಕಿ(Jen Glevaski) ಎಂಬಾತ, ಮ್ಯಾಪ್ ಒಂದನ್ನು ಹಿಡಿದು ತನ್ನ ಕುಟುಂಬದ ಜಾಡನ್ನು ಪತ್ತೆ ಹಚ್ಚುವ ಮಹಾನ್ ಸಾಹಸ ಮಾಡಿದ್ದಾನೆ. ಇದು ನಮಗೆ ಓದುವಾಗ ಸಾಮಾನ್ಯ ವಿಚಾರ ಅನಿಸಬಹುದು. ಆದರೆ ಬರೋಬ್ಬರಿ 80 ವರ್ಷಗಳ ಹಿಂದಿನ ಕುರುಹನ್ನು ಪತ್ತೆಹಚ್ಚುವುದೆಂದರೆ ಸಾಮಾನ್ಯ ವಿಚಾರ ಅಲ್ಲ ಬಿಡಿ. ಆಗ ಎರಡನೇ ಮಹಾಯುದ್ಧ(2nd world war)ದ ಕಾಲವದು. ಹುಟ್ಟಿ ಬೆಳೆದ ಮನೆಗಳನ್ನು ಬಿಡಬೇಕಾದ ಪರಿಸ್ಥಿತಿ ಇದ್ದಂತ ಸಮಯ. ಅಂತೆಯೇ ಸೈನ್ಯದ ದಾಳಿ ಮುನ್ಸೂಚನೆ ಅರಿತ ಕುಟುಂಬವೊಂದು ರಾತ್ರೋರಾತ್ರಿ ಪಲಾಯನ ಮಾಡಿತು. ಆದರೆ ಪಲಾಯನಕ್ಕೂ ಮುನ್ನ ತಮ್ಮಲ್ಲಿದ್ದ ಬೆಳ್ಳಿಯನ್ನು ಒಂದೆಡೆ ಹೂತುಹಾಕಿತ್ತು. ಇದೀಗ ಈ ನಿಧಿಯನ್ನು 80 ವರ್ಷಗಳ ಬಳಿಕ ಅದೇ ಕುಟುಂಬ ಸದಸ್ಯ ಪತ್ತೆ ಹಚ್ಚಿ ಹೊರತೆಗಿದಿದ್ದಾನೆ. ಇದರ ರೋಚಕ ಕಥೆ ಕೇಳಿದ್ರೆ ನೀವೂ ಅಚರಿ ಪಡ್ತೀರಾ!

ಅಂದು ಪಲಾಯನ ಗೈದ ಕುಟುಂಬದಲ್ಲಿ ನಾಲ್ವರು ಅಣ್ಣ ತಮ್ಮಂದಿರು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಓಡಿದ್ದರು. ಆದರೆ ಆ್ಯಡಮ್ ಗ್ಲೇಜೆವಸ್ಕಿ ಅಜ್ಜ ಮಾತ್ರ ಪೋಲ್ಯಾಂಡ್‌ನಲ್ಲೇ ಉಳಿದುಕೊಂಡಿದ್ದ. ಬಳಿಕ ಸುಮಾರು 20 ವರ್ಷಗಳ ಕಾಲ ಆತ ಪೊಲ್ಯಾಂಡ್‌ನಲ್ಲಿಯೇ ವಾಸವಿದ್ದ. ಅಲ್ಲದೆ ತಾವು ವಾಸವಿದ್ದ ಮನೆ ಹಾಗೂ ಹೂತಿಟ್ಟಿದ್ದ ನಿಧಿಯನ್ನು ಅವನು ಮರೆತಿರಲಿಲ್ಲ. ಆ್ಯಡಮ್ ಅಜ್ಜ ತನ್ನ ಕೊನೆಯ ಗಳಿಗೆಯಲ್ಲಿ, ತನ್ನ ಮಗನಿಗೆ ನಿಧಿ ಕುರಿತು ಮಹತ್ವದ ಮಾಹಿತಿಯನ್ನು ನೀಡಿದ್ದನು. ಈ ಮಾಹಿತಿ ಆಧರಿಸಿ ಆಡ್ಯಮ್ ಪುತ್ರ ಕೈಬರಹದ ಮ್ಯಾಪ್‌ ಬಿಡಿಸಿದ್ದರು. ಈ ಮ್ಯಾಪ್‌ನಲ್ಲಿ ತಮ್ಮ ಜಾಗ, ಮನೆ ಹಾಗೂ ಬೆಳ್ಳಿ ನಿಧಿ ಮಾಹಿತಿಯನ್ನು ಉಲ್ಲೇಖಿಸಿದ್ದರು.

