Home Food Chyawanprash: ಮರೆತು ಕೂಡ ಇವರು ಚ್ಯವನಪ್ರಾಶ್ ಸೇವಿಸಬಾರದು!

Chyawanprash: ಮರೆತು ಕೂಡ ಇವರು ಚ್ಯವನಪ್ರಾಶ್ ಸೇವಿಸಬಾರದು!

Hindu neighbor gifts plot of land

Hindu neighbour gifts land to Muslim journalist

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಅದಲ್ಲದೆ ನಮ್ಮ ದೇಹದ ಪ್ರತಿಯೊಂದು ಭಾಗಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯು ಹೌದು. ಹಾಗೆಯೇ ನಮಗೆ ಆರೋಗ್ಯ ಇದ್ದರೆ ಮಾತ್ರ ನಾವು ಪರಿಪೂರ್ಣ ತಾನೇ.
ಸದ್ಯ ಚಳಿಗಾಲ ಬಂದ ಕೂಡಲೇ ಜನರು ಚಳಿಗಾಲದ ಸೋಂಕು ಕಾಯಿಲೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಚ್ಯವನಪ್ರಾಶ್ ಅನ್ನು ಸೇವಿಸಲು ಪ್ರಾರಂಭಿಸುತ್ತಾರೆ. ಏಕೆಂದರೆ ಚ್ಯವನಪ್ರಾಶ್ ಅನ್ನು ಔಷಧಿ ಎಂದು ಪರಿಗಣಿಸಲಾಗುತ್ತದೆ. ಚ್ಯವನಪ್ರಾಶ ತಿನ್ನುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಜೇನು, ಸರ್ಪ ಕೇಸರಿ, ಬಿಳಿ ಮುಸುಲಿ, ತಮಾಲಪತ್ರ ಎಲೆಗಳಂತಹ ಅನೇಕ ಗಿಡಮೂಲಿಕೆಗಳನ್ನು ಬೆರೆಸಿ ಚ್ಯವನಪ್ರಾಶ್ ಅನ್ನು ತಯಾರಿಸಲಾಗುತ್ತದೆ. ಇದರಿಂದಾಗಿ ಚಳಿಗಾಲದಲ್ಲಿ ಶರೀರ ಒಳಗಿನಿಂದ ಬೆಚ್ಚಗಿರುತ್ತದೆ ಮತ್ತು ನೀವು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ.

ಆದರೆ ಚ್ಯವನಪ್ರಾಶ್ ಅನ್ನು ಸೇವಿಸುವುದರಿಂದ ಕೆಲವು ಅನಾನುಕೂಲವಿದೆ. ಹೌದು ಈ ಜನರು ಚ್ಯವನಪ್ರಾಶವನ್ನು ಸೇವಿಸಬಾರದು:

  • ಅಧಿಕ ಬಿಪಿ ರೋಗಿಗಳು: ನೀವು ಅಧಿಕ ರಕ್ತದೊತ್ತಡದ ರೋಗಿಗಳಾಗಿದ್ದರೆ, ನೀವು ಚ್ಯವನಪ್ರಾಶ್ ಅನ್ನು ಸೇವಿಸುವುದನ್ನು ತಪ್ಪಿಸಬೇಕು, ಏಕೆಂದರೆ ಚ್ಯವನಪ್ರಾಶ್ ಬಿಸಿ ಗುಣಧರ್ಮ ಹೊಂದಿರುತ್ತದೆ, ಇದರಿಂದಾಗಿ ಈ ಸಮಸ್ಯೆಯು ಹೆಚ್ಚಾಗಬಹುದು.
  • ಕಿಡ್ನಿ ರೋಗಿಗಳು: ಚ್ಯವನಪ್ರಾಶದ ಗುಣಧರ್ಮ ಬಿಸಿಯಾಗಿರುತ್ತದೆ, ಆದ್ದರಿಂದ ಅದು ನಿಧಾನಕ್ಕೆ ಜೀರ್ಣವಾಗುತ್ತದೆ. ನೀವು ಕಿಡ್ನಿ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರೆ, ಅಪ್ಪಿತಪ್ಪಿಯೂ ಚ್ಯವನಪ್ರಾಶವನ್ನು ಸೇವಿಸಬೇಡಿ.
  • ಹೊಟ್ಟೆಯ ಸಮಸ್ಯೆಗಳಿರುವವರು: ಹೊಟ್ಟೆಯ ಸಮಸ್ಯೆ ಇರುವವರು ಚ್ಯವನಪ್ರಾಶವನ್ನು ಸೇವಿಸಬಾರದು ಏಕೆಂದರೆ ಚ್ಯವನಪ್ರಾಶವನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಹೀಗಾಗಿ ನೀವು ಸಾಧ್ಯವಾದಷ್ಟು ಅದನ್ನು ತಪ್ಪಿಸಲು ಯತ್ನಿಸಿ.
  • ಮಧುಮೇಹ ರೋಗಿಗಳು: ಮಧುಮೇಹ ರೋಗಿಗಳು ಮರೆತೂ ಕೂಡ ಚ್ಯವನಪ್ರಾಶವನ್ನು ಸೇವಿಸಬಾರದು. ಏಕೆಂದರೆ ಚ್ಯವನಪ್ರಾಶದ ರುಚಿಯನ್ನು ಸಮತೋಲನದಲ್ಲಿಡಲು ಅದರಲ್ಲಿ ಸಿಹಿಯನ್ನು ಬಳಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಚ್ಯವನಪ್ರಾಶ್‌ನಲ್ಲಿರುವ ಸಕ್ಕರೆಯು ದೇಹದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ, ಹೀಗಿರುವಾಗ ನೀವೂ ಕೂಡ ಮಧುಮೇಹ ರೋಗಿಗಳಾಗಿದ್ದರೆ ಮತ್ತು ಚ್ಯವನಪ್ರಾಶ್ ಅನ್ನು ಸೇವಿಸುವಾಗ ಜಾಗೃತಿ ವಹಿಸಿ.ಏಕೆಂದರೆ ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ಹೆಚ್ಚಾಗಬಹುದು.

ಚಳಿಗಾಲದಲ್ಲಿ ನೀವು ಚ್ಯವನಪ್ರಾಶ ಸೇವಿಸುವ ಮುನ್ನ ಈ ಮೇಲಿನ ಅಂಶಗಳನ್ನು ಗಮನದಲ್ಲಿ ಇರಿಸುವುದು ಸೂಕ್ತ.