Home Interesting ಉದ್ಯೋಗಿಗಳ ಬದಲು ನಿರುದ್ಯೋಗಿಗಳನ್ನು ಹುಟ್ಟು ಹಾಕಲು ಮುನ್ನುಡಿ ಬರೆದ ಸರ್ಕಾರ! ಕೆಲಸವಿಲ್ಲದವರಿಗೆ ಮಾಸಿಕ ಭತ್ಯೆ ನೀಡುವುದಾಗಿ...

ಉದ್ಯೋಗಿಗಳ ಬದಲು ನಿರುದ್ಯೋಗಿಗಳನ್ನು ಹುಟ್ಟು ಹಾಕಲು ಮುನ್ನುಡಿ ಬರೆದ ಸರ್ಕಾರ! ಕೆಲಸವಿಲ್ಲದವರಿಗೆ ಮಾಸಿಕ ಭತ್ಯೆ ನೀಡುವುದಾಗಿ ಘೋಷಣೆ!

Hindu neighbor gifts plot of land

Hindu neighbour gifts land to Muslim journalist

ರಾಜ್ಯ ಸರಕಾರಗಳು ತನ್ನ ಜನರಿಗೆ ವಿವಿಧ ರೀತಿಯ ಭತ್ಯೆಗಳನ್ನು ನೀಡಿ ಅವರ ಜೀವನೋಪಾಯಗಳಿಗೆ ನೆರವಾಗುತ್ತಿದೆ. ಕೆವೊಮ್ಮೆ ಚುನಾವಣೆ ಬೆನ್ನಲ್ಲೇ ಇಂತಹ ಹಲವಾರು ಘೋಷಣೆಗಳನ್ನು ಮಾಡಿ ಮತದಾರರನ್ನು ಹಿಡಿದುಡುವ ಪ್ರಯತ್ನವನ್ನೂ ಮಾಡುತ್ತದೆ. ಇದು ಮಾಮೂಲಿ ವಿಚಾರ. ಆದರೆ ಇಲ್ಲೊಂದು ಸರ್ಕಾರ ಇಂತಹದೇ ಭತ್ಯೆಯ ಘೋಷಣೆ ಮಾಡಿದ್ದು ಎಲ್ಲರೂ ಅಚ್ಚರಿಪಡುವಂತೆ ಮಾಡಿದೆ. ಜೊತೆಗೆ ಜನರನ್ನು ಸೋಮಾರಿ ಮಾಡುವತ್ತ ತನ್ನ ಪ್ರಯತ್ನ ಮುಂದುವರಿಸಿದೆ ಎನ್ನಬಹುದು.

ಹೌದು, ಮುಂದಿನ ವರ್ಷ ಛತ್ತೀಸ್ ಗಢ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆಗೆ ತಯಾರಿ ನಡೆಸುತ್ತಿರುವ ಸಿಎಂ ಭೂಪೇಶ್ ಬಘೇಲ್ ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುವುದಾಗಿ ಘೋಷಿಸಿದ್ದಾರೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.

ಇದು 2018 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿತ್ತು. ಆದರೆ 15 ವರ್ಷಗಳ ನಂತರ ಪಕ್ಷ ಅಧಿಕಾರಕ್ಕೆ ಬಂದಿತು. ನಿನ್ನೆ ದಿನ ಗಣರಾಜ್ಯೋತ್ಸವ ಪ್ರಯುಕ್ತ ಬಸ್ತಾರ್ ಜಿಲ್ಲೆಯ ಪ್ರಧಾನ ಕಛೇರಿ ಜಗದಲ್‌ಪುರದ ಲಾಲ್‌ಬಾಗ್ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂದರ್ಭದಲ್ಲಿ ಈ ಘೋಷಣೆ ಮೊಳಗಿಸಿದ್ದಾರೆ.

ಇದರೊಂದಿಗೆ ಮಹಿಳಾ ಉದ್ಯಮಶೀಲತೆಗೆ ಉತ್ತೇಜನ ನೀಡುವ ಹೊಸ ಯೋಜನೆ ಮತ್ತು ನಿರ್ಮಾಣ ಕಾರ್ಮಿಕರಿಗಾಗಿ ಮುಖ್ಯಮಂತ್ರಿ ನಿರ್ಮಾಣ್ ಶ್ರಮಿಕ್ ಆವಾಸ್ ಸಹಾಯತಾ ಯೋಜನೆ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಜೊತೆಗೆ ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಬುಡಕಟ್ಟು ಪ್ರಾಬಲ್ಯದ ಬಸ್ತಾರ್ ಮತ್ತು ಸುರ್ಗುಜಾ ವಿಭಾಗಗಳು ಮತ್ತು ಪರಿಶಿಷ್ಟ ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯಗಳ ಹಬ್ಬಗಳನ್ನು ಆಯೋಜಿಸಲು ಎಲ್ಲಾ ಗ್ರಾಮ ಪಂಚಾಯಿತಿಗೆ ಪ್ರತಿ ವರ್ಷ 10,000 ರೂ.ಗಳ ನೆರವು ನೀಡಲಾಗುವುದು ಎಂದು ತಿಳಿಸಿದರು.

ಸರ್ಕಾರದ ಇತರ ಎಲ್ಲಾ ಯೋಜನೆಗಳು ಸ್ವಾಗತಾರ್ಹ ಆದರೂ, ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುವ ಯೋಜನೆ ಮಾತ್ರ ಸರಿ ಎನಿಸುವುದಿಲ್ಲ. ಯಾಕೆಂದರೆ ಪುಕ್ಕಟೆ ಹಣ ಸಿಗುತ್ತದೆ ಎಂದರೆ ಯಾರೂ ಕೆಲಸ ಕಾರ್ಯಗಳಿಗೆ ಹೋಗಲು ಮುಂದಾಗುವುದಿಲ್ಲ. ಸರ್ಕಾರ ಕೊಡಮಾಡುವ ಹಣದಲ್ಲೇ ತಿಂದುಂಡು ಮಜವಾಗಿರುತ್ತಾರೆ. ಯುವಕರನ್ನು ತಾವೇ ಸೋಮಾರಿಯಾಗುವಂತೆ ಮಾಡುವ ಯೋಜನೆ ಇದು. ಇದರ ಬದಲು ಯುವಕರಿಗೆ ಉದ್ಯೋಗ ಅವಕಾಶ ಹೆಚ್ಚು ಮಾಡುಯ್ತೇವೆ, ಉದ್ಯೋಗಿಗಳನ್ನು ಸೃಷ್ಟಿ ಮಾಡಿ ಕೆಲಸ ಕೊಡುತ್ತೇವೆ ಎಂದಿದ್ದರೆ ಸರ್ಕಾರದ ಘನತೆ ಇನ್ನೂ ಹೆಚ್ಚಾಗುತ್ತಿತ್ತು.