Home Health Health Tips: ಸಾವಿನ ವಿರುದ್ಧ ದಿಕ್ಕಿನಲ್ಲಿ ನಡೆಯಿರಿ ; ದಿನಾ ಈ ‘ಮನೆಮದ್ದು’ ಸೇವಿಸಿ, ಹೃದಯಾಘಾತ...

Health Tips: ಸಾವಿನ ವಿರುದ್ಧ ದಿಕ್ಕಿನಲ್ಲಿ ನಡೆಯಿರಿ ; ದಿನಾ ಈ ‘ಮನೆಮದ್ದು’ ಸೇವಿಸಿ, ಹೃದಯಾಘಾತ ತಪ್ಪಿಸಿ !!!

Health Tips
Image source: Health and wellbeing queensland

Hindu neighbor gifts plot of land

Hindu neighbour gifts land to Muslim journalist

Health Tips: ಇತ್ತೀಚೆಗೆ ಹೃದಯಾಘಾತದಿಂದ (Heart attack) ಸಾವನ್ನಪ್ಪುವವರ (death) ಸಂಖ್ಯೆ ಹೆಚ್ಚಾಗಿದೆ. ಅತಿ ಸಣ್ಣ ವಯಸ್ಸಿನಿಂದ ಹಿಡಿದು ಹಿರಿಯ ವಯಸ್ಸಿನವರವರೆಗೂ ಎಲ್ಲರೂ ಹೃದಯಘಾತಕ್ಕೆ ಬಲಿಯಾಗುತ್ತಿದ್ದಾರೆ. ಇತ್ತೀಚಿಗೆ ನಟ ವಿಜಯ ರಾಘವೇಂದ್ರ (Vijaya raghavendra) ಅವರ ಪತ್ನಿ ಸ್ಪಂದನಾ ವಿಜಯ ರಾಘವೇಂದ್ರ (spandana) ಅವರು ಹೃದಯಾಘಾತಕ್ಕೆ ಬಲಿಯಾಗಿರುವ ವಿಚಾರ ಎಲ್ಲರಿಗೂ ತಿಳಿದಿರುವಂಥದ್ದು. ಹಾಗಾದ್ರೆ
ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ?!. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ !!!.

ವ್ಯಕ್ತಿ ನಡೆದಷ್ಟು ಒಳ್ಳೆಯದು. ವಾಕಿಂಗ್ (walking) ಕೂಡ ನಮ್ಮ ಆರೋಗ್ಯವನ್ನು (Health Tips) ಉತ್ತಮ ಸ್ಥಿತಿಯಲ್ಲಿ ಇರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೆಚ್ಚಿನ ಜನರು ವಾಕಿಂಗ್ ಮಾಡುತ್ತಾರೆ. ಇದರಿಂದಾಗಿ ಕಾಲು ನೋವು, ಕೀಳು ನೋವು, ದೇಹದ ಮೂಳೆಗಳಿಗೆ ಸಂಬಂಧಿಸಿದ ನೋವುಗಳು ಇದ್ದರೆ ಗುಣಮುಖವಾಗುತ್ತದೆ. ಇಷ್ಟು ಮಾತ್ರವಲ್ಲದೆ ವಾಕಿಂಗ್ ಮಾಡುವುದರಿಂದ ಹೃದಯಘಾತವನ್ನು ಕೂಡ ತಪ್ಪಿಸಬಹುದು.

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯು ಪ್ರತಿದಿನ ಸಾಕಷ್ಟು ವಾಕಿಂಗ್ ಮಾಡುವುದರಿಂದ ಹೃದಯಕ್ಕೆ ತೊಂದರೆಯಾಗುವ ಅನೇಕ ಕಾಯಿಲೆಗಳನ್ನು ತಡೆಯುತ್ತದೆ ಎಂದು ಸೂಚಿಸುತ್ತದೆ. ವಾಕಿಂಗ್‌ನ 60 ವರ್ಷದಿಂದ ಹೆಚ್ಚು ವಯಸ್ಸಾದವರಿಗೆ ಪ್ರಯೋಜನಕಾರಿಯಾಗಿದೆ. ವಾಕಿಂಗ್ ಮಾಡುವುದರಿಂದ ವೃದ್ಧಾಪ್ಯದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ತೊಂದರೆಯನ್ನು ತಡೆಯಬಹುದು.

