Home Health Corona : ಕರ್ನಾಟಕದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕಿನ ಪ್ರಕರಣ; ಜನರನಲ್ಲಿ ಆತಂಕ ಶುರು

Corona : ಕರ್ನಾಟಕದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕಿನ ಪ್ರಕರಣ; ಜನರನಲ್ಲಿ ಆತಂಕ ಶುರು

Corona virus in Karnataka

Hindu neighbor gifts plot of land

Hindu neighbour gifts land to Muslim journalist

Corona virus in Karnataka : ಬೆಂಗಳೂರು: ಕಳೆದ ಮೂರು ನಾಲ್ಕು ದಿನಗಳಿಂದ ಕರ್ನಾಟಕ (Karnataka) ದಲ್ಲಿ ಕೊರೊನಾ ಸೋಂಕು (Corona virus in Karnataka) ಕಡಿಮೆಯಾಗಿದೆ ಎಂದು ಜನರು ನಿಟ್ಟುಸಿರು ಬಿಡುವಷ್ಟರಲ್ಲೇ ಮತ್ತೆ ಆತಂಕ ಶುರುವಾಗಿದೆ. ಕೊರೊನಾ ಸೋಂಕು ಪ್ರಕರಣಗಳು ನಿಧಾನವಾಗಿ ದಿನದಿಂದ ದಿನಕ್ಕೆ ಏರುತ್ತಿವೆ. ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಮಾರ್ಚ್​ 13ರ ವರೆಗೆ 510 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕಳೆದ 24 ಗಂಟೆಯಲ್ಲಿ ಹೊಸದಾಗಿ 62 ಜನರಲ್ಲಿ ಕೊರೊನಾ ಪಾಸಿಟಿವ್​ ಬಂದಿದೆ. ದಿನದ ಏರಿಕೆ ಶೇ 4.5 ರಷ್ಟಿದ್ದು, ವಾರದ ಏರಿಕೆ ಶೇ 2.60 ರಷ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರುತ್ತಿರವುದನ್ನು ಕಾಣುತ್ತಿದ್ದೇವೆ. ಆಸ್ಪತ್ರೆಗೆ ದಾಖಲಾಗುವ ಹೆಚ್ಚಿನ ಕೊರೊನಾ ರೋಗಿಗಳು ಒಂದೇ ಸಮಯದಲ್ಲಿ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಆರೋಗ್ಯ ವಿಶೇಷ ಆಯುಕ್ತ ಡಾ.ಕೆ.ವಿ ತ್ರಿಲೋಕ್ ಚಂದ್ರ ಹೇಳಿದ್ದಾರೆ.

ಕಳೆದ 113 ದಿನಗಳಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ 500 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿನ ಪ್ರಕರಣ ಏರುತ್ತಿರುವುದು ಕಾಣಬಹುದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಿನ ಜನರು ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಆಘಾತಕಾರಿ ಅಂಶವಾಗಿದೆ. ಮತ್ತು ಬೇರೆ ರಾಜ್ಯಗಳಲ್ಲೂ ಕೊರೊನಾ ಪ್ರಕರಣಗಳು ಏರುತ್ತಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಆಯುಕ್ತ ಡಿ ರಂದೀಪ್ ತಿಳಿಸಿದ್ದಾರೆ.

ಇನ್ನು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಜನರು ಮಾಸ್ಕ್‌ ಹಾಕಿಕೊಳ್ಳುವುದನ್ನ ಮರೆತಿದ್ದಾರೆ. ಕೊರೊನಾ ಲಸಿಕೆ ಪಡೆಯುವರ ಸಂಖ್ಯೆಯಲ್ಲಿ ಇಳಿಕೆ ಮತ್ತು ಹೆಚ್ಚಿದ ಕೊರೊನಾ ಪರೀಕ್ಷೆಯಿಂದ, ಪ್ರಕರಣಗಳು ಹಠಾತ್ತನೆ ಹೆಚ್ಚಾಗಿತ್ತಿದೆ ಎಂದು ತಿಳಿಸಿದ್ದಾರೆ.