Home Breaking Entertainment News Kannada ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಬರುತ್ತಿದೆ ‘ವಾರಿಸು’ | ಸಕ್ಕತ್ ಧೂಳೆಬ್ಬಿಸುತಿದೆ ಸಿನಿಮಾ ಟ್ರೇಲರ್ | ಬಿಡುಗಡೆ...

ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಬರುತ್ತಿದೆ ‘ವಾರಿಸು’ | ಸಕ್ಕತ್ ಧೂಳೆಬ್ಬಿಸುತಿದೆ ಸಿನಿಮಾ ಟ್ರೇಲರ್ | ಬಿಡುಗಡೆ ಯಾವಾಗ?

Hindu neighbor gifts plot of land

Hindu neighbour gifts land to Muslim journalist

ಕಾಲಿವುಡ್ ನಲ್ಲಿ ಈ ವರುಷದ ಬಹು ನಿರೀಕ್ಷಿತ ಸಿನಿಮಾ ಎನಿಸಿರುವ, ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ವಾರಿಸು’ ಚಿತ್ರ ಬೆಳ್ಳಿ ತೆರೆಯ ಮೇಲೆ ಅಬ್ಬರಿಸಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ನಿನ್ನೆ ತಾನೆ ಟ್ರೇಲರ್ ಲಾಂಚ್ ಮಾಡಿದ್ದ ತಂಡ ಭರ್ಜರಿ ವೀವ್ಸ್ ಪಡೆದು, ಎಲ್ಲರ ಮನ ಗೆದ್ದು, ಪ್ರೇಕ್ಷಕರ ನಿರೀಕ್ಷೆಯನ್ನು ಇನ್ನೂ ಹೆಚ್ಚಿಸಿದೆ.

ಜನವರಿ 12ರಂದು ವಾರಿಸು ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದ್ದು, ನಿರೀಕ್ಷೆ ಮೀರಿ ಯಶಸ್ಸು ಕಾಣುವ ಸಾಧ್ಯತೆ ಹೆಚ್ಚಿದೆ. ನಿನ್ನೆ ಸಂಜೆ ರಿಲೀಸ್ ಆದ ಸಿನಿಮಾ ಟ್ರೇಲರ್ ಒಂದು ಗಂಟೆ ಕಳೆಯುವುದೊರಳಗೆ 4.2 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಕಂಡು ದಾಖಲೆ ನಿರ್ಮಿಸಿದೆ.

ಕಳೆದ ವರ್ಷ ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ತೆರೆಕಂಡಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಿರಲಿಲ್ಲ. ಹೀಗಾಗಿ ದಳಪತಿ ವಿಜಯ್​ ಅವರು ಈ ಬಾರಿ ಫ್ಯಾಮಿಲಿ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಒಟ್ಟಾಗಿ ಚಿತ್ರದಲ್ಲಿ ಕೌಟುಂಬಿಕ ಕಥಾ ಹಂದರ ಹೆಚ್ಚಾಗಿರುವುದು ಟ್ರೇಲರ್​ ಮೂಲಕ ತಿಳಿದು ಬಂದಿದೆ.

ದಳಪತಿ ವಿಜಯ್​ ಜೊತೆ ನಟಿಸಬೇಕು ಎಂಬುದು ರಶ್ಮಿಕಾ ಮಂದಣ್ಣ ಅವರ ಬಹುಕಾಲದ ಕನಸಾಗಿತ್ತು. ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮೂಲಕ ರಶ್ಮಿಕಾ ಕನಸು ಈಡೇರುತ್ತಿದ್ದು, ಈಗಾಗಲೇ ಬಿಡುಗಡೆ ಆಗಿರುವ ‘ರಂಜಿದಮೆ..’ ಹಾಡಿನಲ್ಲಿ ವಿಜಯ್​ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ನೋಡಿ ಜನರು ಇಷ್ಟಪಟ್ಟಿದ್ದಾರೆ. ಜೊತೆಗೆ ಈ ಚಿತ್ರದಿಂದ ರಶ್ಮಿಕಾ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ಸಿಗುವ ನಿರೀಕ್ಷೆ ಇದೆ.

ಕೋಟಿಗಟ್ಟಲೆ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಕ್ಕೆ ಎಸ್ ತಮನ್ ಅವರು ಸಂಗೀತ ನೀಡಿದ್ದಾರೆ. ‘ವಾರಿಸು’ ಚಿತ್ರ ಈಗ ಸೆನ್ಸಾರ್​ ಪರೀಕ್ಷೆಯಲ್ಲಿ ಪಾಸ್​ ಆಗಿದ್ದು ‘ಯು’ ಪ್ರಮಾಣಪತ್ರ ಪಡೆದುಕೊಂಡಿದೆ. ಟ್ರೇಲರ್​ ನೋಡಿದ ಅಭಿಮಾನಿಗಳು ಪಾಸಿಟಿವ್​ ಆಗಿ ಕಾಮೆಂಟ್​ ಮಾಡುತ್ತಿದ್ದು, ಸಿನೆಮಾ ಕೂಡ ಎಲ್ಲರ ಮನಗೆಲ್ಲಲಿದೆ. ಒಟ್ಟಿನಲ್ಲಿ ವಿಜಯ್ ಅಭಿಮಾನಿಗಳಂತೂ ಅದ್ದೂರಿಯಾಗಿ ಸಿನೆಮಾವನ್ನು ಬರಮಾಡಿಕೊಳ್ಳಲು ಕಾದು ಕುಳಿತಿದ್ದಾರೆ .