ದಿನಕ್ಕೆ ಕನಿಷ್ಟ ಕೇವಲ 4,000 ಹೆಜ್ಜೆ ನಡೆದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಅಧ್ಯಯನ ತಿಳಿಸಿದೆ. ಯಾವುದೇ ಕಾರಣದಿಂದ ಸಾಯುವ ಅಪಾಯವನ್ನು ಕಡಿಮೆ ಮಾಡಲು ದಿನಕ್ಕೆ ಕನಿಷ್ಠ 3,967 ಹೆಜ್ಜೆಗಳನ್ನು ನಡೆಯಬೇಕು. ದಿನಕ್ಕೆ ಕನಿಷ್ಠ 2,337 ಹೆಜ್ಜೆ ನಡೆಯುವುದರಿಂದ ಹೃದಯ ರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯವನ್ನು ಕಡಿಮೆ ಮಾಡಬಹುದು. ಹೆಚ್ಚೆಚ್ಚು ವಾಕ್ ಮಾಡಿದಷ್ಟೂ ಒಳ್ಳೆಯದು ಎಂದು ಸಂಶೋಧಕರು ಹೇಳುತ್ತಾರೆ.
ದಿನಕ್ಕೆ ಕನಿಷ್ಠ 1,000 ಹೆಜ್ಜೆ ನಡೆದರೆ ಸಾವಿನ ಅಪಾಯವನ್ನು ಶೇ 15ರಷ್ಟು ಕಡಿಮೆ ಮಾಡಬಹುದು. ಪ್ರತಿದಿನ 500 ಹಂತಗಳ ಹೆಚ್ಚಳವು ಹೃದಯರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯವನ್ನು 7 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ.

ಅಧ್ಯಯನದ ಪ್ರಕಾರ ಹೃದಯಾಘಾತವನ್ನು ತಪ್ಪಿಸಲು ದಿನಕ್ಕೆ 11 ನಿಮಿಷಗಳಂತೆ ವಾರಕ್ಕೆ ಒಟ್ಟು 75 ನಿಮಿಷಗಳ ಕಾಲ ನಡೆಯಬೇಕು. ಹೀಗೆ ನಡೆಯುವುದರಿಂದ ಹೃದಯಕ್ಕೆ ರಕ್ತ ಪೂರೈಕೆ ಮಾಡುವ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದಿಲ್ಲ. ಇದರಿಂದ ರಕ್ತ ಪೂರೈಕೆ ಚೆನ್ನಾಗಿದ್ದು, ಹೃದಯಾಘಾತ ಆಗುವುದಿಲ್ಲ. ಅಲ್ಲದೇ, ನಡಿಗೆಯಿಂದ ಪಾರ್ಶ್ವವಾಯು ಅಥವಾ ಕ್ಯಾನ್ಸರ್ ಬರುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಯಾವುದೇ ಹವಾಮಾನದಲ್ಲಿ ಜೀವಿಸುತ್ತಿದ್ದರೂ ಪುರುಷರು ಮತ್ತು ಮಹಿಳೆಯರು ವಾಕಿಂಗ್ ಮಾಡಬೇಕು. ಅಧ್ಯಯನದ ಪ್ರಕಾರ ಪ್ರತಿದಿನ 7 ಸಾವಿರದಿಂದ 13 ಸಾವಿರ ಹೆಜ್ಜೆ ನಡೆದರೆ ಕಿರಿಯ ವಯಸ್ಸಿನವರ ಆರೋಗ್ಯದಲ್ಲಿ ತೀಕ್ಷ್ಮವಾದ ಸುಧಾರಣೆಯಾಗುತ್ತದೆ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕರು 6 ರಿಂದ 10 ಸಾವಿರ ಹೆಜ್ಜೆ ನಡೆಯಬೇಕು.

