Home Interesting ಶಾರ್ಕ್ ತಿಂದು ವಿಡಿಯೋ ಹಂಚಿಕೊಂಡ ಲೇಡಿ ಫುಡ್ ಬ್ಲಾಗರ್‌! ವಿಡಿಯೋ ನೋಡಿ ಚೀನಾ ಹಾಕ್ತು 15...

ಶಾರ್ಕ್ ತಿಂದು ವಿಡಿಯೋ ಹಂಚಿಕೊಂಡ ಲೇಡಿ ಫುಡ್ ಬ್ಲಾಗರ್‌! ವಿಡಿಯೋ ನೋಡಿ ಚೀನಾ ಹಾಕ್ತು 15 ಲಕ್ಷ ದಂಡ !

Hindu neighbor gifts plot of land

Hindu neighbour gifts land to Muslim journalist

ವಿವಿಧ ರೀತಿಯ ಬ್ಲಾಗರ್ಸ್ ಗಳ ನಡುವೆ ಈ ಫುಡ್ ಬ್ಲಾಗರ್‌ಗಳೇ ಎಲ್ರಿಗಿಂತಲೂ ಡಿಫ್ರೆಂಟ್ ಅನ್ಬೋದು. ಅಲ್ಲದೆ ಹೆಚ್ಚು ಡಿಮ್ಯಾಂಡ್ ಕೂಡ ಇವ್ರಿಗೆ. ಎಲ್ಲಿ ಹೋದರೂ ಬಗೆ ಬಗೆಯ ತಿಂಡಿ-ತಿನಿಸುಗಳು, ವಿಶೇಷವಾದ ಖಾದ್ಯಗಳು, ಹೊಸರುಚಿಯ ಚಾಟ್ಸ್ ಗಳು ಇವರಿಗೆ ಸವಿಯಲು ಸಿಕ್ಕು, ನಂತರ ಅದನ್ನು ಪೋಟೋ, ವಿಡಿಯೋ ತೆಗೆದು ಅಪ್ಲೋಡ್ ಮಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡು, ಸಾಕಷ್ಟು ವೀವ್ಸ್ ಕಮೆಂಟ್ ಪಡೆಯುತ್ತಾರೆ. ಇದರಿಂದ ಅದರ ತಯಾರಕರಿಗೂ ಒಂದು ಪ್ರಚಾರ ಸಿಕ್ಕಂತಾಗುತ್ತದೆ. ಆದರೆ, ಇಲ್ಲೊಬ್ಬರು ಫುಡ್‌ ಬ್ಲಾಗರ್‌ಗೆ ಶಾರ್ಕ್‌ ಅನ್ನು ಖರೀದಿಸಿ, ಬೇಯಿಸಿಕೊಂಡು ತಿಂದಿದ್ದಕ್ಕೆ ಲಕ್ಷ ಲಕ್ಷ ರೂ. ಗಳ ದಂಡ ವಿಧಿಸದಂತಹ ವಿಚಿತ್ರವಾದ ಘಟನೆಯೊಂದು ನಡೆದಿದೆ.

ಹೌದು, ಚೀನಾದ ಫುಡ್ ಬ್ಲಾಗರ್ ಒಬ್ಬರು ಅಕ್ರಮವಾಗಿ ಬಿಳಿ ಶಾರ್ಕ್ ಅನ್ನು ಖರೀದಿಸಿ, ಅಡುಗೆ ಮಾಡುವುದನ್ನು ಮತ್ತು ತಿನ್ನುವುದನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ ನಂತರ ಆಕೆಗೆ 18,500 ಡಾಲರ್‌ ಅಂದರೆ ಬರೋಬ್ಬರಿ 15 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಟಿಝಿ (Tizi) ಎಂದೇ ಖ್ಯಾತಿ ಪಡೆದಿರುವ ಈ ಫುಡ್‌ ಬ್ಲಾಗರ್‌ ಅನ್ನು ಜಿನ್‌ ಮೌಮೌ ಗುರುತಿಸಲಾಗಿದೆ.

