Home Entertainment ವೈರಲ್ ಆಗುತ್ತಿದೆ ಕುತೂಹಲಕಾರಿ ಸಂಖ್ಯೆ | 831224 ಏನಿದರ ಅರ್ಥ? ನೀವು ಈ ಸಂಖ್ಯೆಯ ಬಗ್ಗೆ...

ವೈರಲ್ ಆಗುತ್ತಿದೆ ಕುತೂಹಲಕಾರಿ ಸಂಖ್ಯೆ | 831224 ಏನಿದರ ಅರ್ಥ? ನೀವು ಈ ಸಂಖ್ಯೆಯ ಬಗ್ಗೆ ತಿಳಿದುಕೊಂಡ್ರೆ ವ್ಹಾ!! ಅಂತೀರಾ..

Hindu neighbor gifts plot of land

Hindu neighbour gifts land to Muslim journalist

ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳು ಹರಿದಾಡುತ್ತಲೇ ಇರುತ್ತವೆ. ಸದ್ಯ ವೈರಲ್ ಆಗುತ್ತಿರುವ ವಿಚಾರವೆಂದರೆ, ಸೈಬರ್​ ಟರ್ಮ್​ 831224. ಏನಿದು ನಂಬರ್? ಇದರ ಅರ್ಥವೇನು? ಕುತೂಹಲಕಾರಿಯಾಗಿದೆ ಅಲ್ವಾ!! ಹಾಗಿದ್ರೆ ಇದರ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಯೋಣ.

ಈ ನಂಬರ್ ಪ್ರೀತಿಗೆ ಸಂಬಂಧಿಸಿದ್ದು, ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತಿರೋದೆ. ಯಾರ ಮೇಲೆ ಯಾವಾಗ, ಹೇಗೆ ಪ್ರೀತಿ ಹುಟ್ಟುತ್ತದೆ ಅಂತಾ ಹೇಳೋದಿಕ್ಕಾಗಲ್ಲ. ಇನ್ನೂ, ಒಬ್ಬರ ಮೇಲೆ ಪ್ರೀತಿಯಾದರೆ ಅವರ ಬಳಿ ತಮ್ಮ ಭಾವನೆ, ಪ್ರೀತಿನ ಹೇಳಿಕೊಳ್ಳೋದಿಕ್ಕೆ ಎಷ್ಟೋ ಜನ ಹರಸಾಹಸ ಪಡುತ್ತಾರೆ. ಕಾರಣ ಹಲವಿರುತ್ತದೆ. ಕೆಲವರಂತು ತಮ್ಮ ಭಾವನೆ ವ್ಯಕ್ತಪಡಿಸಿದ ನಂತರ ಅತ್ತಕಡೆಯಿಂದ ಏನು ಪ್ರತಿಕ್ರಿಯೆ ಬರಬಹುದು ಎಂಬ ಆತಂಕದಲ್ಲಿ ಕುಳಿತುಬಿಡುತ್ತಾರೆ. ಅತ್ತಕಡೆಯಿಂದ ಖುಷಿ ತರುವ ಪ್ರತಿಕ್ರಿಯೆ ಬರುವವರೆಗೂ ನಿದ್ದೆಯೂ ಬಾರದು.

ಈಗಿನದು ಟೆಕ್ನಾಲಜಿ ಯುಗ ಪ್ರೀತಿ ಹೇಳಿಕೊಳ್ಳಲು ಹೊಸ ಹೊಸ ಉಪಾಯಗಳು ರೆಡಿಯಾಗಿರುತ್ತದೆ. ತಮ್ಮ ಪ್ರೀತೀನ ಹೇಳಿಕೊಳ್ಳಲು ಹೆಚ್ಚೇನು ಹರಸಾಹಸ ಪಡಲಾರರು. ಈಗಾಗಲೇ ಪ್ರೇಮಿಗಳ‌ ಪ್ರೇಮ ನಿವೇದನೆಗೆ ಸಹಕಾರಿಯಾಗಿ ಹಲವು ಮಾರ್ಗಗಳಿವೆ. ಪ್ರೀತಿಸುತ್ತೇನೆ ಎಂದು ಹೇಳಲು ಹಲವು ಸಮಾನ ಪದಗಳಿವೆ. ಹಲವರಿಗೆ ತಿಳಿದಿರಬೇಕು 143 ಎಂಬ ಪದ ಕೂಡ ‘ಐ ಲವ್ ಯೂ’ ಎಂಬುದನ್ನು ಸೂಚಿಸುತ್ತದೆ.