ನಂತರ ಆ್ಯಡಮ್ ಮೊಮ್ಮಗನಾದ ಜೇನ್ ಗ್ಲೇಜೇವಸ್ಕಿ, ತಂದ ಕೊಟ ಇದೇ ಮ್ಯಾಪ್ ಹಿಡಿದು ತನ್ನ ಕುಟುಂಬದ ಜಾಡು ಪತ್ತೆ ಹಚ್ಚಲು ಮುಂದಾದ. ಹಲುವ ವರ್ಷಗಳ ಹಿಂದೆ ಏಕಾಂಗಿ ಶೋಧ ಕಾರ್ಯ ಆರಂಭಿಸಿದ್ದ. ಆದರೆ ಅದು ಸುಲಭದ ಕೆಲಸ ಆಗಿರಲಿಲ್ಲ. 2019ರಲ್ಲಿ ವಾಸವಿದ್ದ ಸ್ಥಳ ಪತ್ತೆಹಿಚ್ಚದ ಜೇನ‌ಗೆ ಬೆಳ್ಳಿಯ ನಿಧಿ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಯಾಕೆಂದ್ರೆ ಸ್ಥಳದಲ್ಲಿ ಕಾಡು ತುಂಬಿತ್ತು. ಎಲ್ಲೆಡೆ ಪೊದೆಗಳು ಆವರಿಸಿತ್ತು.

ಅಲ್ಲಿಂದ ಮರಳಿದ ಜೇನ್, ಶೋಧನಾ ತಜ್ಞರೊಂದಿಗೆ ಮತೆ ಅಲ್ಲಿಗೆ ಹೋದ. 92 ವರ್ಷದ ಶಾಲಾ ಪ್ರಾಂಶುಪಾಲರ ನೆರವಿನ ಮೂಲಕ ಮತ್ತೆ ಶೋಧ ಕಾರ್ಯ ಆರಂಭಿಸಿದ. ಕೊನೆಗೂ ಜೇನ್‌ ಬರೋಬ್ಬರಿ 80 ವರ್ಷಗಳ ಬಳಿಕ ಬೆಳ್ಳಿಯ ನಿಧಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ. ಕುಟುಂಬ ಭದ್ರವಾಗಿಟ್ಟಿದ್ದ ಕೈಬರಹದ ಮ್ಯಾಪ್ ಮೂಲಕ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಬೆಳ್ಳಿ ನಿಧಿಯನ್ನು ಶೋಧಿಸಿ ಹೊರತೆಗೆದ. ಇದೀಗ ಶೋಧನೆ ಬಳಿಕ ಕೋಟ್ಯಾಂತರ ರೂಪಾಯಿ ಮೊತ್ತದ ನಿಧಿ ಹಾಗೂ ಶೋಧನೆ (Treasure hunt) ಕುರಿತು ಸಂಪೂರ್ಣ ಮಾಹಿತಿಯನ್ನು ಕೇಪ್ ಟೌನ್ ವಿಶ್ವವಿದ್ಯಾಲಯವು ತನ್ನ ವೆಬ್‌ಸೈಟ್‌ನಲ್ಲಿ ಅದರ ಸಂಪೂರ್ಣ ಮಾಹಿತಿಯನ್ನು ಪ್ರಕಟಮಾಡಿದೆ.