Home Interesting ಬ್ಲಾಕ್ ಚೈನ್ ಮೂಲಕ ವಿವಾಹ ಬಂಧನಕ್ಕೊಳಗಾದ ದೇಶದ ಪ್ರಪ್ರಥಮ ಜೋಡಿ |

ಬ್ಲಾಕ್ ಚೈನ್ ಮೂಲಕ ವಿವಾಹ ಬಂಧನಕ್ಕೊಳಗಾದ ದೇಶದ ಪ್ರಪ್ರಥಮ ಜೋಡಿ |

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ಆನ್ಲೈನ್ ಯುಗದಲ್ಲಿ ಮದುವೆಗಳು ಕೂಡಾ ಆನ್ಲೈನ್ ನಲ್ಲೇ ಆಗುತ್ತಿದೆ. ಮೆಟಾವರ್ಸ್ ನಲ್ಲಿ ಡಿಜಿಟಲ್ ಮೂಲಕ ಮದುವೆಯಾಗಿರುವ ತಮಿಳು ದಂಪತಿಯ ಬಳಿಕ ಈಗ ಪುಣೆ ಮೂಲದ ಜೋಡಿಯೊಂದು ಬ್ಲಾಕ್ ಚೈನ್ ಮೂಲಕ ವಿವಾಹವಾಗಿದ್ದಾರೆ.

ನ.15, 2021 ರಂದು ಸಾಂಕ್ರಾಮಿಕ ರೋಗ ಕಾರಣದಿಂದಾಗಿ ಈ ಜೋಡಿ‌ ಕಾನೂನು ಬದ್ಧವಾಗಿ ಮದುವೆ ಆಗಿದ್ದರು. ಇದೀಗ ತಮ್ಮ ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಪುಣೆಯ ಅನಿಲ್ ಮತ್ತು ಅವರ ಪತ್ನಿ ಶ್ರುತಿ ನಾಯರ್ ಬ್ಲಾಕ್ ಚೈನ್ ಮೂಲಕ ಅಧಿಕೃತವಾಗಿ ಮದುವೆಯಾಗಿದ್ದಾರೆ.

ಕುಟುಂಬಸ್ಥರು ಮತ್ತು ಸ್ನೇಹಿತರು ಗೂಗಲ್ ಮೀಟ್ ನಲ್ಲಿ ಇವರಿಬ್ಬರು ಲ್ಯಾಪ್ ಟಾಪ್ ಮುಂದೆ ಕುಳಿತು ಪ್ರತಿಜ್ಞೆ ಮಾಡಿಕೊಳ್ಳುವುದನ್ನು ವೀಕ್ಷಿಸಿದ್ದಾರೆ. ಈ ಮದುವೆಯ ಸಮಾರಂಭ 15 ನಿಮಿಷದಲ್ಲಿ ಮುಗಿದಿದೆ. ದಂಪತಿಗಳು ಮಾಡಿದ ಎನ್ ಎಫ್ ಟಿಯು ಶ್ರುತಿ ಅವರ ನಿಶ್ಚಿತಾರ್ಥದ ಉಂಗುರದ ಫೋಟೋವಾಗಿದ್ದು ಚಿತ್ರದ ಮೇಲೆ ಪ್ರತಿಜ್ಞೆಗಳನ್ನು ಬರೆಯಲಾಗಿದೆ.

ಈ ರೀತಿಯ ಮದುವೆ ಸರಿಯೋ ತಪ್ಪೋ ಎಂಬುವುದು ನಮಗೆ ಗೊತ್ತಿಲ್ಲ. ಆದರೆ ಈ ರೀತಿಯ ಮದುವೆ ಆಗಲು ನಾವು ತುಂಬಾ ಯೋಚನೆ ಮಾಡಿ ಮದುವೆ ಆಗಿದ್ದೇವೆ. ಈ ಬಗ್ಗೆ ಹಲವು ಭಿನ್ನಾಭಿಪ್ರಾಯಗಳು ಬಂದವು. ಆದರೂ ನಾವು ಜೊತೆಗಿದ್ದು, ಈ ಸಾಹಸಕ್ಕೆ ಕೈ ಹಾಕಿದೆವು.

ಶೃತಿ ಮತ್ತು ನಾನು ಮದುವೆಯನ್ನು ಎಥೆರಿಯಮ್ ಸ್ಮಾರ್ಟ್ ಒಪ್ಪಂದದೊಂದಿಗೆ ಬ್ಲಾಕ್ ಚೈನ್ ಅಧಿಕೃತ ಗೊಳಿಸಿದ್ದೇವೆ ಎಂದು ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ತಿಳಿದ್ದಾರೆ ಜೋಡಿಗಳು.