ಇದರಿಂದ ಆರಂಭಿಕ ಸಾವಿನ ಅಪಾಯದಲ್ಲಿ 42 ಪ್ರತಿಶತದಷ್ಟು ಕಡಿತವಾಗುತ್ತದೆ. ಈ ಮಿತಿಗಳಿಗಿಂತ ಹೆಚ್ಚು ನಡೆದರೆ ಅಂತಹ ಅಪಾಯವೇನೂ ಇಲ್ಲ ಎನ್ನುತ್ತಾರೆ ಸಂಶೋಧಕರು. ದಿನಕ್ಕೆ 20,000
ಹೆಜ್ಜೆಗಳು ಅಥವಾ 14-16 ಕಿಲೋಮೀಟರ್‌ಗಳವರೆಗೆ ನಡೆಯುವುದರಿಂದ ಆರೋಗ್ಯ ಪ್ರಯೋಜನಗಳು ಹೆಚ್ಚುತ್ತಲೇ ಇರುತ್ತವೆ. ನಡಿಗೆಯ ಪ್ರಯೋಜನಗಳ ಕುರಿತು ಸಂಶೋಧನೆ ನಡೆಸುತ್ತಿರುವ ಹಾರ್ವಡ್್ರ ಸಂಶೋಧಕರು ಕೂಡ ದಿನಕ್ಕೆ ಸುಮಾರು ಒಂದು ಗಂಟೆ ಕಾಲ ಚುರುಕಾಗಿ ನಡೆಯುವುದು ಉತ್ತಮ ಎಂದಿದ್ದಾರೆ. ಕೀಲು ನೋವು ಇರುವವರಿಗೂ ವಾಕಿಂಗ್ ಪ್ರಯೋಜನಕಾರಿಯಾಗಿದೆ. ವಾರಕ್ಕೆ ಐದರಿಂದ ಅರು ಮೈಲುಗಳಷ್ಟು ನಡೆಯುವುದರಿಂದ ಸಂಧಿವಾತವು ಮೊದಲ ಸ್ಥಾನದಲ್ಲಿ ರೂಪುಗೊಳ್ಳುವುದನ್ನು ತಡೆಯಬಹುದು. ಎಂದು

ವಾಕಿಂಗ್ ಕ್ಯಾಲೊರಿಗಳನ್ನು ತ್ವರಿತವಾಗಿ ಕರಗಿಸುವುದು, ತೂಕ ಇಳಿಸುವುದು. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
ಮೂಳೆ ಕೀಲುಗಳು ಬಲವಾಗಿರುತ್ತವೆ. ರೋಗನಿರೋಧಕ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುತ್ತದೆ.
ದೇಹಕ್ಕೆ ಶಕ್ತಿ ನೀಡುತ್ತದೆ. ಮನಸ್ಥಿತಿ ಉತ್ತಮವಾಗಿರುತ್ತದೆ.
ಫಿಟ್‌ನೆಸ್, ಹೃದಯದ ಆರೋಗ್ಯವನ್ನು ಸುಧಾರಿಸುವುದು, ಖಿನ್ನತೆ ಮತ್ತು ಆಯಾಸವನ್ನು ನಿವಾರಿಸುವುದು, ಕ್ಯಾನ್ಸರ್ ಅಪಾಯ ಮತ್ತು ಇತರ ದೀರ್ಘಕಾಲದ ಕಾಯಿಲೆಗಳನ್ನು ಕಡಿಮೆ ಮಾಡುವುದು ಸೇರಿದಂತೆ ಹಲವಾರು ಪ್ರಯೋಜನಗಳನ್ನು ಹೊಂದಿದೆ.

ಇದನ್ನೂ ಓದಿ: ಏನಿದು ಬೌ ಬೌ ಹಬ್ಬದ ವಿಶೇಷ ?ಡಾಗ್ ಮೀಟ್ ಫೆಸ್ಟಿವಲ್ ಎಲ್ಲಿ ನಡೆಯುತ್ತೆ?ಪಾಚಿ ಛಪ್ಪರಿಸೋ ದೇಶ ಯಾವುದು?