Home Health ನೀವು ಕೂಡ ನಿದ್ದೆಯಲ್ಲಿ ಗೊರಕೆ ಹೊಡೆಯುತ್ತೀರಾ?!!| ಗೊರಕೆ ಹೊಡೆಯುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ !??

ನೀವು ಕೂಡ ನಿದ್ದೆಯಲ್ಲಿ ಗೊರಕೆ ಹೊಡೆಯುತ್ತೀರಾ?!!| ಗೊರಕೆ ಹೊಡೆಯುವುದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ !??

Hindu neighbor gifts plot of land

Hindu neighbour gifts land to Muslim journalist

ಎಲ್ಲರ ಮನೆಯಲ್ಲೂ ಒಬ್ಬ ಸದಸ್ಯನಾದರೂ ಗೊರಕೆ ಹೊಡೆಯುವವನಾಗಿರುತ್ತಾನೆ. ಅವರಿಗೆ ಅದು ಹಿತ ಎಂದೆನಿಸಿದರೆ, ಇತರರಿಗೆ ಅದು ಪ್ರಾಣ ಸಂಕಟವೂ ಹೌದು. ಗೊರಕೆ ಹೊಡೆಯುವವನಿಗೆ ನಿದ್ದೆಯಲ್ಲಿ ಏನೂ ಅರಿವಾಗದೆ ಇರಬಹುದು ಆದರೆ ಪಕ್ಕದಲ್ಲಿ ಮಲಗಿದವನ ಪಾಡು ಹೇಳತೀರದು.

ಹೌದು. ಗೊರಕೆ ಎನ್ನುವುದು ಅನೇಕರ ಮುಗಿಯದ ಸಮಸ್ಯೆಯಾಗಿದೆ. ಗೊರಕೆ ಹೊಡೆಯುವವರು ನಿದ್ದೆ ಮಾಡುವಾಗ ಅವರ ಮೂಗು ಮತ್ತು ಬಾಯಿಯ ಹಿಂಭಾಗ ಮುಚ್ಚಲ್ಪಡುತ್ತದೆ. ಹಾಗಾಗಿ ಅವರು ಗೊರಕೆ ಹೊಡೆಯುತ್ತಾರಂತೆ !!

ಗೊರಕೆಯಿಂದ ಏನೂ ತೊಂದರೆ ಇಲ್ಲ ಎಂದುಕೊಂಡರೆ ಅಪಾಯ. ಗೊರಕೆ ಸಮಸ್ಯೆಯಿರುವವರು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಮನೆ ಮದ್ದಿನ ಮೂಲಕವೂ ಗೊರಕೆಗೆ ಔಷಧಿ ಪಡೆಯಬಹುದು. ಗೊರಕೆ ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ಗೊರಕೆಯಿಂದ ಸ್ಟ್ರೋಕ್ ಆಗಿ ಮೆದುಳಿಗೆ ರಕ್ತ ಪೂರೈಕೆ ನಿಲ್ಲುವ ಸಾಧ್ಯತೆ ಕೂಡ ಇದೆ.

ಗೊರಕೆಗೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ನಡೆದಿದೆ. ಅಧ್ಯಯನವೊಂದರಲ್ಲಿ ಉಸಿರಾಟದಲ್ಲಿ ಉಂಟಾಗುವ ಅಡಚಣೆಯಿಂದ ದೇಹದ ಭಾಗಗಳಿಗೆ ರಕ್ತ ಮತ್ತು ಆಮ್ಲಜನಕದ ಕೊರತೆಯುಂಟಾಗುತ್ತದೆ. ಇದು ಮೆದುಳು ಮತ್ತು ಹೃದಯವನ್ನು ಬಲಪಡಿಸುತ್ತದೆ. ಆದರೆ ವ್ಯಕ್ತಿಯ ಹೃದಯಾಘಾತದ ಸಾಧ್ಯತೆಗಳನ್ನು ಕಡಿಮೆ ಮಾಡುವುದಿಲ್ಲ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಮನಸ್ಸಿನ ಆರೋಗ್ಯದ ಜೊತೆಗೆ ಹೃದಯದ ಆರೋಗ್ಯ ಕೂಡ ಬಹಳ ಮುಖ್ಯ. ದೇಹದ ಪ್ರತಿಯೊಂದು ಭಾಗಕ್ಕೂ ಹೃದಯ ರಕ್ತವನ್ನು ಪಂಪ್ ಮಾಡುತ್ತದೆ. ಆಮ್ಲಜನಕವು ಇಡೀ ದೇಹಕ್ಕೆ ರಕ್ತದ ಮೂಲಕ ತಲುಪುತ್ತದೆ. ಗೊರಕೆ ಹೊಡೆಯುವ ವ್ಯಕ್ತಿ, ಹೃದ್ರೋಗದ ಅಪಾಯ ಎದುರಿಸುವ ಸಾಧ್ಯತೆಯಿದೆ. ರಕ್ತದೊತ್ತಡದ ಸಮಸ್ಯೆ ಕಾಡುವ ಸಮಸ್ಯೆಯೂ ಇದೆ.

ಅಲ್ಲದೇ, ಗೊರಕೆ ತಲೆನೋವಿಗೆ ಕಾರಣವಾಗಬಹುದು. ಒಂದು ವೇಳೆ ಈಗಾಗಲೇ ತಲೆನೋವು ಬರುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಉತ್ತಮ. ಗೊರಕೆ ಕಾರಣಕ್ಕೆ ಸರಿಯಾಗಿ ನಿದ್ರೆ ಬರುವುದಿಲ್ಲ. ನಿದ್ರಾಹೀನತೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಮಾನಸಿಕ ಸಮಸ್ಯೆ ಕೂಡ ಕಾಡುತ್ತದೆ.