ಏಪ್ರಿಲ್ 2022 ರಲ್ಲಿ ಈ ಬ್ಲಾಗರ್, ಗ್ರೇಟ್ ವೈಟ್ ಶಾರ್ಕ್ (Great White Shark) ಅನ್ನು ಅಲಿಬಾಬಾದ ಟಾವೊಬಾವೊ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಿಂದ 7,700 ಯುವಾನ್ ( 93,295 ರೂಪಾಯಿ)ಗೆ ಖರೀದಿಸಿದ್ದಾರೆ. ಮತ್ತು ಕಳೆದ ವರ್ಷ ಜುಲೈನಲ್ಲಿ ಅದನ್ನು ಅಡುಗೆ ಮಾಡಿ ತಿನ್ನುವ ವಿಡಿಯೋವನ್ನು ತನ್ನ ಬ್ಲಾಗ್ ಗೆ ಅಪ್ಲೋಡ್ ಮಾಡಿದ್ದಳು. ಡೌಯಿನ್ (ಚೀನಾದ ಟಿಕ್-ಟಾಕ್ ಅಪ್ಲಿಕೇಶನ್) ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ವೈಲ್ಡ್ ಅನಿಮಲ್ ಪ್ರೊಟೆಕ್ಷನ್ ಕಾನೂನನ್ನು” ಉಲ್ಲಂಘಿಸಿದೆ ಎಂದು ನಾನ್‌ಚಾಂಗ್‌ನಲ್ಲಿರುವ ಅಧಿಕಾರಿಗಳು ಹೇಳಿಕೆ ನೀಡಿದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ಈ ಹಿಂದೆ ವಿಶ್ವ ವನ್ಯಜೀವಿ ನಿಧಿಯು ಗ್ರೇಟ್‌ ವೈಟ್‌ ಶಾರ್ಕ್ ಅನ್ನು ಅಪಾಯದಲ್ಲಿರುವ ಜಾತಿಯೆಂದು ಪಟ್ಟಿಮಾಡಿದೆ. ಜೊತೆಗೆ ಫೆಬ್ರವರಿ 2020 ರಲ್ಲಿ ಚೀನಾ ಕಾಡು ಪ್ರಾಣಿಗಳ ಖರೀದಿ, ಮಾರಾಟ ಮತ್ತು ಸೇವನೆಯನ್ನು ಕೂಡ ಸಂಪೂರ್ಣವಾಗಿ ನಿಷೇಧಿಸಿದೆ. ಅಲ್ಲದೆ ಜನವರಿ 28 ರಂದು ಬಂದಂತಹ ವರದಿಯ ಪ್ರಕಾರ, ಬಿಳಿ ಶಾರ್ಕ್ ಅನ್ನು ಅಕ್ರಮವಾಗಿ ಹೊಂದಿರುವವರು 5 – 10 ವರ್ಷಗಳ ಜೈಲು ಶಿಕ್ಷೆಗೆ ಸಹ ಗುರಿಯಾಗಬಹುದು ಎಂದು ಹೇಳಲಾಗಿದೆ. ಟಿಶ್ಯೂ ಸ್ಕ್ರ್ಯಾಪ್‌ಗಳ ಮೇಲೆ ಡಿಎನ್‌ಎ ಪರೀಕ್ಷೆಯ ಮೂಲಕ ಖರೀದಿಸಿದ ಶಾರ್ಕ್ ಅನ್ನು ಗ್ರೇಟ್‌ ವೈಟ್‌ ಎಂದು ಗುರುತಿಸಲಾಗಿದೆ. ಈ ಮಧ್ಯೆ, ಸಿಬಿಎಸ್ ನ್ಯೂಸ್ ಪ್ರಕಾರ, ಮೀನುಗಾರ ಮತ್ತು ಶಾರ್ಕ್ ಅನ್ನು ಮಾರಾಟ ಮಾಡಿದ ವ್ಯಾಪಾರಿಯನ್ನು ಸಹ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಬ್ಲಾಗರ್ ಅಂಗಡಿಯೊಂದರ ಮುಂದೆ ಸುಮಾರು ಆರು ಅಡಿ ಉದ್ದದ ಶಾರ್ಕ್‌ನೊಂದಿಗೆ ಪೋಸ್ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ ಅದರಲ್ಲಿ, ಶಾರ್ಕ್‌ನ ತಲೆಯನ್ನು ಸ್ಟ್ಯೂನಲ್ಲಿ ಬೇಯಿಸಲಾಗುತ್ತಿದೆ, ಇನ್ನು ಅದರ ದೇಹವನ್ನು ಅರ್ಧದಷ್ಟು ಕತ್ತರಿಸಿ, ಮಸಾಲೆ ಮತ್ತು ಗ್ರಿಲ್ ಮಾಡಲಾಗುತ್ತಿದೆ. ಇದನ್ನು ದೊಡ್ಡ ತುಂಡುಗಳನ್ನು ಕಟ್‌ ಮಾಡುವಾಗ ಇದು ಕೆಟ್ಟದಾಗಿ ಕಾಣಿಸಬಹುದು, ಆದರೆ ಅದರ ಮಾಂಸವು ನಿಜವಾಗಿಯೂ ತುಂಬಾ ಸಾಫ್ಟ್‌ ಆಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ‘ಟಿಝಿ’ ಎಂದು ಕರೆಸಿಕೊಳ್ಳುವ ಮಹಿಳೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.