Home Breaking Entertainment News Kannada Urfi javed: ಉರ್ಫಿ ಜಾವೇದ್‌ ಗೆ ಬಾಡಿಗೆ ಮನೆ ಸಿಗುತ್ತಿಲ್ಲವಂತೆ | ಕಾರಣ ತಿಳಿಸಿದ ನಟಿ

Urfi javed: ಉರ್ಫಿ ಜಾವೇದ್‌ ಗೆ ಬಾಡಿಗೆ ಮನೆ ಸಿಗುತ್ತಿಲ್ಲವಂತೆ | ಕಾರಣ ತಿಳಿಸಿದ ನಟಿ

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಒಟಿಟಿ ಮೂಲಕ ಹೆಚ್ಚು ಹೆಸರು ಪಡೆದ ಈ ಉರ್ಫಿ ಜಾವೇದ್ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ನಿಂದ ಮಾತ್ರವಲ್ಲದೆ ತನ್ನ ಸಂಪಾದನೆಯ ಕಾರಣದಿಂದ ಕೂಡ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ ಉರ್ಫಿ ಜಾವೇದ್ (Urfi Javed) ಅವರಿಗೆ ಹೊಸ ಸಮಸ್ಯೆ ಎದುರಾಗಿದೆ. ತಮ್ಮ ಔಟ್‌ಫಿಟ್‌(Outfit)ಗಳ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುವುದು ಸಹಜ. ಅಷ್ಟೇ ಅಲ್ಲ. ಯಾರೇನೇ ಟ್ರೋಲ್ ಮಾಡಿದರು ಕೂಡ ಕ್ಯಾರೇ ಎನ್ನದೆ ಟ್ರೊಲ್ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್ ಕೊಡುತ್ತಾರೆ.

ಮುಂಬೈನಲ್ಲಿ ಅಪಾರ್ಟೆಂಟ್ ಬಾಡಿಗೆಗೆ ಪಡೆಯುವುದು ಸುಲಭದ ಮಾತಲ್ಲ. ಕೆಲವರು ಆರ್ಥಿಕ ಸಮಸ್ಯೆಯಿಂದ ಫ್ಲಾಟ್‌ಅನ್ನು ಹುಡುಕಲು ಪರದಾಡುತ್ತಾರೆ. ಮತ್ತೆ ಕೆಲ ಮಾಲೀಕರು ಕೆಲವು ಧರ್ಮಗಳನ್ನು ಅನುಸರಿಸುವ ಜನರಿಗೆ ಮಾತ್ರವೇ ತಮ್ಮ ಫ್ಲಾಟ್‌ಗಳನ್ನು ಬಾಡಿಗೆಗೆ ನೀಡುತ್ತಾರೆ. ಇದೀಗ, ಉರ್ಫಿ ಜಾವೇದ್ ಅವರಿಗೂ ಕೂಡ ಬಾಡಿಗೆ ಪಡೆಯುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಹೌದು!! ಈ ಕುರಿತು ಮಂಗಳವಾರ, ಉರ್ಫಿ ಜಾವೇದ್, ಟ್ವಿಟರ್‌ನಲ್ಲಿ ಈ ವಿಚಾರದ ಪ್ರಸ್ತಾಪ ಮಾಡಿದ್ದು, ಮುಂಬೈನಲ್ಲಿ ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆಯುವುದು ತನಗೆ ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಹಿಂದೂ ಮತ್ತು ಮುಸ್ಲಿಂ ಮಾಲೀಕರು ಉರ್ಫಿ ಗೆ ಅಪಾರ್ಟೆಂಟ್ ಬಾಡಿಗೆಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. “ತನ್ನ ಉಡುಗೆ ತೊಡುಗೆಯ ನೆಪಕ್ಕಾಗಿ ಮುಸ್ಲಿಂ ಮಾಲೀಕರು ತನಗೆ ಮನೆ ಬಾಡಿಗೆಗೆ ನೀಡಲು ಹಿಂದೇಟು ಹಾಕಿದರೆ, ಮತ್ತೊಂದೆಡೆ ತಾನು ಮುಸ್ಲಿಂ ಎಂಬ ಕಾರಣಕ್ಕಾಗಿ ಹಿಂದು ಮಾಲೀಕರು ನನಗೆ ಬಾಡಿಗೆ ನೀಡಲು ಬಯಸುವುದಿಲ್ಲ ಎಂದು ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಇದೆಲ್ಲದರ ನಡುವೆ ಕೆಲವು ಮಾಲೀಕರು ತನಗಿರುವ ರಾಜಕೀಯ ಬೆದರಿಕೆಗಳ ಕುರಿತಾಗಿ ಪ್ರಶ್ನೆ ಹಾಕುತ್ತಿದ್ದು, ಈ ದೆಸೆಯಲ್ಲಿ ಉರ್ಫಿ ತನಗೆ ಬಾಡಿಗೆ ಅಪಾರ್ಟೆಂಟ್ ಹುಡುಕುವುದು ಮುಂಬೈನಲ್ಲಿ ತುಂಬಾ ಕಷ್ಟವಾಗಿದೆ” ಎಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.