Home Entertainment Thalapathy 69: ದಳಪತಿ ವಿಜಯ್‌ 69 ನೇ ಸಿನಿಮಾಗೆ ಕರಾವಳಿ ಬೆಡಗಿ ನಾಯಕಿ

Thalapathy 69: ದಳಪತಿ ವಿಜಯ್‌ 69 ನೇ ಸಿನಿಮಾಗೆ ಕರಾವಳಿ ಬೆಡಗಿ ನಾಯಕಿ

Hindu neighbor gifts plot of land

Hindu neighbour gifts land to Muslim journalist

Thalapathy Vijay: ದಳಪತಿ ವಿಜಯ್‌ ಅವರ ಗೋಟ್‌ ಸಿನಿಮಾ ಸಕ್ಸಸ್‌ಫುಲ್‌ ಆದ ನಂತರ ಇದೀಗ ಒಟಿಟಿ ರಿಲೀಸ್‌ಗೆ ರೆಡಿಯಾಗಿದೆ. ಇದೀಗ ಬಂದ ಮಾಹಿತಿ ಪ್ರಕಾರ ದಳಪತಿ ವಿಜಯ್‌ ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದ್ದು, Thalapathy 69′ ಸಿನಿಮಾದ ಕುರಿತು ಇದೀಗ ಫ್ಯಾನ್ಸ್‌ ಬಳಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಹೆಚ್‌. ವಿನೋದ್‌ (H.Vinoth) ಅವರು Thalapathy 69 ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ಇದರ ಪೋಸ್ಟರ್‌ ಇತ್ತಿಚೆಗಷ್ಟೇ ರಿಲೀಸ್‌ ಆಗಿತ್ತು. 2025 ಕ್ಕೆ ಪ್ರಜಾಪ್ರಭುತ್ವದ ಜ್ಯೋತಿ ಹೊತ್ತವರು ಬರುತ್ತಿದ್ದಾರೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.

ಈಗಾಗಲೇ ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಬಾಬಿ ಡಿಯೋಲ್‌ ಕಾಣಿಸಿಕೊಳ್ಳುತ್ತಿರುವುದು ಅಧಿಕೃತವಾಗಿದೆ. ಈ ಸಿನಿಮಾದ ನಾಯಕಿಯನ್ನು ಈ ಚಿತ್ರತಂಡ ಪರಿಚಯಿಸಿದೆ. ಕರಾವಳಿ ಚೆಲುವೆ, ಪೂಜಾ ಹೆಗ್ಡೆ Thalapathy 69 ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕೆವಿನ್‌ ಪ್ರೊಡಕ್ಷನ್ಸ್‌ ಪೂಜಾ ಹೆಗ್ಡೆ ಅವರ ಪೋಸ್ಟರ್‌ ಹಂಚಿಕೊಂಡು ಪಾತ್ರವರ್ಗವನ್ನು ಪರಿಚಯಿಸಿದೆ.

ಈ ಸಿನಿಮಾಗೆ ಅನಿರುದ್ಧ್‌ ರವಿಚಂದರ್‌ ಮ್ಯೂಸಿಕ್‌ ನೀಡಲಿದ್ದು, ದಳಪತಿ ವಿಜಯ್‌ ರಾಜಕೀಯ ಜೀವನಕ್ಕೆ ಹತ್ತಿರವಾಗುವ ಸಿನಿಮಾ ಇದು ಎಂದು ಹೇಳಲಾಗಿದೆ. ವಿಜಯ್‌, ಬಾಬಿ, ಪೂಜಾ ಜೊತೆಗೆ ಮೋಹನ್‌ಲಾಲ್‌ ಮತ್ತು ಮಮಿತಾಮಬೈಜು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.