Home Entertainment Pooja Hegde: ತನ್ನ ದೇಹದ ಆ ಭಾಗ ಬದಲಾಯಿಸೋಕೆ ಸರ್ಜರಿಗೆ ರೆಡಿಯಾದ ಪೂಜಾ ಹೆಗ್ಡೆ, ಕೃತಿ...

Pooja Hegde: ತನ್ನ ದೇಹದ ಆ ಭಾಗ ಬದಲಾಯಿಸೋಕೆ ಸರ್ಜರಿಗೆ ರೆಡಿಯಾದ ಪೂಜಾ ಹೆಗ್ಡೆ, ಕೃತಿ ಶೆಟ್ಟಿ

Hindu neighbor gifts plot of land

Hindu neighbour gifts land to Muslim journalist

ಟಾಲಿವುಡ್ ನ ಟಾಪ್ ಹೀರೋಗಳ ಜೊತೆ ನಟಿಸಿ ತನ್ನದೇ ಛಾಪು ಮೂಡಿಸಿದ ಕಡಲಕುವರಿ ಕರಾವಳಿ ಬೆಡಗಿ ಗ್ಲಾಮರ್ ಬೆಡಗಿ ಪೂಜಾ ಹೆಗ್ಡೆ ತನ್ನ ಅಭಿನಯದಿಂದ ಅಭಿಮಾನಿಗಳ ಮನಸ್ಸಲ್ಲಿ ನೆಲೆಯೂರಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿದ ಪೂಜಾ ಈಗ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿದ್ದಾರೆ.

ಇಂಡಸ್ಟ್ರಿಗೆ ಬಂದ ಮೊದಲು ಹಲವಾರು ಹಿಟ್ ಸಿನಿಮಾಗಳನ್ನು ನೀಡಿದರೂ, ಇತ್ತೀಚಿನ ಹಲವಾರು ಸಿನಿಮಾಗಳು ಪ್ಲಾಪ್ ಆಗಿದ್ದು, ಅನಂತರ ಮಂಗಳೂರಿಗೆ ಬಂದು ದೇವರ ಮೊರೆ ಹೋಗಿದ್ದಾರೆ. ಹಾಗಾಗಿ ಈಗ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಪೂಜಾ ಹೆಚ್ಚು ಯೋಚಿಸುತ್ತಿದ್ದಾರೆ. ಅಲ್ಲದೇ ಈಗಾಗಲೇ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗುತ್ತಿರುವ ನೋವಿನಲ್ಲಿರುವ ಪೂಜಾ ಸರಣಿ ಸಿನಿಮಾಗಳಿಗೆ ಓಕೆ ಹೇಳುತ್ತಿದ್ದಾರೆ.

ಈಗ ಪೂಜಾ ಗ್ಲಾಮರ್ ಹೆಚ್ಚಿಸಿಕೊಳ್ಳಲು ದೇಹದ ಭಾಗದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಇದುವರೆಗೆ ಟಾಲಿವುಡ್ ನಲ್ಲಿ ಹಲವು ನಾಯಕಿಯರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈಗ ಪೂಜಾ ಹೆಗ್ಡೆ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಇದೇ ವಿಷಯ ಇದೀಗ ಬಾಲಿವುಡ್ ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ.

ಟಾಲಿವುಡ್‌ನ ಮತ್ತೊಬ್ಬ ಯುವ ನಾಯಕಿ ಕೃತಿ ಶೆಟ್ಟಿ ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ನಟಿಯ ತುಟಿಗಳು ದೊಡ್ಡದಾಗಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದೀಗ ಪೂಜಾ ಕೂಡ ಮೂಗಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಬಯಸಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪೂಜಾ ಚೆನ್ನಾಗಿಯೇ ಇದ್ದಾಳೆ ಮತ್ತೆ ಸರ್ಜರಿ ಯಾಕೆ ಎಂದು ಕೆಲ ಅಭಿಮಾನಿಗಳ ಪ್ರಶ್ನೆ. ಈ ಬಗ್ಗೆ ಪೂಜಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡಬೇಕಷ್ಟೆ.