Home Health ಮಾನವ ದೇಹದಲ್ಲಿರುವ ಹೊಸ ಅಂಗವನ್ನು ಪತ್ತೆ ಮಾಡಿದ ವಿಜ್ಞಾನಿಗಳು|ಧೂಮಪಾನದಿಂದ ಉಂಟಾಗುವ ರೋಗಗಳಿಂದ ಉಳಿಸುತ್ತೆ ರೋಗಿಗಳ ಜೀವ!!

ಮಾನವ ದೇಹದಲ್ಲಿರುವ ಹೊಸ ಅಂಗವನ್ನು ಪತ್ತೆ ಮಾಡಿದ ವಿಜ್ಞಾನಿಗಳು|ಧೂಮಪಾನದಿಂದ ಉಂಟಾಗುವ ರೋಗಗಳಿಂದ ಉಳಿಸುತ್ತೆ ರೋಗಿಗಳ ಜೀವ!!

Hindu neighbor gifts plot of land

Hindu neighbour gifts land to Muslim journalist

ವಿಜ್ಞಾನಿಗಳು ದಿನದಿಂದ ದಿನಕ್ಕೆ ಹೊಸ ವಿಚಾರಗಳ ಕುರಿತು ಆವಿಷ್ಕಾರ ನಡೆಸುತ್ತಲೇ ಇದ್ದಾರೆ. ಅದೆಷ್ಟೋ ತಿಳಿಯದ ಪ್ರಶ್ನೆಗಳಿಗೆ ಉತ್ತರವಾಗಿದ್ದರೆ ಇವರು.ಈ ಹಿಂದೆ ನಡೆದಂತಹ, ಇಂದಿಗೂ ತಿಳಿಯದ ವಿಷಯಗಳ ಅಧ್ಯಯನ ನಡೆಸಿ ಜಗತ್ತಿಗೆ ತಿಳಿಸುತ್ತಿದ್ದಾರೆ.ಇದೀಗ ಮತ್ತೊಂದು ಹೊಸ ಅಧ್ಯಯನದಲ್ಲಿ ತೊಡಗಿಕೊಂಡು ವಿಶೇಷವಾದ ವರದಿಯನ್ನು ನೀಡಿದ್ದಾರೆ.

ಹೌದು.ಇತ್ತೀಚೆಗೆ ನಡೆದ ಹೊಸ ಸಂಶೋಧನೆಯಲ್ಲಿ ಮಾನವ ದೇಹದಲ್ಲಿರುವ ಹೊಸ ಅಂಗವನ್ನು ಪತ್ತೆ ಮಾಡಿದ್ದಾರೆ.ಹೊಸ ಅಂಗವು ವಿಜ್ಞಾನಿಗಳಲ್ಲಿ ಹೊಸ ಭರವಸೆಯ ಕಿರಣವನ್ನು ನೀಡಿದೆ.ಈ ಅಂಗವು ಉಸಿರಾಟದ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುವ ಕೆಲಸ ನಿರ್ವಹಿಸುತ್ತದೆ.ವಿಜ್ಞಾನಿಗಳು ಈ ಹೊಸ ಅಂಗಕ್ಕೆ ರೆಸ್ಪಿರೇಟರಿ ಏರ್‌ವೇ ಸೆಕ್ರೆಟರಿ (RAS) ಎಂದು ಹೆಸರಿಸಿದ್ದಾರೆ.

ಲೈವ್ ಸೈನ್ಸ್ ವೆಬ್‌ಸೈಟ್‌ನ ವರದಿಯ ಪ್ರಕಾರ, ‘ಮಾನವ ದೇಹದಲ್ಲಿ ಕಂಡುಬರುವ ಈ ಹೊಸ ಅಂಗವು ಜೀವಕೋಶದಂತೆ ಕಾಣುತ್ತದೆ.ಅಲ್ಲದೆ, ಇದು ಶ್ವಾಸಕೋಶದಲ್ಲಿ ಇರುವ ತೆಳುವಾದ ಮತ್ತು ಅತ್ಯಂತ ಸೂಕ್ಷ್ಮವಾದ ಶಾಖೆಗಳಲ್ಲಿ ಕಂಡುಬರುತ್ತದೆ’.RAS ಕೋಶಗಳು ಕಾಂಡಕೋಶಗಳಂತಿದ್ದು,ಇವುಗಳನ್ನು ಖಾಲಿ ಕ್ಯಾನ್ವಾಸ್ ಕೋಶಗಳು ಎಂದು ಕರೆಯಲಾಗುತ್ತದೆ, ಏಕೆಂದರೆ ಅವು ದೇಹದೊಳಗಿನ ಯಾವುದೇ ಹೊಸ ಅಂಗ ಅಥವಾ ಜೀವಕೋಶಗಳನ್ನು ಗುರುತಿಸುತ್ತವೆ ಎಂದು ತಿಳಿಸಿದ್ದಾರೆ.

ಈ ಅಂಗವು ಧೂಮಪಾನ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ಭಾವಿಸಿದ್ದು,ಅನೇಕ ಬಾರಿ ಧೂಮಪಾನದಿಂದ ಉಂಟಾಗುವ ರೋಗಗಳಿಂದ ರೋಗಿಗಳ ಜೀವವನ್ನು ತೆಗೆದುಕೊಳ್ಳುತ್ತವೆ.ಇಂತಹ ಸಂದರ್ಭದಲ್ಲಿ ಈ ಅಂಗ ಜೀವ ಉಳಿಸಲು ಸಹಕಾರಿಯಾಗುತ್ತದೆ.

ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, RAS ಕೋಶಗಳು ಶ್ವಾಸಕೋಶದ ಮೇಲೆ ಅವಲಂಬಿತವಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಏಕೆಂದರೆ ಅದರ ಎಲ್ಲಾ ಕೆಲಸಗಳು ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯವಸ್ಥೆಗಳ ಮೂಲಕ ಹೋಗುತ್ತವೆ.ವಿಜ್ಞಾನಿಗಳು ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶದ ಅಂಗಾಂಶವನ್ನು ತೆಗೆದುಕೊಂಡು ಪ್ರತಿ ಜೀವಕೋಶದೊಳಗೆ ಇರುವ ಜೀನ್‌ಗಳನ್ನು ವಿಶ್ಲೇಷಿಸಿ, ನಂತರ RAS ಕೋಶಗಳನ್ನು ಕಂಡುಹಿಡಿಯಲಾಯಿತು.