ಹಾಗೆಯೇ ಇದೀಗ 831224 ಎಂಬ ಸಂಖ್ಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಅರ್ಥ ಏನು?
831224 ಎಂದರೆ ನಾನು ನಿನ್ನನ್ನು ಇಂದು, ನಾಳೆ ಮತ್ತು ಎಂದೆಂದಿಗೂ ಪ್ರೀತಿಸುತ್ತೇನೆ ಎಂದರ್ಥ. ಹೇಗೆ? ಈ ಸಂಖ್ಯೆಗೂ ಈ ಪದಗಳಿಗೂ ಏನು ಹೊಂದಾಣಿಕೆ ಆಗುತ್ತಿಲ್ಲವೇ?? ಆಗುತ್ತದೆ. ಈ ಸಂಖ್ಯೆಯ ಸಂಪೂರ್ಣ ಅರ್ಥ ಇಲ್ಲಿದೆ. ಹಾಗೇ ಈ ಅರ್ಥ ತಿಳಿದುಕೊಂಡು ಮುಂದೆ ನೀವೂ ಕೂಡ ನಿಮ್ಮ ಪ್ರೇಯಸಿಗೆ ಯಾವುದೇ ಅಂಜಿಕೆಯಿಲ್ಲದೆ ಹೇಳಬಹುದು.

831224
831 ಅಂದ್ರೆ I Love You ಎಂದರ್ಥ. (ನಾನು ನಿನ್ನನ್ನು ಪ್ರೀತಿಸುತ್ತೇನೆ)
ಹಾಗಾದ್ರೆ 224 ಎಂದರೇನು?
224 ಅಂದ್ರೆ ಇಂದು, ನಾಳೆ, ಎಂದೆಂದಿಗೂ ಎಂದರ್ಥ.
831224 – I love you today, tomorrow, forever.
ಪ್ರತಿ ಸಂಖ್ಯೆಗಳು ನಿರ್ದಿಷ್ಟವಾದ ಅರ್ಥವನ್ನು ಹೊಂದಿದೆ. ಹೇಗೇ?
831 (I Love You) ಈ ವಾಕ್ಯದಲ್ಲಿ ಒಟ್ಟು ಎಂಟು ಅಕ್ಷರಗಳಿವೆ.
3 (I Love You) ಈ ವಾಕ್ಯದಲ್ಲಿ ಒಟ್ಟು ಮೂರು ಪದಗಳಿವೆ.
1 ಅಂದ್ರೆ 831 ಈ ಸಂಖ್ಯೆಗೆ ಒಂದೇ ಅರ್ಥವಿದೆ.

ಇನ್ನೂ, ಈ ಸಂಖ್ಯೆ ಕೆಲವು ಬಾರಿ ಪ್ರೇಮಿಗಳಿಗೆ ಸಹಕಾರಿಯಾಗುತ್ತದೆ ಎಂದೇ ಹೇಳಬಹುದು. ಹೇಗೆ ಅಂತೀರಾ?? ಆನ್​ಲೈನ್​ ಜಗತ್ತಿನಲ್ಲಿ ಸಂಕೇತಗಳ ಮೂಲಕ ಪ್ರೀತಿ, ಪ್ರೇಮದ ನಿವೇದನೆ ಭದ್ರತೆ ಒದಗಿಸುತ್ತದೆ. ಪ್ರೇಮಿಗಳು ಪರಸ್ಪರ 831224 ಟೆಕ್ಸ್ಟ್ ಕಳಿಸುತ್ತಿದ್ದರೆ ತಮ್ಮ ಪ್ರೇಮದ ಬಗ್ಗೆ ಭದ್ರಭಾವ ನೆಲೆಸುತ್ತದೆ ಏನೋ. ಒಟ್ಟಾರೆ, ಅರ್ಥಪೂರ್ಣವಾದ ಈ ಸಂಖ್ಯೆ ಪ್ರೇಮಿಗಳಿಗೆ ಬಹಳ ಉಪಕಾರಿಯಾದಂತಿದೆ.