Home Breaking Entertainment News Kannada Rishabh Panth : DDCA ಯಿಂದ ರಿಷಬ್ ಪಂತ್ ವಿಚಾರದಲ್ಲಿ ಬಂತು ಮಹತ್ವದ ಸುದ್ದಿ!!!ಇದೀಗ ಬಂದ...

Rishabh Panth : DDCA ಯಿಂದ ರಿಷಬ್ ಪಂತ್ ವಿಚಾರದಲ್ಲಿ ಬಂತು ಮಹತ್ವದ ಸುದ್ದಿ!!!ಇದೀಗ ಬಂದ ಸುದ್ದಿ

Hindu neighbor gifts plot of land

Hindu neighbour gifts land to Muslim journalist

ಭಾರತದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಡಿಸೆಂಬರ್ 30ರಂದು ಮುಂಜಾನೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಐಷಾರಾಮಿ ಕಾರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದ್ದು ಈ ಸಂದರ್ಭ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದು, ಶುಕ್ರವಾರ ಮುಂಜಾನೆ ಉತ್ತರಾಖಂಡದ ರೂರ್ಕಿ ಬಳಿ ಕಾರ್ ಅಪಘಾತಕ್ಕೊಳಗಾಗಿದ್ದರು. ಇದರ ಪರಿಣಾಮ ಗಾಯಗೊಂಡ ಅವರನ್ನು ಸಕ್ಷಮ್ ಆಸ್ಪತ್ರೆಯ ಮಲ್ಟಿಸ್ಪೆಷಾಲಿಟಿ ಮತ್ತು ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ.

ರಿಷಬ್ ಪಂತ್ ಶುಕ್ರವಾರ (ಡಿಸೆಂಬರ್ 30) ದೆಹಲಿಯಿಂದ ರಸ್ತೆ ಮೂಲಕ ತನ್ನ ಮನೆ ರೂರ್ಕಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಅವರು ತಮ್ಮದೇ ಆದ ಮರ್ಸಿಡಿಸ್ ಬೆಂಜ್ ಕಾರನ್ನು ಚಲಾಯಿಸುತ್ತಿದ್ದರು ಎನ್ನಲಾಗಿದೆ. ನಿದ್ರೆಯ ಪರಿಣಾಮ ಅವರ ಕಾರಿನ ಬ್ಯಾಲೆನ್ಸ್ ತಪ್ಪಿದ್ದು ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಈ ಬಳಿಕ ಪಂತ್ ಕಿಟಕಿ ಮುರಿದು ಹೊರಬರಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಅವರ ಬಸ್ ಚಾಲಕ ಹಾಗೂ ಕಂಡಕ್ಟರ್ ಸಹಾಯ ಪಡೆದಿದ್ದಾರೆ.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ನಿರ್ದೇಶಕರು ಇಂದು ರಿಷಭ್​ ಪಂತ್​ ಆರೋಗ್ಯದ ವಿಚಾರಣೆ ನಡೆಸಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಏರ್​​ಲಿಫ್ಟ್ ಮಾಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 25 ವರ್ಷದ ಪಂತ್ ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿದ್ದು, ಡೆಹ್ರಾಡೂನ್‌ನಿಂದ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದಲ್ಲಿ (Airlifted )ತರಲು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCA) ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ಶುಕ್ರವಾರ ಪಂತ್ ಅವರ ಕಾರು ಅಪಘಾತಕ್ಕೀಡಾದ ಸಂದರ್ಭ ಈ ಭೀಕರ ಘಟನೆಯ ವೇಳೆ ಅದೃಷ್ಟವಶಾತ್ ಬದುಕುಳಿದದ್ದೇ ದೊಡ್ಡ ಪವಾಡ ಎಂಬ ಮಾತುಗಳು ಕೇಳಿಬರುತ್ತಿವೆ.

ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಶುಕ್ರವಾರ ರಸ್ತೆ ಅಪಘಾತವಾಗಿ ತೀವ್ರ ಗಾಯಗೊಂಡ ಹಿನ್ನೆಲೆ ಪಂತ್‌ ಚೇತರಿಕೆಗಾಗಿ ಜಗತ್ತಿನಾದ್ಯಂತ ಅಭಿಮಾನಿಗಳು ದೇವರ ಮೊರೆ ಇಡುತ್ತಿದ್ದಾರೆ. ನೋವು ಮತ್ತು ಊತದಿಂದಾಗಿ ಪಂತ್ ಅವರ ಪಾದದ ಮತ್ತು ಮೊಣಕಾಲಿನ ಎಂಆರ್‌ಐ ಸ್ಕ್ಯಾನ್ ಅನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.

ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಪಂತ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ವಿಕೆಟ್‌ ಕೀಪರ್‌ನ ಬಲ ಮೊಣಕಾಲಿನ ಅಸ್ಥಿರಜ್ಜು ಗಾಯವಾಗಿರುವ ಅನುಮಾನ ವ್ಯಕ್ತಪಡಿಸಿದ್ದು,ಹಾಗಾಗಿ ಮೊಣಕಾಲಿನ ಮೇಲೆ ಸ್ಪ್ಲಿಂಟಿಂಗ್ ಮಾಡಲಾಗಿದೆ. ಅದೇ ಸಮಯದಲ್ಲಿ, ಅವರ ಬಲ ಪಾದದ ಅಸ್ಥಿರಜ್ಜು ಗಾಯವಾಗಿರುವ ಸಂಭವ ಕೂಡ ಹೆಚ್ಚಿದೆ ಎನ್ನಲಾಗುತ್ತಿದೆ. ಸದ್ಯ ಪಂತ್ ಅವರ ಸ್ಥಿತಿ ಸ್ಥಿರವಾಗಿದ್ದು,ಮಾತನಾಡುತ್ತಿದ್ದು ಜೊತೆಗೆ ಅವರು ಜಾಗೃತರಾಗಿದ್ದಾರೆ ಎಂದು ತಿಳಿದುಬಂದಿದೆ.

ಹರಿಯಾಣ ರಾಜ್ಯ ಸಾರಿಗೆ ಸಂಸ್ಥೆ ಇದೀಗ ಪಂತ್​ ಜೀವ ಉಳಿಸಿದ ಕಂಡೆಕ್ಟರ್ ಮತ್ತು ಚಾಲಕನಿಗೆ ಸನ್ಮಾನ ಮಾಡಿದ್ದು, ರಿಷಭ್ ಪಂತ್ ಅಪಘಾತವಾದ ಕಾರಿನಿಂದ ಹೊರಬರಲು ಸಹಾಯ ಮಾಡಿದ್ದಕ್ಕಾಗಿ ಹರಿಯಾಣ ರಾಜ್ಯ ಸಾರಿಗೆ ನಿಗಮದ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮ್‌ಜೀತ್ ಅವರನ್ನು ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಹರಿಯಾಣ ರಾಜ್ಯ ಸಾರಿಗೆ ನಿಗಮ ಗೌರವಿಸಿದೆ. ಇದರ ನಡುವೆ ರಾಜ್ಯ ಸರ್ಕಾರವೂ ಕೂಡ ಇವರಿಬ್ಬರನ್ನು ಗೌರವಿಸುವ ಸಾಧ್ಯತೆ ದಟ್ಟವಾಗಿದೆ.

ಸುದ್ದಿ ಸಂಸ್ಥೆ ANI ವರದಿ ಅನುಸಾರ, DDCA ನಿರ್ದೇಶಕ ಶ್ಯಾಮ್ ಶರ್ಮಾ, ‘ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCA) ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ರಿಷಭ್ ಪಂತ್ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಅಗತ್ಯ ಕಂಡು ಬಂದಲ್ಲಿ ಪಂತ್​ ಅವರನ್ನು ದೆಹಲಿಗೆ ಸ್ಥಳಾಂತರದ ಜೊತೆಗೆ ಪ್ಲಾಸ್ಟಿಕ್ ಸರ್ಜರಿಗಾಗಿ ರಿಷಬ್ ಪಂತ್ ಅವರನ್ನು ವಿಮಾನದಲ್ಲಿ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಹೇಳಿರುವುದಾಗಿ ವರದಿ ಆಗಿದೆ.