Home Breaking Entertainment News Kannada ಗಂಡನನ್ನು ಬಿಟ್ಟು ಹಣದ ಹಿಂದೆ ಹೋಗಿದ್ದೀ | ನೆಟ್ಟಿಗನ ಕಮೆಂಟ್ ಗೆ ನಟಿ ನವ್ಯಾ ಹೇಳಿದ್ಳು...

ಗಂಡನನ್ನು ಬಿಟ್ಟು ಹಣದ ಹಿಂದೆ ಹೋಗಿದ್ದೀ | ನೆಟ್ಟಿಗನ ಕಮೆಂಟ್ ಗೆ ನಟಿ ನವ್ಯಾ ಹೇಳಿದ್ಳು ಈ ಖಡಕ್ ಮಾತು!!!

Hindu neighbor gifts plot of land

Hindu neighbour gifts land to Muslim journalist

ಸಾಮಾಜಿಕ ಜಾಲತಾಣ ಎಂಬ ಮಾದ್ಯಮ ಮನರಂಜನೆಯ ಜೊತೆಗೆ ಒಂದಿಷ್ಟು ಸುಳ್ಳು ಸುದ್ದಿಗಳನ್ನು, ಕೆಲವರ ಬಗ್ಗೆ ಅಸಭ್ಯವಾಗಿ ಬರೆದು, ಟ್ರೋಲ್ ಮಾಡುವ ಹವ್ಯಾಸವನ್ನು ರೂಡಿಸಿಕೊಂಡು ಭಾವನೆಗಳ ಕೆರಳಿಸುವ, ಭಾವನಾತ್ಮಕವಾಗಿ ನೋಯಿಸುವ ಉದ್ದೇಶ ಹೊಂದಿಕೊಂಡು ,ಸುಳ್ಳು ಸಂದೇಶ ರವಾನಿಸುವ ಜನರಿಗೇನು ಕಮ್ಮಿಯಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಹವ್ಯಾಸ ಚಾಳಿಯಂತೆ ಹೆಚ್ಚಾಗಿದ್ದು, ಅದರಲ್ಲೂ ನಟಿಮಣಿಯರ ಮೇಲೆ ಕಮೆಂಟ್​ ಮಾಡಿ, ಮಜಾ ತೆಗೆದುಕೊಳ್ಳುವ ಪರಿಪಾಠ ಕೊಂಚ ಹೆಚ್ಚೆಂದರೂ ತಪ್ಪಾಗದು.

ಕೆಲ ನಟಿಯರು ಕಮೆಂಟ್​ಗಳನ್ನು ನೋಡಿಯೂ ನೋಡದಂತೆ ವರ್ತಿಸಿದರೆ, ಇನ್ನೂ ಕೆಲ ನಟಿಯರು ಕಮೆಂಟ್ ಮಾಡಿದವರ ಗ್ರಹಚಾರ ಬಿಡಿಸುವ ರೀತಿ ಪ್ರತಿಕ್ರಿಯೆ ನೀಡಿ ನೆಟ್ಟಿಗರು ಚಕಾರ ಎತ್ತದಂತೆ ಮಾಡುತ್ತಾರೆ. ಅದೇ ರೀತಿ ಇದೀಗ ಮಲಯಾಳಂ ಬ್ಯೂಟಿ ನವ್ಯಾ ನಾಯರ್​ ತಮ್ಮ ವಿರುದ್ಧದ ಕಮೆಂಟ್​ಗೆ ತಿರುಗೇಟು ನೀಡಿದ್ದಾರೆ.

ನವ್ಯಾ ನಾಯರ್​ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದು, ಇತ್ತೀಚೆಗೆ ಅವರು ರೆಸಾರ್ಟ್ ಒಂದರಲ್ಲಿ ತೆಗೆದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅದಕ್ಕೆ “ನೀವು ನಿರ್ಭೀತರಾಗಲು ಬಯಸಿದರೆ, ಪ್ರೀತಿಯನ್ನು ಆರಿಸಿ” ಎಂದು ಫೋಟೋಗೆ ಅಡಿಬರಹ ನೀಡಿದ್ದಾರೆ.


ಪ್ರತಿ ಕಮೆಂಟುಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡುವುದಕ್ಕಿಂತ ಹೆಚ್ಚಾಗಿ ನಕಾರಾತ್ಮಕ ಪ್ರತಿಕ್ರಿಯೆ ನೀಡುವುದೆ ಹೆಚ್ಚು. ಅದೇ ರೀತಿ ನವ್ಯಾ ನಾಯರ್ ಫೋಟೋಗೆ ಸಾಕಷ್ಟು ಧನಾತ್ಮಕ ಕಮೆಂಟ್​ಗಳ ನಡುವೆ ಕೆಲ ನೆಟ್ಟಿಗರ ಋಣಾತ್ಮಕ ಕಾಮೆಂಟ್​ ಸಹ ಮಾಡಿದ್ದಾರೆ.


“ಗಂಡನನ್ನು ಬಿಟ್ಟು, ಹಣ ಮತ್ತು ಅಭಿಮಾನಿಗಳ ಹಿಂದೆ ಬಿದ್ದ ನಿಮ್ಮ ಬಗ್ಗೆ ನಾನೇನು ಹೇಳಲಿ, ಇರುವುದು ಒಂದೇ ಒಂದು ಜೀವನ ಖುಷಿಯಾಗಿರಿ” ಎಂದು ನೆಟ್ಟಿಗನೊಬ್ಬ ಕಮೆಂಟ್​ ಮಾಡಿದ್ದು, ಇದರಿಂದ ಕುಪಿತರಾದ ನವ್ಯಾ ನಾಯರ್, ಇದೆಲ್ಲವನ್ನು ನಿಮಗೆ ಯಾರು ಹೇಳಿದ್ದು? ಆದರೂ ನೀವು ಹೇಳಿದ ಕೊನೆಯ ಸಾಲು ಸರಿಯಿದೆ. ಇರುವುದೊಂದೆ ಜೀವನ, ನೀವು ಕೂಡ ಖುಷಿಯಾಗಿರಿ. ಅದನ್ನು ಬಿಟ್ಟು ಅನವಶ್ಯಕವಾಗಿ ಯಾಕೆ ದ್ವೇಷವನ್ನು ಹರಡುತ್ತಿದ್ದೀರಾ ಎಂದು ತಿರುಗೇಟು ನೀಡಿ, ಈ ಮೂಲಕ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳಿರುವ ನೆಟ್ಟಿಗನಿಗೆ ಖಡಕ್ ಉತ್ತರ ನೀಡಿ ಬಾಯಿ ಮುಚ್ಚಿಸಿದ್ದಾರೆ.