Home Interesting 85 ವರ್ಷದ ಅಜ್ಜನಿಗೆ ಅಜ್ಜಿಯನ್ನು ಹುಡುಕಿ ಮದುವೆ ಮಾಡಿಸಿದ ಮೊಮ್ಮಕ್ಕಳು!!

85 ವರ್ಷದ ಅಜ್ಜನಿಗೆ ಅಜ್ಜಿಯನ್ನು ಹುಡುಕಿ ಮದುವೆ ಮಾಡಿಸಿದ ಮೊಮ್ಮಕ್ಕಳು!!

Hindu neighbor gifts plot of land

Hindu neighbour gifts land to Muslim journalist

ಮೈಸೂರು:ಬದುಕಿನ ಉದ್ದಕ್ಕೂ ಪ್ರತಿಯೊಬ್ಬರಿಗೂ ಜೊತೆಗಾರ ಅಥವಾ ಜೊತೆಗಾತಿ ಬೇಕೇ ಬೇಕು. ಇಲ್ಲವಾದಲ್ಲಿ ಬದುಕು ಒಂಟಿ ಅನಿಸೋದು ಸಾಮಾನ್ಯ. ಇದೇ ರೀತಿ ಇಲ್ಲೊಂದು ಕಡೆ ಅಜ್ಜನ ದುಃಖ ನೋಡಲಾರದೆ ಮೊಮ್ಮಕ್ಕಳು ಸೇರಿ ಇಳಿವಯಸ್ಸಿನಲ್ಲಿ ಅಜ್ಜನಿಗೆ ಜೊತೆಗಾತಿಯನ್ನು ಹುಡುಕಿ ಮದುವೆ ಮಾಡಿಸಿ ಕಣ್ತುಂಬಿಕೊಂಡ ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಉದಯಗಿರಿಯ ಗೌಸಿಯ ನಗರದ ನಿವಾಸಿ, 85 ವರ್ಷದ ಹಾಜಿ ಮುಸ್ತಫಾ ಅವರಿಗೆ 65 ವರ್ಷದ ಫಾತಿಮಾ ಬೇಗಂ ಅವರೊಂದಿಗೆ ಮೊಮ್ಮಕ್ಕಳು ಮುಂದೆ ನಿಂತು ಮದುವೆ ಮಾಡಿಸಿದ್ದಾರೆ.

ಮುಸ್ತಫಾಗೆ ಸದ್ಯ 9 ಜನ ಮಕ್ಕಳಿದ್ದು,ಅವರೆಲ್ಲರಿಗೂ ಮದುವೆಯಾಗಿ ಮೊಮ್ಮಕ್ಕಳೂ ಇದ್ದಾರೆ. ಎಲ್ಲರೂ ಬೇರೆ ಬೇರೆ ಕೆಲಸದಲ್ಲಿ ಇರುವ ಕಾರಣ ಮುಸ್ತಫಾ ಒಂಟಿಯಾಗಿದ್ದರು. ಎರಡು ವರ್ಷದ ಹಿಂದೆ ಮುಸ್ತಫಾ ಪತ್ನಿ ಖುರ್ಷಿದ್ ಬೇಗಂ ಮೃತಪಟ್ಟಿದ್ದರಿಂದ ಒಂಟಿಯಾಗಿದ್ದ ಇವರಿಗೆ ಜೊತೆಗಾರರೊಬ್ಬರಿರಲೆಂದು ಮದುವೆ ಮಾಡಿದ್ದಾರೆ.ಅಂತೂ ಯಾವ ಮೊಮ್ಮಕ್ಕಳಿಗೆ ತಾನೇ ಅಜ್ಜನ ಮದುವೆ ನೋಡೋ ಭಾಗ್ಯ ಇರುತ್ತೆ!!ಈ ಅದೃಷ್ಟ ಇವರಿಗೆ ಒಲಿದಿದೆ ಎಂದೇ ಹೇಳಬಹುದು.