Home Fashion Miss Universe 2023: 2023 ರ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಚೆಲುವೆ ಇವರೇ!!

Miss Universe 2023: 2023 ರ ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಚೆಲುವೆ ಇವರೇ!!

Miss Universe 2023

Hindu neighbor gifts plot of land

Hindu neighbour gifts land to Muslim journalist

Miss Universe 2023: ಸಾಲ್ವಡಾರ್‌ನಲ್ಲಿ ನಡೆಯುತ್ತಿರುವ ಮಿಸ್‌ ಯೂನಿವರ್ಸ್‌ನಲ್ಲಿ ಭುವನ ಸುಂದರಿ 2023( Miss Universe 2023) ಸ್ಪರ್ಧೆಯ ಅಂತಿಮ ಸುತ್ತಿನ ಪ್ರದರ್ಶನ ನಡೆದಿದ್ದು, ಈ ಸ್ಪರ್ಧೆಗಳಲ್ಲಿ 90 ಕ್ಕೂ ಹಚ್ಚು ದೇಶಗಳ ಸ್ಪರ್ಧಿಗಳ ಸುಂದರಿಯರು ಭಾಗಿಯಾಗಿದ್ದರು. ನಿಕಾರಗುವಾದ ಶೆಯ್‌ನ್ನಿಸ್‌ ಪಲಾಸಿಯೋಸ್‌ (Sheynnis Palacios) ಅವರು 2023ನೇ ಸಾಲಿನ ಭುವನ (Miss Universe 2023) ಸುಂದರಿಯಾಗಿ ಹೊರಹೊಮ್ಮಿದ್ದಾರೆ.

ಸೆಂಟ್ರಲ್‌ ಅಮೆರಿಕದ ಅಲ್‌ ಸಾಲ್ವಡಾರ್‌ನಲ್ಲಿರುವ ಜೋಸ್‌ ಅಡೊಲ್ಫೊ ಪಿನಡೇ ಅರೇನಾದಲ್ಲಿ (Jose Adolfo Pineda Arena) ನಡೆದ 72ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ನಿಕಾರಗುವಾದ ಸುಂದರಿ ಮುಡಿಗೆ ಭುವನ ಸುಂದರಿ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿಯ ಭುವನ ಸುಂದರಿ ಸ್ಪರ್ಧೆಯು ಹಲವು ವಿಶೇಷಗಳಿಂದ ಕೂಡಿದ್ದು, ಲಿಂಗ ಪರಿವರ್ತನೆ ಮಾಡಿಕೊಂಡ ಇಬ್ಬರು ಮಹಿಳೆಯರು, ಒಬ್ಬ ದಪ್ಪ ಇರುವ ಸುಂದರಿ ಭಾಗಿಯಾಗಿದ್ದರು.

ನೇಪಾಳದ ಜೇನ್‌ ದೀಪಿಕಾ ಗ್ಯಾರೆಟ್‌ (Jane Dipika Garrett) ಅವರು ನೋಡಲು ದಪ್ಪ ಇದ್ದರೂ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಇದರ ಜೊತೆಗೆ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಜಗತ್ತಿನ ಮೊದಲ ಪ್ಲಸ್‌ ಸೈಜ್‌ (ದಪ್ಪ ಇರುವ) ರೂಪದರ್ಶಿ ಎಂಬ ಖ್ಯಾತಿಗೂ ಜೇನ್‌ ದೀಪಿಕಾ ಗ್ಯಾರೆಟ್‌ ಪಾತ್ರರಾಗಿದ್ದಾರೆ. 2022ರ ಭುವನ ಸುಂದರಿ ಬಾನಿ ಗಾಬ್ರಿಯೆಲ್‌ ಅವರು ಶೆಯ್‌ನ್ನಿಸ್‌ ಪಲಾಸಿಯೋಸ್‌ ಅವರಿಗೆ ಭುವನ ಸುಂದರಿ ಕಿರೀಟ ತೊಡಿಸಿದ್ದಾರೆ. ಶೆಯ್‌ನ್ನಿಸ್‌ ಪಲಾಸಿಯೋಸ್‌ ಅವರು ಭುವನ ಸುಂದರಿ ಪಟ್ಟ ಅಲಂಕರಿಸಿದ ನಿಕಾರಗುವಾದ ಮೊದಲ ರೂಪದರ್ಶಿ ಎಂಬ ಮನ್ನಣೆಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ: Brundavana Serial: ಕಲರ್ಸ್ ವಾಹಿನಿಯ ‘ಬೃಂದಾವನ’ ಧಾರಾವಾಹಿಯ ಹೀರೋ ಬದಲಾವಣೆ: ಕಿರುತೆರೆಗೆ ಮೊತ್ತ ಮೊದಲ ಬಾರಿಗೆ ಎಂಟ್ರಿ ಕೊಡುತ್ತಿರುವ ಹೀರೋ ಇವರೇ ನೋಡಿ!